Advertisement

J&K: 370ನೇ ವಿಧಿ ರದ್ದು ಬಳಿಕ ಕೈಗಾರಿಕಾ ಕ್ಷೇತ್ರದ ಬಂಡವಾಳ ಹೂಡಿಕೆ ಶೇ.86ರಷ್ಟು ಹೆಚ್ಚಳ!

05:49 PM Dec 07, 2023 | Team Udayavani |

ಜಮ್ಮು-ಕಾಶ್ಮೀರ: ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್‌ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿದ ನಂತರ 2023ನೇ ಸಾಲಿನ ಏಳು ತಿಂಗಳಲ್ಲಿ ಕೈಗಾರಿಕಾ ಕ್ಷೇತ್ರಕ್ಕೆ ಶೇ.86ರಷ್ಟು ಹೂಡಿಕೆ ಹರಿದು ಬಂದಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:Canada;ಥಿಯೇಟರ್ ಗಳಲ್ಲಿ ಹಿಂದಿ ಚಿತ್ರ ವೀಕ್ಷಿಸುತ್ತಿದ್ದವರನ್ನು ಗುರಿಯಾಗಿಸಿ ಸ್ಪ್ರೇ ದಾಳಿ!

2019ರಿಂದ ಈವರೆಗೆ ಜಮ್ಮು-ಕಾಶ್ಮೀರದ ಕೈಗಾರಿಕಾ ಕ್ಷೇತ್ರದ ಹೂಡಿಕೆ 5,319.35 ಕೋಟಿ ರೂಪಾಯಿಗೆ ತಲುಪಿದೆ ಎಂದು ಇಂಡಸ್ಟ್ರೀಸ್‌ & ಕಾಮರ್ಸ್‌ ಡಿಪಾರ್ಟ್‌ ಮೆಂಟ್‌ ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ವಿವರಿಸಿದೆ.

2019ರಲ್ಲಿ ಕೇಂದ್ರ ಸರ್ಕಾರ ಆರ್ಟಿಕಲ್‌ 370ನೇ ವಿಧಿಯನ್ನು ರದ್ದುಪಡಿಸಿದ ನಂತರ, 2019-20ರಲ್ಲಿ ಜಮ್ಮು-ಕಾಶ್ಮೀರದ ಕೈಗಾರಿಕಾ ಕ್ಷೇತ್ರ 296.64 ಕೋಟಿ ರೂಪಾಯಿ ಹೂಡಿಕೆಗೆ ಸಾಕ್ಷಿಯಾಗಿತ್ತು. ಇದೀಗ 2022-23ರ ಅವಧಿಯವರೆಗೆ ಕೈಗಾರಿಕಾ ಕ್ಷೇತ್ರ ಶೇ.85ರಷ್ಟು ಹೂಡಿಕೆಯನ್ನು ಕಂಡಿರುವುದಾಗಿ ವರದಿ ತಿಳಿಸಿದೆ.

2020-21ರಲ್ಲಿ 412.74 ಕೋಟಿ ರೂಪಾಯಿ, 2021-22ರಲ್ಲಿ 376.76 ಕೋಟಿ ರೂಪಾಯಿಯಷ್ಟು ಕೈಗಾರಿಕಾ ಕ್ಷೇತ್ರದಲ್ಲಿ ಹೂಡಿಕೆಯಾಗಿತ್ತು. 2022-23ರಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ 2,153 ಕೋಟಿ ರೂಪಾಯಿ ಹೂಡಿಕೆಯಾಗಿದೆ.

Advertisement

ಅಧಿಕೃತ ದಾಖಲೆಯಲ್ಲಿ ಉಲ್ಲೇಖಿಸಿದ ಮಾಹಿತಿ ಪ್ರಕಾರ, ಜಮ್ಮು-ಕಾಶ್ಮೀರ ಸರ್ಕಾರವು 88,915 ಕೋಟಿ ರೂಪಾಯಿಯ ಬಂಡವಾಳ ಹೂಡಿಕೆಯ ಪ್ರಸ್ತಾವನೆಯನ್ನು ಸ್ವೀಕರಿಸಿರುವುದಾಗಿ ತಿಳಿಸಿದ್ದು, ಈ ಮೂಲಕ 3.98 ಲಕ್ಷ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಬಹುದಾಗಿದೆ ಎಂದು ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next