Advertisement

GPS Anklet: ಜಾಮೀನಿನ ಮೇಲಿರುವ ಶಂಕಿತ ಉಗ್ರರ ಚಲನವಲನ ಪತ್ತೆಗೆ ಪೊಲೀಸರಿಂದ ನೂತನ ಕ್ರಮ

10:40 AM Nov 05, 2023 | Team Udayavani |

ಶ್ರೀನಗರ : ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಶಂಕಿತ ಉಗ್ರರ ಚಲನವಲನ ಪತ್ತೆಗೆ ಜಮ್ಮು ಕಾಶ್ಮೀರ ಪೊಲೀಸರು ನೂತನ ಕ್ರಮವೊಂದನ್ನು ಜಾರಿಗೆ ತಂದಿದ್ದಾರೆ.

Advertisement

ಜಮ್ಮುವಿನಲ್ಲಿರುವ ವಿಶೇಷ ರಾಷ್ಟ್ರೀಯ ತನಿಖಾ ನ್ಯಾಯಾಲಯವು ಜಾಮೀನಿನ ಮೇಲಿರುವ ಭಯೋತ್ಪಾದಕ ಆರೋಪಿಯ ಚಲನವಲನವನ್ನು ಪತ್ತೆಹಚ್ಚಲು ಜಿಪಿಎಸ್ ಟ್ರ್ಯಾಕರ್ ಬಳಸುವಂತೆ ಜಮ್ಮು ಕಾಶ್ಮೀರ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ. ಅದರಂತೆ ಜಾಮೀನಿನ ಮೇಲಿರುವ ಶಂಕಿತ ಭಯೋತ್ಪಾದಕನ ಕಾಲಿಗೆ ಬಳೆಯ ರೀತಿಯಂತಹ ಜಿಪಿಎಸ್ ಸಾಧನವನ್ನು ಅಳವಡಿಸಲಾಗುತ್ತದೆ ಇದರಿಂದ ವ್ಯಕ್ತಿಯ ಚಲನವಲನವನ್ನು ಪತ್ತೆ ಹಚ್ಚಲು ಸುಲಭವಾಗುತ್ತದೆ ಎಂದು ಹೇಳಲಾಗುತ್ತಿದೆ.

ಜಾಮೀನು, ಪೆರೋಲ್ ಮತ್ತು ಗೃಹಬಂಧನದಲ್ಲಿ ಆರೋಪಿಗಳ ಚಲನವಲನವನ್ನು ಪತ್ತೆಹಚ್ಚಲು ಅಷ್ಟುಮಾತ್ರವಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ಜೈಲು ದಟ್ಟಣೆಯನ್ನು ಕಡಿಮೆ ಮಾಡಲು ಈ ಸಾಧನವನ್ನು ಈಗಾಗಲೇ ಪಾಶ್ಚಿಮಾತ್ಯ ದೇಶಗಳಾದ ಅಮೇರಿಕ, ಯುಕೆ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗಳಲ್ಲಿ ಬಳಸಲಾಗುತ್ತಿದೆ ಎಂದು ಹೇಳಲಾಗಿದ್ದು ಇದೀಗ ಭಾರತದಲ್ಲೂ ಬಳಸಲು ಚಿಂತನೆ ನಡೆಸಿದ್ದು ಅದರ ಮೊದಲ ಭಾಗವಾಗಿ ಜಮ್ಮು ಕಾಶ್ಮೀರದಲ್ಲಿ ಬಳಕೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇಂತಹ ಸಾಧನವನ್ನು ಪರಿಚಯಿಸಿದ ದೇಶದ ಮೊದಲ ಪೊಲೀಸ್ ಇಲಾಖೆಯಾದ ಜಮ್ಮು ಕಾಶ್ಮೀರ ಪೊಲೀಸರಿಗೆ ಸಲ್ಲುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜಮ್ಮುವಿನ ವಿಶೇಷ ಎನ್‌ಐಎ ನ್ಯಾಯಾಲಯವು ಭಯೋತ್ಪಾದಕ ಆರೋಪಿಯ ಮೇಲೆ ನಿಗಾ ಇಡಲು ಜಿಪಿಎಸ್ ಟ್ರ್ಯಾಕರ್ ಆಂಕ್ಲೆಟ್ ಅನ್ನು ಅಳವಡಿಸಲು ಪೊಲೀಸರಿಗೆ ನಿರ್ದೇಶನ ನೀಡಿದ ನಿಟ್ಟಿನಲ್ಲಿ ಈ ಕ್ರಮವನ್ನು ಅನುಸರಿಸಲಾಗಿದೆ ಎಂದು ಹೇಳಲಾಗಿದೆ.

Advertisement

ಆದರೆ ಇದರ ಸಾಧಕ ಬಾಧಕಗಳು ಇನ್ನಷ್ಟೇ ಗೊತ್ತಾಗಬೇಕಿದೆ.

ಇದನ್ನೂ ಓದಿ: ರಕ್ತ ವಾಂತಿ ಮಾಡಿ ಆಸ್ಪತ್ರೆಗೆ ದಾಖಲಾದ 7 ವರ್ಷದ ಬಾಲಕನ ಶ್ವಾಸಕೋಶದಲ್ಲಿ ಸೂಜಿ ಪತ್ತೆ!

Advertisement

Udayavani is now on Telegram. Click here to join our channel and stay updated with the latest news.

Next