Advertisement

Jammu & Kashmir police: 30 ವರ್ಷಗಳಿಂದ ತಲೆಮರೆಸಿಕೊಂಡು ಉದ್ಯೋಗದಲ್ಲಿದ್ದ 8 ಉಗ್ರರ ಬಂಧನ

04:57 PM Aug 31, 2023 | Team Udayavani |

ನವದೆಹಲಿ: ಸುಮಾರು 30 ವರ್ಷಗಳ ಕಾಲ ಬಂಧನದಿಂದ ತಪ್ಪಿಸಿಕೊಂಡು, ತಲೆಮರೆಸಿಕೊಂಡಿದ್ದ ಎಂಟು ಭಯೋತ್ಪಾದಕರನ್ನು ಜಮ್ಮು-ಕಾಶ್ಮೀರದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:BJP; ನಾನೇ ಲೀಡರ್ ಎಂಬ ಸಂದೇಶ ರವಾನಿಸಲು ಬಿ.ಎಲ್‌.ಸಂತೋಷ್‌ ಸಭೆ: ಕಾಂಗ್ರೆಸ್ ವ್ಯಂಗ್ಯ

ಬಂಧಿತರಾದ ಉಗ್ರರು ಕೆಲವರು ಸರ್ಕಾರಿ ಉದ್ಯೋಗದಲ್ಲಿದ್ದು, ಕೆಲವರು ಸ್ವಂತ ಉದ್ಯೋಗ ಮಾಡುತ್ತಿದ್ದು, ಇನ್ನುಳಿದವರು ನ್ಯಾಯಾಲಯದಲ್ಲಿ ನೌಕರರಾಗಿರುವುದು ಬೆಳಕಿಗೆ ಬಂದಿರುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿಸಲ್ಪಟ್ಟ ಭಯೋತ್ಪಾದಕರನ್ನು ಅದಿಲ್‌ ಫಾರೂಕ್‌ ಫರೀದಿ (ಸರ್ಕಾರಿ ಉದ್ಯೋಗಿ), ಮೊಹಮ್ಮದ್‌ ಇಕ್ಬಾಲ್‌, ಮುಜಾಹಿದ್‌ ಹುಸೈನ್‌, ತಾರಿಖ್‌ ಹುಸೈನ್‌, ಇಶ್ತಿಯಾಖ್‌ ಅಹ್ಮದ್‌ ದೇವ್‌, ಅಜಾದ್‌ ಅಹ್ಮದ್‌, ಜಮೀಲ್‌ ಅಹ್ಮದ್‌ ಮತ್ತು ಇಶ್ಪಾಕ್‌ ಅಹ್ಮದ್‌ ಎಂದು ಗುರುತಿಸಲಾಗಿದ್ದು, ಇವರೆಲ್ಲಾ ದೋಡಾದ ಕೋರ್ಟ್‌ ಆವರಣದಲ್ಲಿ ರೈಟರ್‌ (ಅರ್ಜಿ ಬರವಣಿಗೆ ಕೆಲಸ) ಆಗಿ ಕಾರ್ಯನಿರ್ವಹಿಸುತ್ತಿದ್ದರು. ಬಂಧಿತರು ಕೊಲೆ, ಅಪಹರಣ ಸೇರಿದಂತೆ ಹಲವಾರು ಆರೋಪಗಳನ್ನು ಎದುರಿಸುತ್ತಿರುವುದಾಗಿ ವರದಿ ವಿವರಿಸಿದೆ.

ರಾಜ್ಯ ತನಿಖಾ ದಳ (SIA) ಮತ್ತು ಜಮ್ಮು-ಕಾಶ್ಮೀರ ಪೊಲೀಸ್‌ ಇಲಾಖೆಯ ಸಿಐಡಿ ನೇತೃತ್ವದಲ್ಲಿ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ತಲೆಮರೆಸಿಕೊಂಡಿದ್ದ ಭಯೋತ್ಪಾದಕರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿರುವುದಾಗಿ ವರದಿ ತಿಳಿಸಿದೆ.

Advertisement

ಎಂಟು ಮಂದಿ ಭಯೋತ್ಪಾದಕರು ಕಾನೂನು ಕುಣಿಕೆಯಿಂದ ದಶಕಗಳ ಕಾಲ ತಪ್ಪಿಸಿಕೊಂಡಿದ್ದು, ಕೆಲವು ಸಮಯದ ನಂತರ ತಮ್ಮ, ತಮ್ಮ ಹಳ್ಳಿಗಳಲ್ಲಿ ಎಂದಿನಂತೆ ಜೀವನ ನಡೆಸುತ್ತಿದ್ದರು ಎಂದು ಮೂಲಗಳು ಹೇಳಿವೆ.

ಇಲ್ಲಿಯವರೆಗೆ ರಾಜ್ಯ ತನಿಖಾ ದಳ 327 ಟಾಡಾ/ಭಯೋತ್ಪಾದನಾ ನಿಗ್ರಹ ತಡೆ ಕಾಯ್ದೆ(POTA) ಪ್ರಕರಣಗಳ ಆರೋಪಿಗಳನ್ನು ಪರಿಶೀಲಿಸಿದೆ. ಇದರಲ್ಲಿ 369 ಆರೋಪಿಗಳನ್ನು (ಜಮ್ಮು 215, ಕಾಶ್ಮೀರ 154) ಎಸ್‌ ಐಎ ಪರಿಶೀಲಿಸಿ ಗುರುತಿಸಿದೆ. ಒಟ್ಟು ಇಂತಹ ತಲೆಮರೆಸಿಕೊಂಡ 734 ಪ್ರಕರಣ(ಜಮ್ಮು 317-ಕಾಶ್ಮೀರ 417)ಗಳು ಇದ್ದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಪರಿಶೀಲಿಸಲ್ಪಟ್ಟ 369 ತಲೆಮರೆಸಿಕೊಂಡ ಆರೋಪಿಗಳಲ್ಲಿ 127 ಉಗ್ರರನ್ನು ಇನ್ನೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ. 80 ಮಂದಿ ಮೃತಪಟ್ಟಿದ್ದು, 45 ಭಯೋತ್ಪಾದಕರು ಪಾಕಿಸ್ತಾನ ಅಥವಾ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ನೆಲೆಸಿದ್ದು, ನಾಲ್ವರು ಜೈಲಿನಲ್ಲಿದ್ದಿರುವುದಾಗಿ ವರದಿ ವಿವರಿಸಿದೆ.

ಈ ಭಯೋತ್ಪಾದಕರು ಕಾನೂನಿನಿಂದ ಹೇಗೆ ನುಣುಚಿಕೊಂಡರು ಹಾಗೂ ಇಷ್ಟು ದೀರ್ಘಕಾಲ ಪತ್ತೆಯಾಗದೇ ಜೀವನ ನಡೆಸಿದರು ಎಂಬ ಬಗ್ಗೆ ರಾಜ್ಯ ತನಿಖಾ ಸಂಸ್ಥೆ ತನಿಖೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next