Advertisement

AFSPA ತೆರವಿಲ್ಲ; ಭಾರತೀಯ ಸೇನೆ ಅತ್ಯಂತ ಶಿಸ್ತುಬದ್ಧ: ಮೆಹಬೂಬ

11:23 AM Feb 03, 2018 | Team Udayavani |

ಜಮ್ಮು : ಕಾಶ್ಮೀರದಲ್ಲಿ ಜಾರಿಯಲ್ಲಿರುವ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯಿದೆ (AFSPA)ಯನ್ನು ಈಗಿನ ಸ್ಥಿತಿಯಲ್ಲಿ ತೆರವುಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಹೇಳಿದ್ದಾರೆ.

Advertisement

ಭಾರತೀಯ ಸೇನೆಯು ವಿಶ್ವದಲ್ಲೇ ಅತ್ಯಂತ ಶಿಸ್ತುಬದ್ಧ ಸೇನೆ ಎನಿಸಿಕೊಂಡಿದ್ದು ಜಮ್ಮು ಕಾಶ್ಮೀರದಲ್ಲಿ ಅದು ತನ್ನ ಹೊಣೆಗಾರಿಕೆಯನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸುತ್ತಿದೆ ಎಂದವರು ಹೇಳಿದರು. 

ಕಾಶ್ಮೀರ ಕಣಿವೆಯಲ್ಲಿನ ಸ್ಥಿತಿ ಹದಗೆಟ್ಟಿರುವುದರಿಂದಲೇ ಸೇನೆಯ ಉಪಸ್ಥಿತಿ ಹೆಚ್ಚಿದೆ ಮತ್ತು ಅದು ಅಗತ್ಯವೂ ಇದೆ ಎಂದವರು ಹೇಳಿದರು. 

ಸಿಪಿಐಎಂ ಶಾಸಕ ಎಂ ವೈ ತಾರಿಗಾಮಿ ಅವರು ಕಾಶ್ಮೀರದಲ್ಲಿನ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯಿದೆ ಇನ್ನೂ ಜಾರಿಯಲ್ಲಿರುವ ಬಗ್ಗೆ ಆಕ್ಷೇಪ ಎತ್ತಿದಾಗ ಅದಕ್ಕೆ ಉತ್ತರವಾಗಿ ಮೆಹಬೂಬ ಅವರು “ಈಗಿನ ಪರಿಸ್ಥಿತಿಯಲ್ಲಿ ಆ ಕಾಯಿದೆಯನ್ನು ತೆರವುಗೊಳಿಸಲು ಸಾಧ್ಯವೇ ? ಹಾಗೆ ಮಾಡುವುದು ವಸ್ತುಸ್ಥಿತಿಗೆ ಅನುಗುಣವಾಗಿ ಇರುವುದೇ ? ಸೇನೆಯ ಮೇಲೆ ಕಲ್ಲೆಸೆಯುವುದು, ಉಗ್ರರ ಚಟುವಟಿಕೆ ಹೆಚ್ಚುವುದು ಇತ್ಯಾದಿಗಳಿಂದಾಗಿ ನಾವು ಜಮ್ಮು ಕಾಶ್ಮೀರದಲ್ಲಿ ಹೆಚ್ಚೆಚ್ಚು ಸೇನೆ ಮತ್ತು ಪೊಲೀಸರ ಉಪಸ್ಥಿತಿಯನ್ನು ಕಾಣಲೇಬೇಕಾಗುತ್ತದೆ. ಅದು ನಡೆಯದಿರಲಿ ಎಂಬುದೇ ನಮ್ಮೆಲ್ಲರ ಆಶಯವಾಗಿದೆ’ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next