Advertisement

J&K ; ಬಿಜೆಪಿ ವಿರುದ್ಧ ಜಾತ್ಯತೀತ ಸರಕಾರ ರಚಿಸಲು ಒಂದಾಗುತ್ತೇವೆ ಎಂದ ಪಿಡಿಪಿ

05:53 PM Oct 06, 2024 | Team Udayavani |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ಮುಗಿದ ಬಳಿಕ ಕೆಲವು ಸಮೀಕ್ಷೆಗಳು ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಸಾಧ್ಯತೆಗಳು ಇವೆ ಎಂದಿರುವ ಬೆಲ್ಲಲ್ಲೇ ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ ಯು(PDP) ”ಬಿಜೆಪಿ ವಿರುದ್ಧ ಜಾತ್ಯತೀತ ಸರಕಾರ ರಚಿಸಲು ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಕೂಟದೊಂದಿಗೆ ಕೈಜೋಡಿಸಲು ಸಿದ್ದ” ಎಂದು ಹೇಳಿಕೆ ನೀಡಿದೆ.

Advertisement

ನಿಕಟ ಸ್ಪರ್ಧೆ ಇರುವ ಸೂಚನೆ ಬೆನ್ನಲ್ಲೇ , ಲಾಲ್ ಚೌಕ್‌ನ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (PDP) ಅಭ್ಯರ್ಥಿ ಜುಹೈಬ್ ಯೂಸುಫ್ ಮಿರ್ ಮಾತನಾಡಿ, ಬಿಜೆಪಿಯನ್ನು(BJP) ಅಧಿಕಾರಕ್ಕೇರುವುದರಿಂದ ತಡೆಯಲು ನಮ್ಮ ಪಕ್ಷ ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ (NC-Congress) ಮೈತ್ರಿಯನ್ನು ಬೆಂಬಲಿಸಬಹುದು. ಕಾಶ್ಮೀರದ ವಿಶಿಷ್ಟ ಗುರುತನ್ನು ಕಾಪಾಡಲು ಯಾವುದೇ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಪಕ್ಷ ಸಿದ್ಧವಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಜಾತ್ಯತೀತ ಸರ್ಕಾರವನ್ನು ರಚಿಸುವಲ್ಲಿ ಪಿಡಿಪಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು ವಿಶ್ವಾಸವಿದೆ’ ಎಂದು ಹೇಳಿದರು.

This Is A Great Thing.. ಎಂದ ಫಾರೂಕ್ ಅಬ್ದುಲ್ಲಾ

ಪಿಡಿಪಿ ನಾಯಕನ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ NC ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, ”ಪಿಡಿಪಿ ನಮ್ಮೊಂದಿಗೆ ಸೇರಲು ಸಿದ್ಧವಾಗಿರುವುದು “ದೊಡ್ಡ ವಿಷಯ” ಎಂದು ಭಾನುವಾರ ಹೇಳಿದ್ದಾರೆ.

ಪಿಡಿಪಿ ಅವರಿಗೆ ಅಭಿನಂದನೆಗಳು, ಇದು ದೊಡ್ಡ ವಿಷಯ, ನಾವೆಲ್ಲರೂ ಒಂದೇ ಹಾದಿಯಲ್ಲಿದ್ದೇವೆ, ನಾವು ದ್ವೇಷವನ್ನು ಕೊನೆಗೊಳಿಸಬೇಕು ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ಒಗ್ಗೂಡಿಸಬೇಕಾಗಿದೆ” ಎಂದರು.

Advertisement

ಸಮೀಕ್ಷೆಯಲ್ಲೇನಿದೆ?

ಈ ಬಾರಿ ಕಾಂಗ್ರೆಸ್‌- ಎನ್‌ಸಿ ಮೈತ್ರಿಯಲ್ಲಿ ಸ್ಪರ್ಧಿಸಿ­ದ್ದರೆ, ಬಿಜೆಪಿ ಹಾಗೂ ಪಿಡಿಪಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಕಾಂಗ್ರೆಸ್‌ಗೆ ಸಿ ವೋಟರ್‌ (40-48), ಪೀಪಲ್ಸ್‌ ಪಲ್ಸ್‌ (46-50) ಬಹುಮತ ಸಿಗಬಹುದು ಎಂದಿವೆ. ಉಳಿದಂತೆ ದೈನಿಕ್‌ ಭಾಸ್ಕರ್‌ 35-40, ಗಲಿಸ್ಥಾನ್‌ ನ್ಯೂಸ್‌ 31-36, ಆ್ಯಕ್ಸಿಸ್‌ ಮೈ ಇಂಡಿಯಾ 35-45 ಸ್ಥಾನಗಳಲ್ಲಿ ಗೆಲ್ಲಬಹುದು ಎಂದಿವೆ. ಬಿಜೆಪಿ ಸಿ ವೋಟರ್‌ ಪ್ರಕಾರ 27-32, ದೈನಿಕ್‌ ಭಾಸ್ಕರ್‌ ಪ್ರಕಾರ 22-26, ಗಲಿಸ್ಥಾನ್‌ ನ್ಯೂಸ್‌ 28-30, ಪೀಪಲ್ಸ್‌ ಪಲ್ಸ್‌ 23-27 ಮತ್ತು ಆ್ಯಕ್ಸಿಸ್‌ ಮೈ ಇಂಡಿಯಾ ಪ್ರಕಾರ 23-27 ಸ್ಥಾನ ದೊರೆಯಬಹುದು ಎನ್ನಲಾಗಿದೆ.

ನಿಜವಾಗಿದ್ದ 2014ರ ಸಮೀಕ್ಷೆ
2014ರಲ್ಲಿ ಪ್ರಕಟವಾಗಿದ್ದ ಚುನಾವಣೋತ್ತರ ಸಮೀಕ್ಷೆಗಳು ನಿಜವಾಗಿದ್ದವು. ಪಿಡಿಪಿ ಅಧಿಕಾರ ಹಿಡಿಯಲಿದೆ ಎಂದು ಬಹಳಷ್ಟು ಸಮೀಕ್ಷೆಗಳು ಹೇಳಿದ್ದವು. ಆ ಚುನಾವಣೆಯಲ್ಲಿ ಪಿಡಿಪಿ 28, ಬಿಜೆಪಿ 25, ಎನ್‌ಸಿ 15, ಕಾಂಗ್ರೆಸ್‌ 12ರಲ್ಲಿ ಜಯ ಗಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next