Advertisement

ಜೆಜೆಎಂ 1.50 ಕೋಟಿ ಕಾಮಗಾರಿಗೆ ಶಂಕುಸ್ಥಾಪನೆ

02:09 PM Sep 11, 2022 | Team Udayavani |

ಶಹಾಪುರ: ಜಲ ಜೀವನ ಮಷಿನ್‌ ಯೋಜನೆಯಡಿ ಒಂದೂವರೆ ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಇದರಿಂದ ಗ್ರಾಮದ 532 ಮನೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ತಿಳಿಸಿದರು.

Advertisement

ತಾಲೂಕಿನ ಹತ್ತಿಗೂಡೂರ ಗ್ರಾಮದಲ್ಲಿ ಒಂದೂವರೆ ಕೋಟಿ ವೆಚ್ಚದ ಜಲ ಜೀವನ ಮಷಿನ್‌ ಯೋಜನೆಯಡಿ ಗ್ರಾಮದ ಎಲ್ಲ ಮನೆಗಳಿಗೆ ಕುಡಿಯುವ ನೀರು ಪೂರೈಸುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಜಲ ಜೀವನ ಮಷಿನ್‌ ಯೋಜನೆ ಪ್ರತಿಯೊಬ್ಬರ ಮನೆಗೂ ಕುಡಿಯುವ ನೀರು ಪೂರೈಸುವ ವ್ಯವಸ್ಥೆಯಾಗಿದೆ. ಮನೆ ಮನೆಗೆ ಪೈಪ್‌ಲೈನ್‌ ಮೂಲಕ ಸಮರ್ಪಕ ನೀರೊದಗಿಸುವ ಕೆಲಸವಾಗಿದೆ. ಹೀಗಾಗಿ ಈ ಕಾಮಗಾರಿ ಅಚ್ಚುಕಟ್ಟಾಗಿ ನಿರ್ಮಿಸಿದರೆ ಗ್ರಾಮದ ಯಾರೊಬ್ಬರ ಮನೆಗೂ ನೀರಿನ ಅಭಾವ ಇರುವುದಿಲ್ಲ. ಗುತ್ತಿಗೆದಾರರು ಕಾಮಗಾರಿಯನ್ನು ಆದಷ್ಟು ಬೇಗ ಮತ್ತು ಗುಣಮಟ್ಟವಾಗಿ ಮುಗಿಸಿಕೊಡಬೇಕೆಂದು ಕಿವಿ ಮಾತು ಹೇಳಿದರು.

ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ಟಣಿಕೆದಾರ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷೆ ಸುಧಾ ಶರಣಗೌಡ ಕೊಂಗಂಡಿ, ಮರಿಗೌಡ ಹುಲಕಲ್‌, ಶಿವಮಹಾಂತಪ್ಪ ಚಂದಾಪುರ, ಜಿಪಂ ಮಾಜಿ ಸದಸ್ಯ ಸಿದ್ಧಲಿಂಗರಡ್ಡಿ ಸಾಹು, ತಾಪಂ ಮಾಜಿ ಅಧ್ಯಕ್ಷ ಬಸವಂತರಡ್ಡಿ, ಮಲ್ಲಯ್ಯ ಹೊಸಮನಿ, ಎಇಇ ರಾಹುಲ್‌ ಕಾಂಬಳೆ, ಜೆಇ ಚನ್ನವೀರಯ್ಯ, ಅಕ್ಕನಾಗಮ್ಮ, ಗುರಪ್ಪ ಸುರಪುರ, ಶರಣಪ್ಪ ಟಣಕೆದಾರ, ಭೀಮರಾಯ ಹೊಸಮನಿ, ಅಯ್ಯಣ್ಣ ಮಹಾಮನಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next