Advertisement

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

04:34 PM Nov 06, 2023 | Team Udayavani |

ಇಂದು ಇಂಟರ್ನೆಟ್ ವ್ಯವಸ್ಥೆಯ ಮೇಲೆಯೇ ಇಡೀ ವಿಶ್ವ ಓಡುತ್ತಿದೆ. ಇತ್ತೀಚಿನ ಕೆಲವು ವರ್ಷಗಳಿಂದ ಭಾರತವೂ ಈ ಇಂಟರ್ನೆಟ್ ಓಟದಲ್ಲಿ ವಿಶ್ವಕ್ಕೆ ಸೆಡ್ಡು ಹೊಡೆಯುತ್ತಿದೆ. ದೇಶದ ಪ್ರತಿ ಮೂಲೆಗೂ ಇಂಟರ್ನೆಟ್ ವ್ಯವಸ್ಥೆಯನ್ನು ತಲುಪಿಸುವ ನಿಟ್ಟಿನಲ್ಲಿ ಭಾರತ ಟೊಂಕ ಕಟ್ಟಿ ನಿಂತಿದೆ. ವಿಶೇಷವೇನೆಂದರೆ ಭಾರತದ ಈ ಓಟಕ್ಕೆ ದೈತ್ಯ ಟೆಲಿಕಾಂ ಕಂಪೆನಿಗಳು ಸಾಥ್‌ ನೀಡಿವೆ. ಈ ಮೊದಲು ಭಾರತದ ಇಂಟರ್ನೆಟ್ ವ್ಯವಸ್ಥೆಯ ದಿಕ್ಕನ್ನೇ ಬದಲಾಯಿಸಿದ್ದ ರಿಲಯನ್ಸ್‌ ಜಿಯೋ ಭಾರತದಲ್ಲಿ ಮತ್ತೊಂದು ಮಹತ್ತರ ಕ್ರಾಂತಿಗೆ ಮುನ್ನಡಿಯಿಟ್ಟಿದೆ.

Advertisement

ಭಾರತದಲ್ಲಿ ಇಂಟರ್ನೆಟ್ ಕ್ರಾಂತಿ- ಇದು ʻಜಿಯೋಸ್ಪೇಸ್‌ ಫೈಬರ್‌ʼ

ಭಾರತದಲ್ಲಿ ಸದ್ಯಕ್ಕೆ ಮಾನವ ಪ್ರವೇಶಿಸಲಾಗದೇ ಇರುವಂತಹಾ ಪ್ರದೇಶಗಳಲ್ಲಿಯೂ ಅತ್ಯಂತ ವೇಗದ ಅಂತರ್ಜಾಲ ಸೇವೆಯನ್ನು ಒದಗಿಸುವ ಉದ್ದೇಶದಿಂದ ರಿಲಯನ್ಸ್‌ ಜಿಯೋ ಭಾರತದ ಮೊದಲ ಸ್ಯಾಟಲೈಟ್‌ ಆಧಾರಿತ ಗಿಗಾಫೈಬರ್‌ ಸೇವೆಯನ್ನು ಯಶಸ್ವಿಯಾಗಿ ಪ್ರದರ್ಶಿಸಿದೆ.

ಇತ್ತೀಚೆಗೆ ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ ಇಂಡಿಯಾ ಮೊಬೈಲ್‌ ಕಾಂಗ್ರೆಸ್‌ (IMC 2023) ಕಾರ್ಯಕ್ರಮದಲ್ಲಿ ರಿಲಯನ್ಸ್‌ ಜಿಯೋ ಇನ್ಫೋಕಾಮ್‌ ಲಿಮಿಟೆಡ್‌ನಿಂದ ಭಾರತದ ಮೊದಲ ಸ್ಯಾಟೆಲೈಟ್‌ ಆಧಾರಿತ ಗಿಗಾ ಫೈಬರ್‌ ಸೇವೆ ʻಜಿಯೋ ಸ್ಪೇಸ್‌ ಫೈಬರ್‌ʼನ್ನು ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ಪ್ರದರ್ಶಿಸಲಾಯಿತು.

Advertisement

ಭಾರತದಲ್ಲಿ ಮತ್ತೊಂದು ಇಂಟರ್‌ನೆಟ್‌ ಕ್ರಾಂತಿಗೆ ಜಿಯೋ ಮುನ್ನುಡಿ

ಭಾರತದಲ್ಲಿ ಸ್ಯಾಟೆಲೈಟ್‌ ಆಧಾರಿತ ಅಂತರ್ಜಾಲವನ್ನು ಆರಂಭಿಸಲು ಮುಖೇಶ್‌ ಅಂಬಾನಿ ಒಡೆತನದ ಜಿಯೋ ಸಂಸ್ಥೆ ಲಕ್ಸೆಂಬರ್ಗ್‌ ಮೂಲದ SES ನೊಂದಿಗೆ ಪಾಲುದಾರಿಕೆ ಹೊಂದಿದೆ. ವಿಶೇಷವೇನೆಂದರೆ ಇದು ಇತ್ತೀಚಿನ ತಂತ್ರಜ್ಙಾನಗಳನ್ನು ಬಳಸಿಕೊಂಡು ಬಾಹ್ಯಾಕಾಶದಿಂದ ಗಿಗಾಬಿಟ್‌, ಫೈಬರ್‌ ರೀತಿಯ ಸೇವೆಗಳನ್ನು ತಲುಪಿಸುವ ಸಾಮರ್ಥ್ಯವನ್ನು ಹೊಂದಿರುವ ವಿಶ್ವದ ಏಕೈಕ MEO ಸಮೂಹವಾಗಿದೆ.

ಎಲ್ಲರಿಗೂ ಇಂಟರ್ನೆಟ್‌, ಎಲ್ಲೆಡೆಯೂ ಇಂಟರ್ನೆಟ್‌..!

ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶಗಳ ಪೈಕಿ ಅಗ್ರಸ್ಥಾನದಲ್ಲಿರುವ ಭಾರತದ ಹಳ್ಳಿ ಹಳ್ಳಿಗೂ ಇಂಟರ್ನೆಟ್‌ ಸೌಲಭ್ಯ ದೊರಕಿಸಿಕೊಡುವಲ್ಲಿ ರಿಲಯನ್ಸ್‌ ಜಿಯೋ ಟೊಂಕ ಕಟ್ಟಿ ನಿಂತಿದೆ. ಜಿಯೋ ಇಂಟರ್ನೆಟ್‌ ವ್ಯವಸ್ಥೆಯನ್ನು ಕೇವಲ ತನ್ನ ಉದ್ಯಮ ಬಲವರ್ಧನೆಗಾಗಿ ಮಾತ್ರವಲ್ಲದೆ, ಶಿಕ್ಷಣ, ಆರೋಗ್ಯ, ಮನೋರಂಜನೆ, ಸರ್ಕಾರದ ಸೇವೆಗಳನ್ನು ಅತಿ ಸುಲಭದಲ್ಲಿ ಗ್ರಾಮೀಣ ಪ್ರದೇಶದ ಜನರಿಗೂ ಲಭ್ಯವಾಗುವಂತೆ ಮಾಡುತ್ತಿರುವುದು ದೇಶದ ಆಭಿವೃದ್ಧಿಯ ವೇಗವನ್ನೂ ಹೆಚ್ಚಿಸುತ್ತಿದೆ.

ಜಿಯೋಸ್ಪೇಸ್‌ ಫೈಬರ್‌ ಸ್ಯಾಟಲೈಟ್‌ ಮೂಲಕ ಇಂಟರ್ನೆಟ್‌ ಸೇವೆಯನ್ನು ಒದಗಿಸಲಿದೆಯಾದರೂ ದೇಶದ ಉದ್ದಗಲಕ್ಕೂ ಹೆಚ್ಚು ಕೈಗೆಟಕುವ ದರದಲ್ಲಿ ಸೇವೆ ಲಭ್ಯವಾಗಲಿದೆ. ರಿಲಯನ್ಸ್ ಜಿಯೋ ಈಗಲೇ ಬರೋಬ್ಬರಿ 45 ಕೋಟಿಗೂ ಹೆಚ್ಚು ಭಾರತೀಯರಿಗೆ ಇಂಟರ್ನೆಟ್‌ ಸೇವೆಗಳನ್ನು ನೀಡುತ್ತಿದೆ ಎಂಬುದು ಬಹಳ ಜನರಿಗೆ ತಿಳಿದಿರದ ಸಂಗತಿಯೂ ಹೌದು.!

ಸ್ಯಾಟಲೈಟ್ ನೆಟ್‌ವರ್ಕ್ ಮೊಬೈಲ್ ಬ್ಯಾಕ್‌ಹಾಲ್‌ಗೆ ಹೆಚ್ಚುವರಿ ಸಾಮರ್ಥ್ಯವನ್ನು ನೀಡುತ್ತದೆ. ಇದು ದೇಶದ ಸೂಕ್ಷ್ಮ ಪ್ರದೇಶಗಳಲ್ಲೂ ಜಿಯೋ ಟ್ರೂ 5G ದೊರೆಯುವಲ್ಲಿ ಮತ್ತು ಇಂಟರ್ನೆಟ್‌ ವೇಗವನ್ನು ಮತ್ತಷ್ಟು ಹೆಚ್ಚಿಸುವಲ್ಲಿಪ್ರಮುಖ ಪಾತ್ರ ವಹಿಸುತ್ತದೆ.

ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಭಾರತದ ಪ್ರತಿ ಮನೆಯೂ ಡಿಜಿಟಲ್  ಸೇವೆಗಳಿಗೆ ಒಗ್ಗಿಕೊಳ್ಳುವುದು, ಇದಕ್ಕಾಗಿ ಇಂಟರ್ನೆಟ್‌ ವ್ಯವಸ್ಥೆಯನ್ನು ವೇಗಗೊಳಿಸುವುದು ಜಿಯೋದ ಉದ್ದೇಶವಾಗಿದೆ. ಹೀಗಾಗಿ ಜಿಯೋ ತನ್ನ ಬ್ರಾಡ್‌ಬ್ಯಾಂಡ್ ಸೇವೆಗಳಾದ ಜಿಯೋ ಫೈಬರ್‌ ಮತ್ತು ಜಿಯೋ ಏರ್‌ ಫೈಬರ್‌ಗೆ ಜಿಯೋ ಸ್ಪೇಸ್‌ ಫೈಬರ್‌ ಅನ್ನು ಸೇರಿಸಿದೆ.

ಭಾರತದ ಈ ಸ್ಥಳಗಳಲ್ಲಿ ಈಗಾಗಲೇ ಇದೆ ಜಿಯೋಸ್ಪೇಸ್‌ಫೈಬರ್ ಸೇವೆ..!

ಭಾರತದಲ್ಲಿ ಗುಜರಾತ್‌ನ ಗಿರ್‌, ಛತ್ತೀಸ್‌ಗಢದ ಕೊರ್ಬಾ, ಒಡಿಶಾದ ನಬರಂಗಪುರ ಮತ್ತು ಅಸ್ಸಾಂನ ONGC-ಜೋರ್ಹತ್‌ ಎಂಬ ಈ ನಾಲ್ಕು ಸ್ಥಳಗಳು ಈಗಾಗಲೇ ಜಿಯೋಸ್ಪೇಸ್‌ಫೈಬರ್ ನೊಂದಿಗೆ ಸಂಪರ್ಕ ಹೊಂದಿವೆ.

ʻಜಿಯೋ ಜೊತೆಗೆ, ಭಾರತದ ಯಾವುದೇ ಸ್ಥಳಕ್ಕೆ ಪ್ರತಿ ಸೆಕೆಂಡಿಗೆ  ಮಲ್ಟಿ ಗಿಗಾಬಿಟ್‌ಗಳನ್ನು ತಲುಪಿಸುವ ಗುರಿಯನ್ನು ಹೊಂದಿರುವ ಸರ್ಕಾರದ ‘ಡಿಜಿಟಲ್ ಇಂಡಿಯಾ’ ಉಪಕ್ರಮವನ್ನು ನಾವು ಬೆಂಬಲಿಸುತ್ತೇವೆʼ ಎಂದು SES ನ ಮುಖ್ಯ ಕಾರ್ಯತಂತ್ರದ ಅಧಿಕಾರಿ ಜಾನ್-ಪಾಲ್ ಹೆಮಿಂಗ್‌ವೇ ಹೇಳಿರುವುದು ಭಾರತಕ್ಕೆ ಬಹುದೊಡ್ಡ ಬಲ ನೀಡಿದೆ.

ʻಈಗಾಗಲೇ ಭಾರತದ ಕೆಲವು ಭಾಗಗಳಲ್ಲಿ ಬಾಹ್ಯಾಕಾಶದಿಂದ ನಮ್ಮ ಮೊದಲ ಫೈಬರ್ ತರಹದ ಸೇವೆಗಳನ್ನು ಪ್ರಾರಂಭಿಸಲಾಗಿದೆ.  ದೇಶದ ಹೆಚ್ಚಿನ ಗ್ರಾಮೀಣ ಭಾಗಗಳಿಗೆ ಡಿಜಿಟಲ್ ವ್ಯವಸ್ಥೆ ತಲುಪುವುದನ್ನು ನೋಡಲು ನಾವು ಕೂಡ ಕಾತುರರಾಗಿದ್ದೇವೆʼ ಎಂದು ಅವರು ಹೇಳಿದ್ದಾರೆ.

ತನ್ನ ಜಿಯೋಸ್ಪೇಸ್‌ಫೈಬರ್‌ ಮೂಲಕ ಭಾರತದ ಖಾಸಗಿ ಟೆಲಿಕಾಂ ಕಂಪನಿ ರಿಲಯನ್ಸ್‌ ಜಿಯೋ ಮತ್ತೊಂದು ದೊಡ್ಡ ಸಾಹಸಕ್ಕೆ ಕೈಹಾಕಿದೆ.  ಉಪಗ್ರಹ ಆಧಾರಿತ ಜಿಯೋ ಸ್ಪೇಸ್‌ ಫೈಬರ್‌ ಸೇವೆಯನ್ನು ಭಾರತದಲ್ಲಿ ಪರಿಚಯಿಸುವ ಮೂಲಕ ʻಡಿಜಿಟಲ್‌ ಇಂಡಿಯಾʼದ ಹೊಸ ಶಕೆಗೆ ಮುನ್ನುಡಿಯಿಟ್ಟಿದೆ. ಇಡೀ ಭಾರತವೇ ಹೆಮ್ಮೆ ಪಡುವಂತಹಾ ವಿಚಾರಕ್ಕೆ ನಾವೆಲ್ಲಾ ಮತ್ತೊಮ್ಮೆ ಸಾಕ್ಷಿಯಾಗಲಿದ್ದೇವೆ. ಈ ಬಾರಿ ಉಪಗ್ರಹ ಆಧಾರಿತ ಗಿಗಾ ಫೈಬರ್‌ನಿಂದ ಅತ್ಯಂತ ವೇಗದ ಬ್ರಾಡ್ ಬ್ಯಾಂಡ್ ಸೇವೆಯ ಮೂಲಕ…

~ ಪ್ರಣವ್‌ ಶಂಕರ್‌

Advertisement

Udayavani is now on Telegram. Click here to join our channel and stay updated with the latest news.

Next