ಬೆಂಗಳೂರು: ಆರು ನಗರಗಳ ಬಳಿಕ ಇದೀಗ ಜಿಯೋ ತನ್ನ ಟ್ರೂ 5ಜಿ ಸೇವೆಯನ್ನು ಬೆಂಗಳೂರು ಹಾಗೂ ಹೈದರಾಬಾದ್ ನಲ್ಲಿ ಆರಂಭಿಸಿದೆ. ಮುಂಬೈ, ದೆಹಲಿ, ಕೋಲ್ಕತ್ತಾ, ಚೆನ್ನೈ, ವಾರಾಣಸಿ ಮತ್ತು ನಾಥದ್ವಾರ ಈ ಆರು ನಗರಗಳಲ್ಲಿ ಜಿಯೋ ಟ್ರೂ- 5G ಸೇವೆಗಳ ಯಶಸ್ವಿ ಬೀಟಾ-ಅನಾವರಣ ಆದ ನಂತರದಲ್ಲಿ ಇದೀಗ ಜಿಯೋ ಹೆಚ್ಚಿನ ನಗರಗಳಲ್ಲಿ ಜಿಯೋ ಟ್ರೂ- 5G ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಬೆಂಗಳೂರು ಮತ್ತು ಹೈದರಾಬಾದ್‌ಗೂ ಈಗ ಜಿಯೋ ಟ್ರೂ 5G ಸೌಲಭ್ಯ ದೊರೆಯುತ್ತಿದೆ.
ಜಿಯೋ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ 500 ಎಂಬಿಪಿಎಸ್ (Mbps)ನಿಂದ 1 ಜಿಬಿಪಿಎಸ್ (Gbps)ವರೆಗೆ ಎಲ್ಲಿಯಾದರೂ ವೇಗದ ಅನುಭವವನ್ನು ಪಡೆಯಬಹುದಾಗಿದೆ.
4G ನೆಟ್‌ವರ್ಕ್‌ನ ಮೇಲೆ ಯಾವುದೇ ಅವಲಂಬನೆ ಇಲ್ಲದೆ ಸುಧಾರಿತ 5G ನೆಟ್‌ವರ್ಕ್‌ನೊಂದಿಗೆ ಅದ್ವಿತೀಯ 5G ಆರ್ಕಿಟೆಕ್ಚರ್. 700 MHz, 3500 MHz, ಮತ್ತು 26 GHz ಬ್ಯಾಂಡ್‌ಗಳಾದ್ಯಂತ 5G ಸ್ಪೆಕ್ಟ್ರಮ್‌ನ ದೊಡ್ಡ ಮತ್ತು ಉತ್ತಮ ಮಿಶ್ರಣ. ಕ್ಯಾರಿಯರ್ ಅಗ್ರಿಗೇಷನ್ ಎಂಬ ಸುಧಾರಿತ ತಂತ್ರಜ್ಞಾನ ಬಳಸಿಕೊಂಡು ಈ 5G ಫ್ರೀಕ್ವೆನ್ಸಿಗಳನ್ನು ಏಕರೂಪದ “ಡೇಟಾ ಹೈವೇ” ಆಗಿ ಯಾವುದೇ ಅಡೆತಡೆ ಇಲ್ಲದೆ ಸಂಯೋಜಿಸುತ್ತದೆ.
ನವೆಂಬರ್ 10ರಿಂದ ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿರುವ ಜಿಯೋ ಬಳಕೆದಾರರನ್ನು ಜಿಯೋ ವೆಲ್‌ಕಮ್ ಆಫರ್‌ಗೆ ಆಹ್ವಾನಿಸಲಾಗುತ್ತಿದೆ. ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1 ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾವನ್ನು ಈ ಮೂಲಕ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.