Advertisement

ಜಿಯೋ 5ಜಿ ಡೌನ್‌ಲೋಡ್‌ ವೇಗದಲ್ಲಿ ಮೈಲಿಗಲ್ಲು: ಓಪನ್ ಸಿಗ್ನಲ್ ವರದಿ

03:06 PM Apr 14, 2023 | Team Udayavani |

ನವದೆಹಲಿ: ರಿಲಯನ್ಸ್ ಜಿಯೋದ 5ಜಿ ಅತ್ಯಂತ ವೇಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಜಿಯೋ ಬಳಕೆದಾರರು 315.3 ಎಮ್‌ಬಿಪಿಎಸ್‌ ಸೂಪರ್ ಡೌನ್‌ಲೋಡ್ ವೇಗವನ್ನು ಪಡೆಯುತ್ತಿದ್ದಾರೆ. ಏರ್‌ಟೆಲ್ ಈ ಸ್ಪರ್ಧೆಯಲ್ಲಿ ಹಿಂದೆ ಬಿದ್ದಂತೆ ಕಾಣುತ್ತಿದೆ. ಏರ್‌ಟೆಲ್‌ನ 5ಜಿ ಸರಾಸರಿ ಡೌನ್‌ಲೋಡ್ ವೇಗವು 261.2 ಎಮ್‌ಬಿಪಿಎಸ್‌ ದಾಖಲಾಗಿದೆ ಎಂದು ಓಪನ್‌ ಸಿಗ್ನಲ್‌ ಮೊಬೈಲ್‌ ನೆಟ್‌ವರ್ಕ್‌ ಎಕ್ಸ್‌ಪಿರಿಯನ್ಸ್‌ ಸಂಸ್ಥೆಯ ವರದಿಯಲ್ಲಿ ಬಹಿರಂಗಪಡಿಸಲಾಗಿದೆ.

Advertisement

5ಜಿ ವೇಗದ ಜೊತೆಗೆ 5ಜಿ ಕವರೇಜ್‌ನಲ್ಲಿ ಜಿಯೋ ತನ್ನ ಪ್ರತಿಸ್ಪರ್ಧಿ ಏರ್‌ಟೆಲ್‌ಗಿಂತ ಸುಮಾರು 3 ಪಟ್ಟು ಮುಂದಿದೆ. ಜಿಯೋ ಬಳಕೆದಾರರು ತಮ್ಮ ಸಮಯದ 32.5 ಪ್ರತಿಶತವನ್ನು 5ಜಿ ನೆಟ್‌ವರ್ಕ್‌ನಲ್ಲಿ ಕಳೆಯುತ್ತಿದ್ದರೆ, ಏರ್‌ಟೆಲ್ ಕೇವಲ 11.4 ಪ್ರತಿಶತವನ್ನು ಹೊಂದಿದೆ. ಬಳಕೆದಾರರು ಪ್ರಸ್ತುತ 4ಜಿ ಮತ್ತು 5ಜಿ ನೆಟ್‌ವರ್ಕ್‌ಗಳನ್ನು ಬಳಸುತ್ತಿರುವುದರಿಂದ, ಕವರೇಜ್ ಅನ್ನು ಅಳೆಯಲು 5ಜಿ ನೆಟ್‌ವರ್ಕ್‌ಗಳಲ್ಲಿ ಬಳಕೆದಾರರು ಕಳೆಯುವ ಸಮಯವನ್ನು ಓಪನ್‌ಸಿಗ್ನೆಲ್‌ ಬಳಸಿದೆ. ಜಿಯೋ 5ಜಿ ನೆಟ್‌ವರ್ಕ್ ಅನ್ನು ಅತ್ಯಂತ ವೇಗವಾಗಿ ವಿಸ್ತರಿಸುತ್ತಿದೆ ಎಂದು ಓಪನ್ ಸಿಗ್ನಲ್ ವರದಿ ಬಹಿರಂಗಪಡಿಸಿದೆ.

ಜಿಯೋ ದೊಡ್ಡ ಪ್ರಮಾಣದಲ್ಲಿ ಟವರ್‌ಗಳಲ್ಲಿ 5ಜಿ ಉಪಕರಣಗಳನ್ನು ಇನ್‌ಸ್ಟಾಲ್‌ ಮಾಡಲಿದೆ.  ಇದರಿಂದಾಗಿ, 5ಜಿ ನೆಟ್‌ವರ್ಕ್‌ನ ವ್ಯಾಪ್ತಿಯೂ ಸಾಕಷ್ಟು ಹೆಚ್ಚಾಗಿದೆ. 1 ರಿಂದ 10 ಅಂಕಗಳ ಆಧಾರದ ಮೇಲೆ, ಓಪನ್‌ಸಿಗ್ನಲ್‌ ರಿಲಯನ್ಸ್ ಜಿಯೋಗೆ 4.2 ಅಂಕಗಳನ್ನು ನೀಡಿದೆ. ಆದರೆ ಏರ್‌ಟೆಲ್ ಕೇವಲ 3.4 ಅಂಕಗಳನ್ನು ಪಡೆದುಕೊಂಡಿದೆ. ತಾಂತ್ರಿಕ ನಿಯತಾಂಕಗಳಲ್ಲಿಯೂ ಸಹ ಜಿಯೋ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಜಿಯೋದ ‘ಕೋರ್’ ಎಲ್ಲಾ ಪರೀಕ್ಷೆಗಳಲ್ಲಿ 84.3% ಅಂಕಗಳನ್ನು ಗಳಿಸಿದೆ. ಏರ್‌ಟೆಲ್ ಶೇ.77.5 ಅಂಕಗಳನ್ನು ಪಡೆದಿದೆ.

5ಜಿ ವೇಗ, ಟವರ್, ಕವರೇಜ್ ಮತ್ತು ತಾಂತ್ರಿಕ ನಿಯತಾಂಕಗಳ ಪ್ರತಿಯೊಂದು ಅಂಶದಲ್ಲೂ ಜಿಯೋ ಅಗ್ರಸ್ಥಾನದಲ್ಲಿದೆ. ಹಾಗೆಯೇ, 5ಜಿ ಅಪ್‌ಲೋಡ್‌ನಲ್ಲಿ ಏರ್‌ಟೆಲ್ 23.9 ಎಮ್‌ಬಿಪಿಎಸ್‌ ವೇಗದೊಂದಿಗೆ ಮುಂದಿದೆ. ಜಿಯೋದ 5ಜಿ ಅಪ್‌ಲೋಡ್ ವೇಗವನ್ನು 18 ಎಮ್‌ಬಿಪಿಎಸ್‌ ಅಳೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next