ಭೋಪಾಲ್(ಮಧ್ಯಪ್ರದೇಶ): ಭಾರತದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಮೊಹಮ್ಮದ್ ಅಲಿ ಜಿನ್ನಾ ಅವರು ಬಹಳ ಬುದ್ಧಿವಂತಿಕೆಯ ನಡೆಯ ಮೂಲಕ ದೇಶವನ್ನು ವಿಭಜಿಸಿರುವುದಾಗಿ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಸಜ್ಜನ್ ಸಿಂಗ್ ವರ್ಮಾ ಅಭಿಪ್ರಾಯವ್ಯಕ್ತಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಪಠ್ಯದಲ್ಲಿ ಸತ್ಯವಿರಬೇಕು, ನಿಮ್ಮ ಐಡಿಯಾಲಜಿಗಳು ಇರಬಾರದು: ಎಸ್.ಎಲ್.ಭೈರಪ್ಪ
ಮೊಹಮ್ಮದ್ ಅಲಿ ಜಿನ್ನಾ ಸ್ವಾತಂತ್ರ್ಯ ಹೋರಾಟಗಾರರು, ದೇಶವನ್ನು ವಿಭಜಿಸುವ ಅವರ ಯೋಜನೆ ಸರಿಯಾಗಿತ್ತು ಎಂದು ವರ್ಮಾ ಹೇಳಿದ್ದಾರೆ. ನೆಹರು ಮತ್ತು ಜಿನ್ನಾ ದೇಶವನ್ನು ಇಬ್ಭಾಗ ಮಾಡಿರುವುದು ಬುದ್ಧಿವಂತಿಕೆಯ ಕಾರ್ಯವಾಗಿದೆ. ಅಲ್ಲದೇ ಜಿನ್ನಾ ಸ್ವಾತಂತ್ರ್ಯ ಹೋರಾಟಗಾರರಲ್ಲವೇ ಎಂದು ವರ್ಮಾ ಪ್ರಶ್ನಿಸಿದ್ದಾರೆ.
ಮಧ್ಯಪ್ರದೇಶದ ಆಡಳಿತಾರೂಢ ಬಿಜೆಪಿ ಸರ್ಕಾರ ಮತ್ತು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ವರ್ಮಾ, ಮುಸ್ಲಿಂ ಎಂಬ ಕಾರಣಕ್ಕಾಗಿ ಸ್ವಾತಂತ್ರ್ಯ ಹೋರಾಟಗಾರನ ವ್ಯಾಖ್ಯಾನ ಬದಲಾಗುತ್ತದೆಯೇ ಎಂದು ಹೇಳಿದರು.
ಮುಸ್ಲಿಂ ಎಂಬ ಕಾರಣಕ್ಕಾಗಿ ಸ್ವಾತಂತ್ರ್ಯ ಹೋರಾಟಗಾರನ ವ್ಯಾಖ್ಯಾನ ಬದಲಾಗುತ್ತದೆಯೇ? ಆದರೆ ಬಿಜೆಪಿ ಈ ಹೊಸ ಸಂಸ್ಕೃತಿಯನ್ನು ಹುಟ್ಟುಹಾಕುತ್ತಿದೆ. ಜನವರಿ 26ರಂದು ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ, 1947ರಲ್ಲಿ ದೇಶ ವಿಭಜನೆಯಾಗಲು ನೆಹರು ಮತ್ತು ಜಿನ್ನಾ ಹೊಣೆ ಎಂದು ಹೇಳಿದ್ದರು. ದೇಶವನ್ನು ವಿಭಜಿಸುವ ಬುದ್ಧಿವಂತಿಕೆಯ ಕೆಲಸ ಮಾಡಿರುವುದಕ್ಕೆ ದೇಶದ ಜನರು ಈ ಇಬ್ಬರು ನಾಯಕರಿಗೆ ಅಭಿನಂದನೆ ಸಲ್ಲಿಸಬೇಕು ಎಂದು ವರ್ಮಾ ಹೇಳಿದರು.