Advertisement

ಜಿಂದ್‌, ರಾಮಗಢ ಉಪ ಚುನಾವಣೆ: ಶಾಂತಿಯುತ ಮತದಾನ

06:45 AM Jan 28, 2019 | udayavani editorial |

ಜಿಂದ್‌, ಹರಿಯಾಣ : ಜಿದ್ದು ಜಿದ್ದಿನ ಸ್ಪರ್ಧೆಯನ್ನು ಕಾಣುತ್ತಿರುವ ಹರಿಯಾಣದ ಜಿಂದ್‌ ಮತ್ತು ರಾಜಸ್ಥಾನದ ರಾಮಗಢ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಈಗ ತುರುಸಿನ ಮತದಾನ ಜಾರಿಯಲ್ಲಿದೆ. 

Advertisement

ರಾಜ್ಯ ಚುನಾವಣಾ ಆಯೋಗ ಅತ್ಯಂತ ಬಿಗಿ ಹಾಗೂ ಅಭೂತಪೂರ್ವ ಭದ್ರತಾ ವ್ಯವಸ್ಥೆಯನ್ನು ಆಯೋಜಿಸಿದ್ದು ಈ ವರೆಗೆ ಎಲ್ಲಿಯೂ ಯಾವುದೇ ರೀತಿಯ ಅಹಿತಕರ ಘಟನೆ ನಡೆದ ವರದಿಗಳಿಲ್ಲ.

ಜಿಂದ್‌ ಬೈಪೋಲ್‌ ಕಣದಲ್ಲಿ ಕನಿಷ್ಠ 21 ಮಂದಿ ಅಭ್ಯರ್ಥಿಗಳಿದ್ದಾರೆ. ಇವರಲ್ಲಿ ಇಬ್ಬರು ಮಹಿಳೆಯರೂ ಸೇರಿದ್ದಾರೆ. 

ಮತದಾನ ಇಂದು ಬೆಳಗ್ಗೆ 7 ಗಂಟೆಗೆ ಆರಂಭವಾಗಿದ್ದು ಸಂಜೆ 5ರ ವರೆಗೆ ನಡೆಯಲಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. 

ಜಿಂದ್‌ ಕ್ಷೇತ್ರದಲ್ಲಿರುವ ಮತದಾರರ ಸಂಖ್ಯೆ 1,71,133; ಇವರಲ್ಲಿ 80,000 ಮಹಿಳೆಯರು. ಚುನಾವಣೆಗಾಗಿ 158 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ; ಈ ಪೈಕಿ 67 ಗ್ರಾಮೀಣ ಪ್ರದೇಶಗಳಲ್ಲಿವೆ. 

Advertisement

ಸುಗಮ ಮತದಾನ ಪ್ರಕ್ರಿಯೆ, ಶಾಂತಿ, ಶಿಸ್ತು, ಸುವ್ಯವಸ್ಥೆಗಾಗಿ 3,000 ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.  ಜನವರಿ 31ರಂದು ಮತ ಎಣಿಕೆ ನಡೆಯಲಿದೆ. 

ಇದೇ ವೇಳೆ ರಾಜಸ್ಥಾನದ ರಾಮಗಢದಲ್ಲಿ ನಡೆಯುತ್ತಿರುವ ಉಪ ಚುನಾವಣೆಗೆ ಬಿರುಸಿನ ಮತದಾನ ಜಾರಿಯಲ್ದಿ. ಇಲ್ಲಿ 20 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರಲ್ಲಿ ಇಬ್ಬರು ಮಹಿಳೆಯರು. 

Advertisement

Udayavani is now on Telegram. Click here to join our channel and stay updated with the latest news.

Next