ಬಾಗೇಪಲ್ಲಿ: ರಾಜ್ಯ ಸರ್ಕಾರದ ಜಿಲ್ಲಾಧಿಕಾರಿಗಳ ನಡೆ ಗ್ರಾಮಗಳ ಕಡೆ ಉತ್ತಮ ಕಾರ್ಯಕ್ರಮವಾದರೂ ಜನಪ್ರತಿನಿ ಧಿಗಳ ಮಾತಿಗೆ ಸರ್ಕಾರಿ ಅಧಿಕಾರಿಗಳು ಮಾನ್ಯತೆ ನೀಡದಿದ್ದರೆ ಪ್ರಯೋಜನ ಏನು ಎಂದು ಶಾಸಕ ಎಸ್.ಎನ್.ಸುಬ್ಟಾರೆಡ್ಡಿ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಯಲ್ಲಂಪಲ್ಲಿ ಗ್ರಾಮದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ಉದ್ಘಾಟಿಸಿ, ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಮಾಹಿತಿಯನ್ನು ಜನ ಸದ್ಬಳಕೆ ಮಾಡಿಕೊಳ್ಳ ಬೇಕು. ಸರ್ಕಾರ ಜನರಿಗಾಗಿ ಅವರ ಮನೆ ಬಾಗಿಲಿಗೆ ತೆರಳಿ ಬೇಕಾದ ಪ್ರಮಾಣ ಪತ್ರ, ಮಂಜೂರಾತಿ ಪತ್ರ ನೀಡುವ ಉದ್ದೇಶಕ್ಕಾಗಿ ಕಾರ್ಯಕ್ರಮ ಅನುಷ್ಠಾನಗೊಳಿಸಿದೆ. ಸರ್ಕಾರಿ ಕಚೇರಿಗಳಿಗೆ ಜನಸಾಮನ್ಯರು ಅಲೆದಾಡುವ ಸಮಸ್ಯೆ ತಪ್ಪಿಸುವ ಕಾರ್ಯಕ್ರಮ ಇದಾಗಿದ್ದು, ತಮಗೆ ಯಾವುದೇ ಕಂದುಕೊರತೆ ಇದ್ದಲ್ಲಿ ಸ್ಥಳ ದಲ್ಲೇ ಅರ್ಜಿ ಸಲ್ಲಿಸಿ ಇತ್ಯರ್ಥ ಮಾಡಿಕೊಳ್ಳಬಹುದು ಎಂದು ಹೇಳಿದರು.
ತಾಪಂ ಇಒ ಎಚ್.ಎನ್.ಮಂಜು ನಾಥಸ್ವಾಮಿ, ಗ್ರೇಡ್-2 ತಹಶೀಲ್ದಾರ್ ಸುಬ್ರಹ್ಮಣ್ಯಂ, ಗ್ರಾಪಂ ಅಧ್ಯಕ್ಷೆ ಲಕ್ಷ್ಮೀಶಿವಪ್ಪ, ಉಪಾಧ್ಯಕ್ಷೆ ಶಶಿಕಲಾ ನಾರಾ ಯಣಸ್ವಾಮಿ, ಸದಸ್ಯರಾದ ವಿಶ್ವನಾಥರೆಡ್ಡಿ, ಗೀತಾ ಮಂಜುನಾಥ, ವೆಂಕಟರವಣಮ್ಮ, ವಿಎಸ್‌ಎಸ್‌ಎನ್ ಅಧ್ಯಕ್ಷ ಯರ್ರಕಿಟ್ಟಪ್ಪ, ರೇಷ್ಮೆ ಸಹಾಯಕ ನಿರ್ದೇಶಕ ಚಿನ್ನಕೈವಾರಮಯ್ಯ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನರಸಿಂಹಾರೆಡ್ಡಿ, ಕೈಗಾರಿಕಾ ವಿಸ್ತರಣಾಧಿಕಾರಿ ಮಹಬೂಬ್ ಬಾಷ ಮತ್ತಿತರರು ಇದ್ದರು.