Advertisement

ಕೋವಿಡ್ ಲಸಿಕೆಯಿಂದ ಪಾರ್ಶ್ವವಾಯು ಗುಣಮುಖ? ಜಾರ್ಖಂಡ್ ನಲ್ಲೊಂದು ಪವಾಡ!

04:54 PM Jan 15, 2022 | Team Udayavani |

ಬೊಕಾರೊ (ಜಾರ್ಖಂಡ್): ನಾಲ್ಕು ವರ್ಷಗಳ ಹಿಂದೆ ಅಪಘಾತದಲ್ಲಿ ಪಾರ್ಶ್ವವಾಯುವಿಗೆ ಒಳಗಾಗಿದ್ದ ಮತ್ತು ಧ್ವನಿ ಕಳೆದುಕೊಂಡಿದ್ದ 55 ವರ್ಷದ ವ್ಯಕ್ತಿಯೊಬ್ಬರು ಜನವರಿ 4 ರಂದು ಕೋವಿಶೀಲ್ಡ್ ಲಸಿಕೆ ಪಡೆದ ನಂತರ ತನಗೆ ಚಲಿಸಲು ಮತ್ತು ಮಾತನಾಡಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

Advertisement

ಬೊಕಾರೊದ ಸಲ್ಗಾಡಿಹ್ ಗ್ರಾಮದ ದುಲರ್‌ ಚಂದ್ ಮುಂಡಾ ಅವರೇ ಈ ವ್ಯಕ್ತಿ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ “ಈ ಲಸಿಕೆ ತೆಗೆದುಕೊಂಡಿದ್ದಕ್ಕಾಗಿ ಸಂತೋಷವಾಗಿದೆ. ಜನವರಿ 4 ರಂದು ಲಸಿಕೆ ತೆಗೆದುಕೊಂಡ ನಂತರ ನಾನು ನನ್ನ ಕಾಲುಗಳನ್ನು ಚಲಿಸಬಲ್ಲೆ” ಎಂದು ಹೇಳಿದರು.

ಬೊಕಾರೊನ ಸಿವಿಲ್ ಸರ್ಜನ್ ಡಾ ಜಿತೇಂದ್ರ ಕುಮಾರ್ ಅವರು ಇದರ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದು, ಪ್ರಕರಣದ ವೈದ್ಯಕೀಯ ಇತಿಹಾಸವನ್ನು ವಿಶ್ಲೇಷಿಸಲು ವೈದ್ಯಕೀಯ ತಂಡವನ್ನು ರಚಿಸುವಂತೆ ಕೇಳಿಕೊಂಡಿದ್ದಾರೆ.

ದುಲರ್‌ ಚಂದ್ ಮುಂಡಾ ಅವರ ಕುಟುಂಬದ ಪ್ರಕಾರ, ನಾಲ್ಕು ವರ್ಷಗಳ ಹಿಂದೆ ಅಪಘಾತದ ನಂತರ ಅವರು ಮಾತನಾಡುವ ಶಕ್ತಿ ಕಳೆದುಕೊಂಡರು ಮತ್ತು ಪಾರ್ಶ್ವವಾಯುವಿಗೆ ಒಳಗಾಗಿದ್ದರು.

ಇದನ್ನೂ ಓದಿ:ಎಲ್ಲರೂ ಸಹಕರಿಸಿದರಷ್ಟೇ ಕೋವಿಡ್‌ ನಿಯಂತ್ರಣ ಸಾಧ್ಯ

Advertisement

ಆದರೆ ಕೋವಿಡ್ ಲಸಿಕೆ ತೆಗೆದುಕೊಂಡ ನಂತರ ತನಗೆ ಪವಾಡ ಸಂಭವಿಸಿದೆ ಎಂದು ದುಲರ್‌ ಚಂದ್ ಮುಂಡಾ ಹೇಳಿಕೊಂಡಿದ್ದಾರೆ. “ನನ್ನ ಧ್ವನಿ ಹಿಂತಿರುಗಿತು ಮತ್ತು ನನ್ನ ಪಾದಗಳು ಸಹ ಚಲಿಸಿದವು” ಎಂದು ಅವರು ಹೇಳಿದರು.

“ಇದನ್ನು ನೋಡಿ ಆಶ್ಚರ್ಯವಾಯಿತು. ಆದರೆ ಇದನ್ನು ವಿಜ್ಞಾನಿಗಳು ಖಚಿತಪಡಿಸಿಕೊಳ್ಳಬೇಕು. ಅವರು ಕೆಲವು ದಿನಗಳಿಗಿಂತ ಹೆಚ್ಚು ಹಳೆಯ ವೈದ್ಯಕೀಯ ಸ್ಥಿತಿಯಿಂದ ಚೇತರಿಸಿಕೊಂಡಿದ್ದರೆ, ಅದನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ನಾಲ್ಕು ವರ್ಷಗಳಿಂದಿದ್ದ ಸ್ಥಿತಿಯಿಂದ ಅವರು ಲಸಿಕೆ ತೆಗೆದುಕೊಂಡ ನಂತರ ಇದ್ದಕ್ಕಿದ್ದಂತೆ ಚೇತರಿಸಿಕೊಂಡಿದ್ದಾರೆ ನಂಬಲಾಗುತ್ತಿಲ್ಲ” ಎಂದು ಡಾ.ಜಿತೇಂದ್ರ ಕುಮಾರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next