Advertisement

Jharkhand ಮಾಜಿ ಸಿಎಂ ಚಂಪೈ ಸೊರೇನ್‌ ಬಿಜೆಪಿ ಸೇರುವ ಸಾಧ್ಯತೆ?

08:09 AM Aug 18, 2024 | Team Udayavani |

ರಾಂಚಿ: ಜೆಎಂಎಂ ನಾಯಕ, ಝಾರ್ಖಂಡ್‌ ಮಾಜಿ ಸಿಎಂ ಚಂಪೈ ಸೊರೇನ್‌ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎನ್ನಲಾಗಿದೆ. ಜತೆಗೆ ಶಾಸಕ ಲೋಬಿನ್‌ ಹೆಂಬ್ರೊಮ್‌ ಕೆಲವು ಶಾಸಕರೂ ಪಕ್ಷ ಬದಲಿಸುವ ಇರಾದೆಯಲ್ಲಿದ್ದಾರೆ ಎನ್ನಲಾಗಿದೆ.

Advertisement

ಅಕ್ಟೋಬರ್‌-ನವೆಂಬರ್‌ನಲ್ಲಿ ಝಾರ್ಖಂಡ್‌ ವಿಧಾನಸಭೆಗೆ ಚುನಾವಣೆ ಇರುವ ಬೆನ್ನಲ್ಲೇ ಇದು ಮಹತ್ವ ಪಡೆದಿದೆ. ಶಾಸಕರು ಈಗಾಗಲೇ ಹೊಸದಿಲ್ಲಿಗೆ ತೆರಳಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಜತೆಗೆ ಒಂದು ಹಂತದ ಮಾತುಕತೆ ನಡೆಸಿದ್ದಾರೆ ಎಂದೂ ವರದಿಯಾಗಿದೆ.

ಆದರೆ ಈ ವರದಿಯನ್ನು ತಳ್ಳಿಹಾಕಿದ ಚಂಪೈ “ನಾನು ಎಲ್ಲಿದ್ದೇನೋ ಅಲ್ಲೇ ಇರುತ್ತೇನೆ, ವದಂತಿ ಬಗ್ಗೆ ಏನೂ ಹೇಳಲ್ಲ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next