ಗಿರಿದಿಹ್ : ಜಾರ್ಖಂಡ್‌ನ ಗಿರಿದಿಹ್ ಜಿಲ್ಲೆಯಲ್ಲಿ ನಡೆದ ದಾಳಿಯ ವೇಳೆ ಪೊಲೀಸ್ ಬೂಟಿನಿಂದ ನಜ್ಜುಗುಜ್ಜಾಗಿ ಶಿಶು ಮೃತ್ಯು ಹೊಂದಿದ ನಂತರ ಆರು ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ, ಐವರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ಘಟನೆಯು ತನಿಖೆಗೆ ಆದೇಶಿಸುವಂತೆ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಹೇಳಿದ್ದಾರೆ.
ಪೋಸ್ಟ್‌ಮಾರ್ಟಮ್ ವರದಿಯಲ್ಲಿ ನಾಲ್ಕು ದಿನಗಳ ಶಿಶುವಿನ “ಗುಲ್ಮ ಛಿದ್ರ” ಎಂದು ಉಲ್ಲೇಖಿಸಿದ ನಂತರ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
“ಗಿರಿದಿಹ್‌ನ ದಿಯೋರಿ ಪೊಲೀಸ್ ಠಾಣೆಯ ಪ್ರಕರಣದಲ್ಲಿ ಇಬ್ಬರು ಅಧಿಕಾರಿಗಳಾದ ಸಂಗಮ್ ಪಾಠಕ್ ಮತ್ತು ಎಸ್‌ಕೆ ಮಂಡಲ್ ಸೇರಿದಂತೆ ಆರು ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಅವರಲ್ಲಿ ಐವರನ್ನು ಅಮಾನತುಗೊಳಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಆಪಾದಿತ ಘಟನೆಯು ಡಿಯೋರಿ ಪೊಲೀಸ್ ಠಾಣೆ ವ್ಯಾಪ್ತಿಯ ಕೊಶೋಡಿಂಗಿ ಗ್ರಾಮದಲ್ಲಿ ಪೊಲೀಸ್ ಸಿಬಂದಿ ಇಬ್ಬರನ್ನು ಬಂಧಿಸಲು ಮನೆಗೆ ಹೋದಾಗ. ಬುಧವಾರ ಸಂಭವಿಸಿದೆ.ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಪ್ರತಿಪಕ್ಷ ಬಿಜೆಪಿ ಒತ್ತಾಯಿಸಿದೆ.ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮರಾಂಡಿ ಅವರು ಆಪಾದಿತ ಅಪರಾಧವನ್ನು ‘ಹೇಯ’ ಎಂದು ಕರೆದಿದ್ದಾರೆ ಮತ್ತು ತಕ್ಷಣದ ಕ್ರಮ ಕೈಗೊಳ್ಳದ ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸಲು ಒತ್ತಾಯಿಸಿದರು.
“ನ್ಯಾಯಾಲಯ ಹೊರಡಿಸಿದ ಎರಡು ಜಾಮೀನು ರಹಿತ ವಾರಂಟ್‌ಗಳನ್ನು ಕಾರ್ಯಗತಗೊಳಿಸಲು ಪೊಲೀಸರು ಅಲ್ಲಿಗೆ ಹೋದಾಗ ನಾಲ್ಕು ದಿನದ ಗಂಡು ಮಗು ಮೃತ್ಯು ಹೊಂದಿದೆ ಎಂದು ಆರೋಪಿಸಲಾಗಿದೆ. ಮೇಲ್ನೋಟಕ್ಕೆ, ಮಗುವಿನ ದೇಹದ ಮೇಲೆ ಬಾಹ್ಯ ಗಾಯಗಳು ಕಂಡುಬಂದಿಲ್ಲ. ಅದನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ರೇಣು ಪಿಟಿಐಗೆ ತಿಳಿಸಿದ್ದಾರೆ.
ಶಿಶುವಿನ ಅಜ್ಜ ಭೂಷಣ್ ಪಾಂಡೆ ಮತ್ತು ಇನ್ನೊಬ್ಬ ವ್ಯಕ್ತಿಯ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಗೊಳಿಸಲು ನಾಲ್ಕೈದು ಪೊಲೀಸ್ ಸಿಬಂದಿ ತೆರಳಿದ್ದರು ಎಂದು ಎಸ್ಪಿ ತಿಳಿಸಿದ್ದಾರೆ.