ಝಾನ್ಸಿ : ಕೇರಳ ಎಕ್ಸ್‌ಪ್ರೆಸ್ ನ ನಾಲ್ವರು ಪ್ರಯಾಣಿಕರು ತೀವ್ರ ಮಟ್ಟದ ತಾಪಮಾನವನ್ನು ಸಹಿಸಲಾಗದೆ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ.
ಓರ್ವ ಪ್ರಯಾಣಿಕರ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ಅಧಿಕಾರಿ ತಿಳಿಸಿದ್ದಾರೆ.
ಕೇರಳ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಇವರು ಸೋಮವಾರ ಸಂಜೆ ತಮಗೆ ತೀವ್ರ ಬಸವಳಿಕೆ ಮತ್ತು ಆಯಾಸದ ಅನುಭವವಾಗುತ್ತಿದೆ ಎಂದು ದೂರಿದ್ದರು. ಆದರೆ ರೈಲು ಝಾನ್ಸಿ ತಲುಪುತ್ತಲೇ ಇವರು ಕೊನೆಯುಸಿರೆಳೆದರು.
ಝಾನ್ಸಿ ರೈಲು ನಿಲ್ದಾಣದಲ್ಲಿ ಮೃತ ದೇಹಗಳನ್ನು ಹೊರತಂದು ಪೋಸ್ಟ್ ಮಾರ್ಟೆಮ್ ಗಾಗಿ ಕಳುಹಿಸಲಾಯಿತು. ಆಗ್ರಾದಿಂದ ಕೊಯಮುತ್ತೂರಿಗೆ ಹೋಗುತ್ತಿದ್ದ ಎಲ್ಲ ಪ್ರಯಾಣಿಕರು ಎಸ್-8 ಮತ್ತು ಎಸ್-9 ಕೋಚ್‌ಗಳಲ್ಲಿ ಆಸೀನರಾಗಿದ್ದರು.
ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಯ ಬಳಿಕ ಕೊಯಮುತ್ತೂರಿಗೆ ರವಾನಿಸಲಾಗುವುದು ಎಂದು ವಿಭಾಗೀಯ ರೈಲ್ವೇ ಮ್ಯಾನೇಜರ್ ನೀರಜ್ ಅಂಬಿಷ್ಟ್ ತಿಳಿಸಿದ್ದಾರೆ.