ಪಾದ ಮತ್ತು ಆ್ಯಂಕಲ್‌ಗಳೆರಡನ್ನು ಅಂದಗೊಳಿಸುವ ಆಭರಣಗಳೇ ಫೂಟ್ ಆಭರಣಗಳು. ಈ ಆಭರಣಗಳು ಕಾಲಿನ ಅಂದವನ್ನು ಹೆಚ್ಚಿಸುವುದರೊಂದಿಗೆ ಉಡುಗೆಯ ಮೆರುಗನ್ನೂ ಸಂದಭೋìಚಿತವಾಗಿ ಹೆಚ್ಚಿಸುವಲ್ಲಿ ಸಹಾಯಕವಾದುದಾಗಿದೆ. ಸಾಮಾನ್ಯರಿಗೆ ಹೆಚ್ಚು ಪರಿಚಿತವಾದವು ಗೆಜ್ಜೆಗಳು ಮತ್ತು ಆ್ಯಂಕ್ಲೆಟ್ಟುಗಳು ಮಾತ್ರ. ಆದರೆ, ಇನ್ನೂ ಅನೇಕ ಬಗೆಯ ಫೂಟ್ ಆಭರಣಗಳು ಸದ್ಯದ ಟ್ರೆಂಡಿ ಫ್ಯಾಷನ್ನಿಗೆ ಸೇರ್ಪಡೆಗೊಂಡಿದೆ. ಅವುಗಳಲ್ಲಿ ಕೆಲವು ಇಂತಿವೆ :
ಬೇರ್ ಫೂಟ್ ಜ್ಯುವೆಲ್ಲರಿ
ಇವುಗಳು ಅಡಿಭಾಗವಿಲ್ಲದ ಸ್ಯಾಂಡಲ್ಲುಗಳಂತೆ ಕಾಣುವುದರಿಂದ ಇವಕ್ಕೆ ಸೋಲ್ ಲೆಸ್ ಸ್ಯಾಂಡಲ್ ಆಭರಣಗಳೆನ್ನುವರು. ಇದು ಅಂಗುಷ್ಠ ಮತ್ತು ಆ್ಯಂಕಲ್‌ಗಳೆರಡನ್ನು ಜೋಡಿಸಿಕೊಂಡಿರುವ ಮಾದರಿಯಾಗಿದೆ. ಇವುಗಳು ಟ್ರೆಂಡಿಯಾದ ಆಭರಣಗಳಾಗಿದ್ದು ಎಲ್ಲಾ ವಯೋಮಾನದ ಮಹಿಳೆಯರನ್ನು ತನ್ನತ್ತ ಆಕರ್ಷಿಸುತ್ತವೆ. ಇವು ಇತ್ತೀಚಿನ ದಿನಗಳಲ್ಲಿ ಬಹಳ ಪ್ರಚಲಿತವಾದ ಸ್ಟೈಲಾಗಿದೆ. ಇವುಗಳ ಜನಪ್ರಿಯತೆಗೆ ಮುಖ್ಯ ಕಾರಣ ವಿಭಿನ್ನವಾದ ಆಯ್ಕೆಗಳು ಮತ್ತು ವಿಭಿನ್ನವಾದ ಸಂದರ್ಭಗಳಿಗೆ ಒಪ್ಪುವಂಥ ಆಯ್ಕೆಗಳು ಲಭ್ಯವಿರುವುದು. ವಿವಿಧ ಸಂದರ್ಭಕ್ಕನುಗುಣವಾಗಿ ಇವುಗಳನ್ನು ಹಲವಾರು ವಿಧಗಳಲ್ಲಿ ಮಾದರಿಗೊಳಿಸಲಾಗುತ್ತದೆ. ಅವುಗಳಲ್ಲಿ
Advertisement
1 ಟ್ರೆಡಿಶನಲ್ ಬೇರ್ ಫೂಟ್ ಆಭರಣಗಳುಇವುಗಳು ಹೆಸರಿಗೆ ತಕ್ಕಂತೆ ಬಹಳ ಟ್ರೆಡಿಶನಲ್ ಲುಕ್ ಕೊಡುವಂತವುಗಳಾಗಿರುತ್ತವೆ. ಇವುಗಳನ್ನು ಬ್ರೈಡಲ್ ಫೂಟ್ ಆಭರಣಗಳೆಂದೂ ಕರೆಯಲಾಗುತ್ತದೆ. ಇವುಗಳು ಗ್ರ್ಯಾಂಡ್ ಲುಕ್ಕನ್ನು ಕೊಡುತ್ತವೆ. ಇವುಗಳ ಧರಿಸುವಿಕೆಯಿಂದ ತೊಟ್ಟಂತಹ ರೇಷ್ಮೆ ಸೀರೆಯಾಗಿರಬಹುದು ಅಥವಾ ಡಿಸೈನರ್ ಲೆಹೆಂಗವಾಗಿರಬಹುದು, ಉಡುಪಿನ ಅಂದವನ್ನು ಮತ್ತು ಮದುವೆ ಹೆಣ್ಣಿನ ಸೌಂದರ್ಯವನ್ನು ಹೆಚ್ಚಿಸುತ್ತವೆ. ಇವುಗಳು ಸಾಮಾನ್ಯವಾಗಿ ಗೋಲ್ಡ್ ಪ್ಲೇಟೆಡ್ಡಾಗಿದ್ದು, ಕುಂದನ್ ಮತ್ತು ಬೀಡ್ಸ್‌ಗಳಿಂದ ಅಲಂಕರಿಸಲಾಗಿರುತ್ತವೆ. ಡ್ರೆಸ್Õ ಅಥವಾ ಸೀರೆಯ ಬಣ್ಣಕ್ಕೆ ಹೊಂದುವಂತಹ ಬಣ್ಣದ ಕುಂದನ್ ಇರುವ ವಿನ್ಯಾಸಗಳನ್ನು ಆಯ್ಕೆ ಮಾಡುವುದು ಸೂಕ್ತವಾದುದು.
ಇವುಗಳು ಲೇಸ್ ಫ್ಯಾಬ್ರಿಕ್‌ನಿಂದ ತಯಾರಿಸಲಾಗಿದ್ದು, ಸಿಂಪಲ್ ಮತ್ತು ಎಲಿಗ್ಯಾಂಟ್ ಲುಕ್ಕನ್ನು ನೀಡುತ್ತವೆ. ಇವುಗಳು ಲಾಂಗ್ ಗೌನುಗಳು ಜೀನ್ಸ್‌ಗಳಿಗೆ ಹೆಚ್ಚು ಹೊಂದುತ್ತವೆ. ಪಾರ್ಟಿಗಳಲ್ಲಿಯೂ ಧರಿಸಬಹುದಾಗಿದೆ. ಅವುಗಳ ಬಣ್ಣ ಮತ್ತು ಮಾದರಿಗಳ ಆಯ್ಕೆಯ ಬಗ್ಗೆ ಹೆಚ್ಚು ಗಮನವಿರಲಿ. 3 ಚೈನ್ ಬೇರ್ ಫೂಟ್ ಆಭರಣಗಳು
ಇವುಗಳು ಇಂಡೋ-ವೆಸ್ಟರ್ನ್ ದಿರಿಸುಗಳಿಗೆ ಹೇಳಿ ಮಾಡಿಸಿದಂತಿರುತ್ತವೆ. ಮದುವೆ ಇನ್ನಿತರ ಸಮಾರಂಭಗಳಿಗೆ ಬರಿಯ ಗೆಜ್ಜೆಗಳಿಗಿಂತ ಈ ಬಗೆಯ ಆಭರಣಗಳನ್ನು ಧರಿಸಿದಾಗ ಹೊಸ ಸ್ಟೈಲ್ ಸ್ಟೇಟ್‌ಮೆಂಟನ್ನು ಸೃಷ್ಟಿಸುವಂತಾಗುತ್ತದೆ. ಪಾದದ ಅಂದವನ್ನು ಇಮ್ಮಡಿಗೊಳಿಸುತ್ತವೆ. ಇವುಗಳು ಗೋಲ್ಡ್ ಪ್ಲೇಟೆಡ್ ಮತ್ತು ಸಿಲ್ವರ್ ಪ್ಲೇಟೆಡ್‌ಗಳಲ್ಲಿ ಲಭ್ಯವಿರುತ್ತವೆ.
Related Articles
ಇವುಗಳು ಬಂಜಾರ (ಲಂಬಾಣಿ) ಜನಾಂಗ ಮತ್ತು ಬುಡಕಟ್ಟು ಜನಾಂಗದವರ ಆಭರಣಗಳಿಂದ ಪ್ರೇರಿತವಾದವುಗಳು. ಇವು ಸಾಮಾನ್ಯವಾಗಿ ಆಕ್ಸಿಡೈಸ್ಡ್ ಸಿಲ್ವರ್‌ನಿಂದಾಗಿರುತ್ತವೆ. ಹಲವಾರು ಡಿಸೈನುಗಳಲ್ಲಿ ಲಭ್ಯವಿದ್ದು ತುಂಬಾ ಆ್ಯಂಟಿಕ್ ಲುಕ್ಕನ್ನು ನೀಡುತ್ತವೆ. ಈ ಬಗೆಯ ಆಭರಣಗಳು ಮಾಡರ್ನ್ ಡ್ರೆಸ್ಸುಗಳಿಗೆ ಮತ್ತು ಕಾಟನ್ ದಿರಿಸುಗಳಿಗೆ ಹೆಚ್ಚು ಸೂಕ್ತವಾದುದು. ಪಾರ್ಟಿವೇರ್ ಮತ್ತು ಕ್ಯಾಷುವಲ್ ಎರಡೂ ಸಂದರ್ಭಗಳಲ್ಲಿ ಬಳಸಬಹುದು. ಯಾವ ಬಗೆಯ ಬಣ್ಣದ ಬಟ್ಟೆಗಳಿಗಾದರೂ ಹೊಂದುವುದು ಇವುಗಳ ವಿಶೇಷತೆ.
Advertisement
5 ಕ್ರಾಚೆಟ್ ಬೇರ್ ಫೂಟ್ ಆಭರಣಗಳು ಇವುಗಳನ್ನು ಎಂಬ್ರಾಯಿಡರಿ ಥೆÅಡ್‌ನಿಂದ ತಯಾರಿಸಿರುತ್ತಾರೆ. ಇವುಗಳು ಲೇಸ್ ಫೂಟ್ ಆಭರಣಗಳಿಗೆ ಹೋಲುತ್ತವೆ, ಆದರೆ ಕ್ರಾಚೆಟ್‌ಗಳು ಹ್ಯಾಂಡ್‌ಮೇಡ್ ಆಭರಣಗಳಾಗಿರುತ್ತವೆ. ಬೇಕಾದ ಕಲರ್ ಆಯ್ಕೆಗಳಿರುವುದರಿಂದ ಡ್ರೆಸ್‌ಗೆ ಮ್ಯಾಚ್ ಆಗುವಂತಹ ಆಭರಣಗಳು ಲಭ್ಯ. ಇವುಗಳು ಕೇವಲ ಮಾಡರ್ನ್ ಡ್ರೆಸ್ಸುಗಳಿಗೆ ಸೂಕ್ತವಾದವುಗಳಾಗಿವೆ. 6 ಪರ್ಲ್ ಮತ್ತು ಬೀಡ್ಸ್‌ಗಳಿಂದ ತಯಾರಾದ ಬೇರ್ ಫೂಟ್ ಆಭರಣಗಳು
ಇವುಗಳು ಸಿಂಪಲ್ಲಾದ ಆಭರಣಗಳು. ಸಾಮಾನ್ಯವಾಗಿ ಒಂದು ಎಳೆಯಲ್ಲಿ ಅಂಗುಷ್ಠದಿಂದ ಆ್ಯಂಕಲ್‌ಗೆ ಜೋಡಿಸಲಾದ ಮಾದರಿಗಳು. ಆದ್ದರಿಂದ ಇವು ಕ್ಯಾಷುವಲ್ ವೇರ್‌ಗೆ ಹೇಳಿ ಮಾಡಿಸಿದಂತಿರುತ್ತವೆ. ಪರ್ಲ್ ಆದರೆ ವೈಟ್ ಡ್ರೆಸ್ಸುಗಳಿಗೆ ಹಾಗೆಯೇ ಬಣ್ಣದ ಬಟ್ಟೆಗಳಿಗೆ ವಿವಿಧ ಬಣ್ಣಗಳ ಬೀಡುÕಗಳಿಂದಾದ ಆಭರಣಗಳು ಲಭಿಸುತ್ತವೆ. 7 ಬೀಚ್ ಬೇರ್ ಫೂಟ್ ಆಭರಣಗಳು:
ಇವುಗಳು ಹೆಸರೇ ಹೇಳುವಂತೆ ಬೀಚ್ ಪಾರ್ಟಿಗಳಿಗೆ ಸೂಕ್ತವಾದುದು. ಇವುಗಳು ವಿವಿಧ ರೀತಿಯ ಸ್ಟೋನ್ಸುಗಳಿಂದ ಮತ್ತು ಕಪ್ಪೆ ಚಿಪ್ಪುಗಳು, ಸಣ್ಣ ಸಣ್ಣ ಕವಡೆಗಳು, ಶಂಖಗಳಿಂದ ತಯಾರಿಸಲ್ಪಟ್ಟದ್ದು, ಬೀಚ್ ಥೀಮನ್ನು ಹೈಲೈಟ್ ಮಾಡುತ್ತವೆ. ನೋಡಲು ಬಹಳ ಸುಂದರವಾಗಿರುವ ಆಭರಣಗಳಿವಾಗಿವೆ. – ಪ್ರಭಾ ಭಟ್