Advertisement
ಕಲಿಕೆಯ ಜತೆಗೆ ಸ್ವೋದ್ಯೋಗಕ್ಕೆ ಪೂರಕವಾಗುವ ತರಬೇತಿ ನೀಡುವ ಉದ್ದೇಶದಿಂದ ಉಡುಪಿಯ ಕರಾವಳಿ ಬೈಪಾಸ್‌ನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಜೆಮ್ಸ್ ಆ್ಯಂಡ್ ಜುವೆಲರಿ (ಐಐಜಿಜೆ)ಯಲ್ಲಿ ಅಲ್ಪಾವಧಿ ತರಬೇತಿ ಒದಗಿಸುವ ಪ್ರಸ್ತಾವನೆಗೆ ಅಂಗೀಕಾರ ದೊರೆತಿದ್ದು, ಮೊದಲ ಬ್ಯಾಚ್‌ನಲ್ಲಿ 30 ವಿದ್ಯಾರ್ಥಿನಿಯರಿಗೆ ತರಬೇತಿ ಸಿಗಲಿದೆ.
ಐಐಜಿಜೆ ತರಬೇತುದಾರರು ಹಾಸ್ಟೆಲ್/ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಜೆಮ್ಸ್ ಮತ್ತು ಜುವೆಲರಿ ತರಬೇತಿ ಹೇಗಿರಲಿದೆ ಎಂಬುದರ ಬಗ್ಗೆ ಓರಿಯಂಟೇಶನ್ ನೀಡಿದ್ದಾರೆ. ಅನಂತರ ಇಲಾಖೆಯ ಅಧಿಕಾರಿಗಳು ತರಬೇತಿಯಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿನಿಯರ ಪಟ್ಟಿ ಸಿದ್ಧಪಡಿಸಿ 30 ಮಂದಿಯನ್ನು ಆಯ್ಕೆ ಮಾಡಿದ್ದಾರೆ. ಒಂದು ತಿಂಗಳು ತರಬೇತಿ
ಅಂತಿಮ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಆದ್ಯತೆ ನೀಡಲಾಗಿದೆ. ತರಬೇತಿ ಒಂದು ತಿಂಗಳು ಇರಲಿದೆ.
Related Articles
Advertisement
2ನೇ ಹಂತಕ್ಕೆ ಮತ್ತೆ ಪ್ರಸ್ತಾವನೆಮೊದಲ ಬ್ಯಾಚ್‌ನ ತರಬೇತಿ ಮುಗಿಯುತ್ತಿದ್ದಂತೆ ಎರಡು ಬ್ಯಾಚ್‌ಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಹೊಸದಾಗಿ ಪ್ರಸ್ತಾವನೆ ಸಲ್ಲಿಸಬೇಕು. ಅದಕ್ಕೆ ಒಪ್ಪಿಗೆ ದೊರೆತ ಅನಂತರ ತರಬೇತಿ ನಡೆಯಲಿದೆ. ಸ್ಕಿಲ್ ಇಂಡಿಯಾ ಕಾರ್ಯಕ್ರಮದ ಭಾಗವಾಗಿ ತರಬೇತಿ ಇರಲಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜುವೆಲರಿ ಮೇಕಿಂಗ್
ಕೇಂದ್ರ ಸರಕಾರವು ಅಹ್ಮದಾಬಾದ್‌ನ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ (ಎನ್‌ಐಡಿ) ಸಹ ಯೋಗ ದಲ್ಲಿ ಮುಂಬಯಿ, ವಾರಾಣಸಿ, ಜೈಪುರ, ದಿಲ್ಲಿ ಹಾಗೂ ಉಡುಪಿಯಲ್ಲಿ ಐಐಜಿಜೆ ಸ್ಥಾಪಿಸಿದೆ. ಜೆಮ್ಸ್ ಆ್ಯಂಡ್ ಜುವೆಲರಿಗೆ ಸಂಬಂಧಿಸಿದ ಕೋರ್ಸ್‌ಗಳನ್ನು ಆಧುನಿಕ ತಂತ್ರಜ್ಞಾನ ಆಧಾರಿತವಾಗಿ ನೀಡಲಾಗುತ್ತದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿಶೇಷ ಆಸಕ್ತಿ ವಹಿಸಿ ಉಡುಪಿಯಲ್ಲಿ ಈ ಕೇಂದ್ರ ಸ್ಥಾಪಿಸಿದ್ದಾರೆ. ಈಗಾಗಲೇ 360ಕ್ಕೂ ಅಧಿಕ ಮಂದಿ ತರಬೇತಿ ಪಡೆದಿದ್ದಾರೆ. ಉಡುಪಿಯಲ್ಲಿ ನಾಲ್ವರು ತರಬೇತುದಾರರಿದ್ದಾರೆ. ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯೆ
ಐಐಜಿಜೆ ವಿಶೇಷ ಕಾರ್ಯಕ್ರಮದಡಿ ಆಭರಣ ತಯಾರಿಕೆ ಮತ್ತು ವಿನ್ಯಾಸ ತಾಂತ್ರಿಕತೆಯನ್ನು ಬೋಧಿಸುತ್ತದೆ. ಚಿನ್ನದ ಆಭರಣ ತಯಾರಿಕೆಯಲ್ಲಿ ವಿದ್ಯಾರ್ಥಿನಿಯರಿಗೆ ಚಿನ್ನದ ತಂತಿ (ವೈರ್) ಸಿದ್ಧಪಡಿಸುವ ಕೆಲಸ, ಬೆಸುಗೆ ಹಾಕುವುದು, ಅಂತಿಮ ವಿನ್ಯಾಸ ಕೊಡುವ “ಫೈಲಿಂಗ್ ವರ್ಕ್’, ಪಾಲಿಶ್ ಮಾಡುವುದು ಮತ್ತು ಆಭರಣವಾಗಿ ಸಿದ್ಧಪಡಿಸುವ ಪ್ರಾಯೋಗಿಕ ಕೌಶಲಗಳನ್ನು ಕಲಿಸಿಕೊಡಲಾಗುತ್ತದೆ. ರತ್ನ ಮತ್ತು ಆಭರಣ ಉದ್ಯಮದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಅನುವು ಮಾಡಿಕೊಡಲು ಈ ಕೌಶಲವು ಅತ್ಯಗತ್ಯವಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಎಕ್ಸ್ (ಟ್ವೀಟ್)ನಲ್ಲಿ ತಿಳಿಸಿದ್ದಾರೆ. ವಿವಿಧ ಕೋರ್ಸ್‌ಗಳು
ಬನ್ನಂಜೆ ಮತ್ತು ದೊಡ್ಡಣಗುಡ್ಡೆಯ ಹಾಸ್ಟೆಲ್ ಗಳ ವಿದ್ಯಾರ್ಥಿನಿಯರನ್ನು ಮೊದಲ ಹಂತ ದಲ್ಲಿ ಆಯ್ಕೆ ಮಾಡಲಾಗಿದೆ. 30 ದಿನ ಗಳ ತರಬೇತಿಯಲ್ಲಿ ವಿದ್ಯಾರ್ಥಿನಿಯರಿಗೆ ಮುಖ್ಯ ವಾಗಿ ಆಭರಣ ಮೇಕಿಂಗ್ ಆ್ಯಂಡ್ ಮ್ಯಾನು ಫ್ಯಾಕ್ಚರಿಂಗ್, ಬೆಂಚ್‌ವರ್ಕ್, ಡಿಸೈನ್, ಫಿನಿಶಿಂಗ್, ಲೇಪನದ ಜತೆಗೆ ವಿನ್ಯಾಸದ ತಾಂತ್ರಿಕತೆಯ ಉಚಿತ ತರಬೇತಿ ನೀಡಲಾಗುತ್ತದೆ. 30 ವಿದ್ಯಾರ್ಥಿನಿಯರು ಮೊದಲ ಬ್ಯಾಚ್‌ನಲ್ಲಿ ಕೌಶಲಾಧಾರಿತ ತರಬೇತಿಯ ಜತೆಗೆ ಕೆರಿಯರ್ ಡೆವಲಪ್‌ಮೆಂಟ್‌ಗೆ ಅನುಕೂಲವಾಗುವಂತೆ ಜೆಮ್ಸ್ ಆ್ಯಂಡ್ ಜುವೆಲರಿ ತರಬೇತಿ ಪಡೆಯಲಿದ್ದಾರೆ.
-ಅನಿತಾ ವಿ. ಮಡ್ಲೂರು, ಉಪನಿರ್ದೇಶಕಿ, ಸಮಾಜ ಕಲ್ಯಾಣ ಇಲಾಖೆ, ಉಡುಪಿ