Advertisement
ಮಧ್ಯ ಪ್ರದೇಶದ ಮೊರೇನೊ ಮೂಲದ ಖಾನಾ ಪಂಡಿತ್ (23), ಆಶು ಪಂಡಿತ್(27), ಮೋಸೆ ಅಲಿ ಯಾಸ್ ಬಂಟಿ (37) ಬಂಧಿತರು. ಬಂಧಿತರಿಂದ 4 ಪಿಸ್ತೂಲ್‌ಗಳು, 12 ಜೀವಂತ ಗುಂಡುಗಳು, 2 ಮೊಬೈಲ್ ಗಳನ್ನು ಜಪ್ತಿ ಮಾಡಲಾಗಿದೆ. ಕೃತ್ಯದಲ್ಲಿ ಭಾಗಿ ಯಾಗಿದ್ದ ಮತ್ತೂಬ್ಬ ವ್ಯಕ್ತಿಯು ತಲೆಮರೆಸಿ ಕೊಂಡಿದ್ದು, ಆತನ ಪತ್ತೆ ಕಾರ್ಯ ಮುಂದುವರಿದಿದೆ. 13 ದಿನ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಬಂಧಿತ ಖಾನಾ ಪಂಡಿತ್ ಹಾಗೂ ಆಶು ಪಂಡಿತ್ ವಿರುದ್ಧ ದೇಶದ ಹಲವೆಡೆ 15ಕ್ಕೂ ಹೆಚ್ಚು ಸುಲಿಗೆ, ದರೋಡೆ ಪ್ರಕರಣಗಳು ದಾಖಲಾಗಿವೆ. ಹಲವು ರಾಜ್ಯಗಳಲ್ಲಿ ಇವರು ಕಳ್ಳತನ ಮಾಡಿ ಪರಾರಿಯಾಗಿದ್ದು, ಹೊರ ರಾಜ್ಯದ ಪೊಲೀಸರಿಗೆ ಬೇಕಾಗಿದ್ದರು.
Related Articles
Advertisement
ಮಾಲೀಕನಿಗೆ 2 ಗುಂಡೇಟು: ಹೊಟ್ಟೆಯ ಭಾಗಕ್ಕೆ ಎರಡು ಗುಂಡು ತಗುಲಿದ್ದ ಜ್ಯುವೆಲ್ಲರಿ ಮಾಲೀಕ ಅಂದಾರಾಮ್ ಹೊಟ್ಟೆಯ ಭಾಗದಲ್ಲಿದ್ದ ಎರಡು ಗುಂಡುಗಳ ಪೈಕಿ ಒಂದು ಗುಂಡನ್ನು ಹೊರತೆಗೆಯ ಲಾಗಿದ್ದು, ಮತ್ತೂಂದು ದೇಹದಲ್ಲಿಯೇ ಉಳಿದಿದೆ. ಇದಕ್ಕೆ ಚಿಕಿತ್ಸೆ ಮುಂದುವರಿದಿದೆ. ತೊಡೆಯ ಭಾಗಕ್ಕೆ ಒಂದು ಗುಂಡು ತಗುಲಿ ತೀವ್ರವಾದ ರಕ್ತಗಾಯ ವಾಗಿದ್ದ ಆಪುರಾಮ್‌ನನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಬಲತೊಡೆಯ ಭಾಗಕ್ಕೆ ತಗುಲಿದ್ದ ಗುಂಡನ್ನು ಹೊರತೆಗೆಯಲಾಗಿದೆ.
ದರೋಡೆಗೆ ಬೈಕ್ ಕದ್ದಿದ್ದರು! :
ಬಂಧಿತ ಆರೋಪಿಗಳನ್ನು ನಗರಕ್ಕೆ ಕರೆತಂದು ವಿಚಾರಣೆ ನಡೆಸಿದಾಗ ಕೃತ್ಯಕ್ಕೆ ಮೊದಲೇ ಸಂಚು ರೂಪಿಸಿದ್ದರು. ದರೋಡೆ ಮಾಡಲೆಂದೇ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಒಂದು ಬೈಕ್ ಹಾಗೂ ವಿದ್ಯಾರಣ್ಯಪುರದಲ್ಲಿ ಮತ್ತೂಂದು ಬೈಕ್ ಕಳವು ಮಾಡಿದ್ದರು.