Advertisement

ಜೇವರ್ಗಿ (ಕೆ): ಸೇತುವೆ ಕಾಮಗಾರಿ ಪರಿಶೀಲನೆ

02:47 PM Mar 12, 2017 | Team Udayavani |

ಜೇವರ್ಗಿ: ಪಟ್ಟಣದ ಜೇವರ್ಗಿ (ಕೆ) ನಗರದ ಹೊರವಲಯದಲ್ಲಿ ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಸೇತುವೆ ಕಾಮಗಾರಿಯನ್ನು ಪುರಸಭೆ ಮುಖ್ಯಾಧಿಧಿಕಾರಿ ಬಸವರಾಜ  ಶಿವಪೂಜೆ ಪರಿಶೀಲಿಸಿದರು.ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.

Advertisement

50 ಮೀ ಉದ್ದ, 7.5 ಮೀ ಅಗಲವಾದ  ಸೇತುವೆ ಕಾಮಗಾರಿಯನ್ನು ಪಿವಿಆರ್‌ಸಂಸ್ಥೆ ಗುತ್ತಿಗೆ ಪಡೆದುಕೊಂಡಿದೆ. ಜೇವರ್ಗಿ ಕೆ ನಿವಾಸಿಗಳು ಮಿನಿವಿಧಾನಸೌಧ ಕಚೇರಿಗೆ ತೆರಳಲು ಮತ್ತು ಮುಖ್ಯರಸ್ತೆಗೆ ಕ್ರಮಿಸಲು  ನೆರವಾಗುತ್ತದೆ. ಅಲ್ಲದೆ ಹನುಮಾನ ದೇವಸ್ಥಾನಕ್ಕೆ ಹೋಗಲು ಕಳೆದ ಅನೇಕ ವರ್ಷಗಳಿಂದ ರಸ್ತೆ ಸಂಪರ್ಕ ಇರಲಿಲ್ಲ.

ಈ ಬಗ್ಗೆ ಇಲ್ಲಿನ ಜನತೆ ಹಳ್ಳಕ್ಕೆ ಸೇತುವೆ  ನಿರ್ಮಿಸುವಂತೆ ಹಲವಾರು ಬಾರಿ ಶಾಸಕ ಡಾ| ಅಜಯಸಿಂಗ್‌ ಹಾಗೂ ತಮ್ಮಲ್ಲಿ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಶಾಸಕರು ಸೇತುವೆ ನಿರ್ಮಾಣಕ್ಕೆ ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಬರುವ ವಾಹನಗಳು ಸೇತುವೆ ಮಾರ್ಗದ ಮೂಲಕ ನೇರವಾಗಿ  ಶಹಾಪುರಕ್ಕೆ ತೆರಳಲು ಅನುಕೂಲವಾಗುತ್ತದೆ. ಬಸವೇಶ್ವರ ವೃತ್ತದಲ್ಲಿ ಆಗುವ ವಾಹನ ದಟ್ಟಣೆ ಸೇತುವೆ ಕಾಮಗಾರಿಯಿಂದ ಕಡಿಮೆ ಮಾಡಬಹುದಾಗಿದೆ. ಕಾಮಗಾರಿ ಗುಣಮಟ್ಟದಿಂದಹಾಗೂ ಕಳಪೆಯಾಗದಂತೆ ಎಚ್ಚರವಹಿಸಲು ಗುತ್ತಿಗೆದಾರಗೆ ತಾಕೀತು ಮಾಡಲಾಗಿದೆ.

ಬರುವ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು  ಭರವಸೆ ನೀಡಿದರು.ಕಿರಿಯ ಇಂಜಿನಿಯರ್‌ ನಾನಾಸಾಹೇಬ ಕೋಳಕೂರ, ಮುಖಂಡರಾದ ಶರಣು ಗುತ್ತೇದಾರ, ಪುರಸಭೆ ಸದಸ್ಯ ಮರೆಪ್ಪ ಸರಡಗಿ, ಲಕ್ಷಣ ದೊಡಮನಿ ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next