Advertisement

ಕುಷ್ಟಗಿಯಲ್ಲಿ ಜೆಸ್ಕಾಂ ಯಡವಟ್ಟು:  ಗ್ರಾಹಕರಿಗೆ ಬಡ್ಡಿಯ ಹೊರೆ

09:50 AM Nov 28, 2021 | Team Udayavani |

ಕುಷ್ಟಗಿ: ಜೆಸ್ಕಾಂ ಯಡವಟ್ಟಿನಿಂದಾಗಿ ಗ್ರಾಹಕರಿಗೆ ವಿದ್ಯುತ್ ನಿರ್ವಹಣಾ ವೆಚ್ಚಕ್ಕೆ ಗೊಂದಲ ಮೂಡಿಸಿದೆ. ಕುಷ್ಟಗಿಯ ಗ್ರಾಹಕ ಯಂಕಪ್ಪ ಕೃಷ್ಣಪ್ಪ ಲೋಕರೆ ಅವರಿಗೆ ಜೆಸ್ಕಾಂ ನೀಡಿದ ಬಿಲ್ ಚಮತ್ಕಾರವಿದು.

Advertisement

ನ. 25 ವಿದ್ಯುತ್ ಬಿಲ್ ನೀಡಿ ನ. 21 ರಂದು ಬಿಲ್ ಕಟ್ಟಲು ಕೊನೆಯ ದಿನಾಂಕ ನಿಡಿಪಡಿಸಿ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದೆ.

ಯಾವುದೇ ಗ್ರಾಹಕರು ಕೊನೆಯ ದಿನ ನಂತರ ಬಿಲ್ ಪಾವತಿಸಿದರೆ ಮುಂದಿನ ತಿಂಗಳು ಬಡ್ಡಿ ಸಮೇತ ಬಿಲ್ ಬರುತ್ತದೆ ಆದರೆ ಅವರೇ ಕೊನೆಯ ದಿನ ನಂತರ ಬಿಲ್ ಕೊಟ್ಟಿದ್ದಾರೆ. ಇದಕ್ಕೆ ಗ್ರಾಹಕರು ಬಡ್ಡಿಯ ಹೊರೆ ಅನುಭವಿಸಬೇಕಿದೆ.

ಇದನ್ನೂ ಓದಿ:ಹೆಂಡ್ತಿಗೆ ಹೊಡೆಯೋದು ಸರಿ ಅಂದ್ರು ನಮ್ಮವರು! ಸಮೀಕ್ಷೆ ವರದಿ ಪ್ರಕಟ

ಈ ಬಿಲ್ ವಿಚಿತ್ರವೇನೆಂದರೆ ಬಿಲ್ ಕಟ್ಟುವ ಕೊನೆಯ ದಿನಾಂಕದ ನಾಲ್ಕು ದಿನ ಮೊದಲೇ ಇಂತಹ ಬಿಲ್ ನೀಡುವ ಹಗಲು ದರೋಡೆಯ ಈ ಹೊಸ ವ್ಯವಸ್ಥೆಗೆ ಗ್ರಾಹಕರೇ ಶಾಕ್ ಹೊಡೆಸಿಕೊಂಡ ಕಾಗೆಯಂತಾಗಿದ್ದಾರೆ!

Advertisement
Advertisement

Udayavani is now on Telegram. Click here to join our channel and stay updated with the latest news.

Next