Advertisement

ಜೆರಿಮೆರಿಯಲ್ಲಿ ಪುರೋಹಿತ ಎಸ್‌. ಎನ್‌. ಉಡುಪ ಅವರ ಷಷ್ಟ್ಯಬ್ಧ

04:58 PM Jun 27, 2019 | Vishnu Das |

ಮುಂಬಯಿ: ಶ್ರೀ ಕ್ಷೇತ್ರ ಉಮಾಮಹೇಶ್ವರೀ ದೇವಸ್ಥಾನ ಜೆರಿಮೆರಿ ಇದರ ಪ್ರಧಾನ ಅರ್ಚಕ ಶ್ರೀನಿವಾಸ ಎನ್‌. ಉಡುಪ ಅವರ ಷಷ್ಟéಬ್ದ ಸಂಭ್ರಮವು ಜೂ. 26ರಂದು ಕುರ್ಲಾ ಪಶ್ಚಿಮದ ಜೆರಿಮೆರಿಯ ಶ್ರೀ ಕ್ಷೇತ್ರ ಉಮಾಮಹೇಶ್ವರೀ ದೇವಸ್ಥಾನದಲ್ಲಿ ನೆರವೇರಿತು.

Advertisement

ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ದೇವಿಗೆ ಆರತಿ ಬೆಳಗಿಸಿ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ಶ್ರೀ ಅಂಬಿಕಾ ಮಹಾಗಣಪತಿ ದೇವಸ್ಥಾನ ವಿದ್ಯಾವಿಹಾರ್‌ನ ಪ್ರಧಾನ ಅರ್ಚಕ ವಿದ್ವಾನ್‌ ಪೆರ್ಣಂಕಿಲ ಹರಿದಾಸ್‌ ಭಟ್‌, ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್‌. ಪೂಜಾರಿ, ಬಿಎಸ್‌ಕೆಬಿ ಅಸೋಸಿಯೇಶನ್‌ ಅಧ್ಯಕ್ಷ ಡಾ| ಸುರೇಶ್‌ ಎಸ್‌. ರಾವ್‌ ಕಟೀಲು, ಕನ್ನಡಿಗ ಕಲಾವಿದರ ಪರಿಷತ್ತು ಅಧ್ಯಕ್ಷ ಡಾ| ಸುರೇಂದ್ರಕುಮಾರ್‌ ಹೆಗ್ಡೆ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಉಮಾ ಮಹೇಶ್ವರೀ ದೇವಸ್ಥಾನದ ಮೊಕ್ತೇಸರರಾದ ಲಲಿತಾ ಬಿ. ಕೆ. ಶೀನ ಅವರನ್ನು ವಿಶೇಷವಾಗಿ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಾದ ಗುರುರಾಜ ಉಡುಪ, ಗೀತಾ ಎಲ್‌. ಭಟ್‌, ಸದಾನಂದ ಶೆಟ್ಟಿ ಕಟೀಲು, ಮೋಹನ್‌ ಮಾರ್ನಾಡ್‌, ಡಾ| ಸುನೀತಾ ಎಂ. ಶೆಟ್ಟಿ, ಚಂದ್ರಶೇಖರ ಪಾಲೆತ್ತಾಡಿ, ವಿಕ್ರಾಂತ್‌ ಉರ್ವಾಳ್‌, ಪದ್ಮನಾಭ ಸಸಿಹಿತ್ಲು, ದಿನೇಶ್‌ ವಿ. ಕೋಟ್ಯಾನ್‌, ರಮೇಶ್‌ ಪೂಜಾರಿ, ಬಿ. ಎನ್‌. ಶೆಟ್ಟಿ, ಕರ್ನೂರು ಮೋಹನ್‌ ರೈ, ಪ್ರಕಾಶ್‌ ಶೆಟ್ಟಿ ಸುರತ್ಕಲ್‌, ಅಜೆಕಾರು ಬಾಲಕೃಷ್ಣ ಶೆಟ್ಟಿ, ಪದ್ಮನಾಭ ಕಟೀಲು, ಶ್ರೀಕೃಷ್ಣ ಉಡುಪ, ಕು| ಜೀವಿಕಾ ಶೆಟ್ಟಿ ಪೇತ್ರಿ, ಸುಧಾಕರ ಪೂಜಾರಿ ಪೊವಾಯಿ, ವಿಜಯ ಶೆಟ್ಟಿ, ರವೀಂದ್ರ ಎ. ಶಾಂತಿ, ನಿತ್ಯಪ್ರಕಾಶ ಶೆಟ್ಟಿ, ಭಾಸ್ಕರ ಸುವರ್ಣ, ಐ. ಕೆ. ಪ್ರೇಮಾ ರಾವ್‌ ಇವರನ್ನು ಹಾಗೂ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಸಾಕಿನಾಕ ಪರವಾಗಿ ಮೋಹನ್‌ ಆರ್‌. ಗುಜರನ್‌, ತುಳುನಾಡ ಸೇವಾ ಸಂಘ ಕಾಜುಪಾಡ ಪರವಾಗಿ ರವಿ ಮೆಂಡ‌ನ್‌ ಕುರ್ಕಾಲ್‌, ಕನ್ನಡ ಸೇವಾ ಸಂಘ ಪೊವಾಯಿ ಪರವಾಗಿ ಕರುಣಾಕರ ಶೆಟ್ಟಿ, ಕರ್ನಾಟಕ ಯುವಕ ಸಂಘ ಜೆರಿಮೆರಿ ಪರವಾಗಿ ರಾಘು ಶೆಟ್ಟಿ, ಕರ್ನಾಟಕ ಸಂಘ ಅಂಧೇರಿ ಪರವಾಗಿ ಹ್ಯಾರಿ ಆರ್‌. ಸಿಕ್ವೇರಾ, ಚಿಣ್ಣರಬಿಂಬ ಶ್ರೀ ಉಮಾಮಹೇಶ್ವರಿ ಶಿಬಿರ ಪರವಾಗಿ ಸಂಜೀವ ಪೂಜಾರಿ ತೋನ್ಸೆ ಅವರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು.

ಗೋಪಾಲಕೃಷ್ಣ ಪಬ್ಲಿಕ್‌ ಟ್ರಸ್ಟ್‌ ಗೋಕುಲ, ಬಿಎಸ್‌ಕೆಬಿ ಅಸೋಸಿಯೇಶನ್‌ ಮುಂಬಯಿ ಹಾಗೂ ಶ್ರೀ ಕೃಷ್ಣ ಭಕ್ತಾದಿಗಳು ಮತ್ತು ಶ್ರೀ ಪೇಜಾವರ ಮಠಾಧೀಶರ ಅಭಿಮಾನಿಗಳು, ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರಿಗೆ ರಜತ ತುಲಾಭಾರ ಸೇವೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶ್ರೀಲಕ್ಷ್ಮೀ ಎಸ್‌. ಉಡುಪ, ಕು| ಶ್ರೀನಿಧಿ ಎಸ್‌. ಉಡುಪ ಸೇರಿದಂತೆ ಎಸ್‌. ಎನ್‌. ಉಡುಪ ಅವರ ಅಭಿಮಾನಿ ಬಳಗ ಉಪಸ್ಥಿತರಿದ್ದರು.

ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ವಿದ್ವಾನ್‌ ಕೈರಬೆಟ್ಟು ವಿಶ್ವನಾಥ ಭಟ್‌ ಅವರಿಂದ ಹರಿಕಥೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭಾÅಮರಿ ಯಕ್ಷ ನೃತ್ಯ ಕಲಾ ನಿಲಯದ ಕಲಾವಿದರಿಂದ “ಸುದರ್ಶನ ವಿಜಯ’ ಯಕ್ಷಗಾನ ಪ್ರದರ್ಶನಗೊಂಡಿತು. ಅಶೋಕ್‌ ಪಕ್ಕಳ ಮತ್ತು ವಿಶ್ವನಾಥ ಶೆಟ್ಟಿ ಪೇತ್ರಿ ಕಾರ್ಯಕ್ರಮ ನಿರೂಪಿಸಿದರು.

Advertisement

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next