Advertisement
ಪುರುಷರ 56 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿರುವ ಜೆರೆಮಿ ಯುವ ವಿಭಾಗದಲ್ಲಿ 250 ಕೆ.ಜಿ. ಭಾರ ಎತ್ತುವ ಮೂಲಕ ಬೆಳ್ಳಿ ಪದಕ ಗೆದ್ದಿದ್ದಾರೆ. ಅದೇ ರೀತಿ ಜೂನಿಯರ್ ವಿಭಾಗದಲ್ಲಿಯೂ ಉತ್ತಮ ಪ್ರದರ್ಶನ ನೀಡುವ ಮೂಲಕ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ 15 ವರ್ಷದ ಜೆರೆಮಿ ಯೂತ್ ಬಾಯ್ಸ ಮತ್ತು ಜೂನಿಯರ್ ಪುರುಷರ ವಿಭಾಗದಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ.
ಉಳಿದಂತೆ ಯೂತ್ ಬಾಯ್ಸ ವಿಭಾಗದಲ್ಲಿ ಸಿದ್ಧಾಂತ್ ಗೋಗೋಯ್ ಕಂಚಿನ ಪದಕ ಗೆದ್ದರೆ, ಬಾಲಕಿಯರ ವಿಭಾಗದಲ್ಲಿ ಜಿಲ್ಲಿ ದರಾಬೆರಾ ಬೆಳ್ಳಿ, ಸ್ನೇಹಾ ಸೋರೆನ್ ಅವರು ಕಂಚಿನ ಪದಕ ಗೆದ್ದಿದ್ದಾರೆ.