ಮುಂಬಯಿ: ಭಾರತ ತಂಡದ ಮಧ್ಯಮ ಕ್ರಮಾಂಕದ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಚೊಚ್ಚಲ “ದ ಹಂಡ್ರೆಡ್’ ಕ್ರಿಕೆಟ್ ಸರಣಿಯಲ್ಲಿ ಆಡಲಿದ್ದಾರೆ. ನಾರ್ದರ್ನ್ ಸೂಪರ್‌ಚಾರ್ಜರ್ ತಂಡವನ್ನು ಜೆಮಿಮಾ ರೋಡ್ರಿಗಸ್ ಪ್ರತಿನಿಧಿಸಲಿದ್ದಾರೆ.
ಜೆಮಿಮಾ ರೋಡ್ರಿಗಸ್‌ಈ ಕೂಟದಲ್ಲಿ ಆಡಲಿರುವ ಭಾರತದ 5ನೇ ಆಟಗಾರ್ತಿ. ಉಳಿದವರೆಂದರೆ ಹರ್ಮನ್‌ಪ್ರೀತ್ ಕೌರ್, ಸ್ಮತಿ ಮಂಧನಾ, ದೀಪ್ತಿ ಶರ್ಮ ಮತ್ತು ಶಫಾಲಿ ವರ್ಮ.
ಕೂಟವನ್ನು ನಾನು ಎದುರು ನೋಡುತ್ತಿದ್ದೇನೆ. ಏನೋ ಹೊಸತನ, ಏನೋ ವಿಭಿನ್ನವಾಗಿದೆ ಎಂದು ಜೆಮಿಮಾ ರೋಡ್ರಿಗಸ್ ಹೇಳಿದ್ದಾರೆ. ನಾನು ಈ ಹಿಂದೆ ಯಾರ್ಕ್ ಶೈರ್ ಡೈಮಂಡ್ಸ್ ಪರ ಆಡಿದ್ದೆ. ಸದ್ಯ ಪ್ರತಿನಿಧಿಸುತ್ತಿರುವ ನಾರ್ದರ್ನ್ ಸೂಪರ್‌ಚಾರ್ಜರ್ ತಂಡದ ಕೆಲವು ಆಟಗಾರರೊಂದಿಗೆ ಆಡಿದ ಅನುಭವವಿದೆ ಎಂದು ಜೆಮಿಮಾ ಹೇಳಿದ್ದಾರೆ.
ಜೆಮಿಮಾ ಸದ್ಯ ಟೀಂ ಇಂಡಿಯಾ ಜತೆ ಮುಂಬೈನಲ್ಲಿ ಕ್ವಾರಂಟೈನ್ ನಲ್ಲಿದ್ದಾರೆ. ಇಂಗ್ಲೆಂಡ್ ತಂಡದ ವಿರುದ್ಧ ಭಾರತ ವನಿತಾ ತಂಡ ಒಂದು ಟೆಸ್ಟ್, ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನಾಡಲಿದೆ.
ಜು. 21ರಂದು ಇಂಗ್ಲೆಂಡ್‌ನಲ್ಲಿ ದಿ ಹಂಡ್ರೆಡ್ ಸರಣ ಆರಂಭವಾಗಲಿದೆ