Advertisement

ದಿ ಹಂಡ್ರೆಡ್ ನಲ್ಲಿ ಜೆಮಿಮಾ ಮಿಂಚು: 43 ಎಸೆತಗಳಲ್ಲಿ 92 ರನ್ ಸಿಡಿಸಿದ ರೋಡ್ರಿಗಸ್

08:58 AM Jul 25, 2021 | Team Udayavani |

ಹೇಡಿಂಗ್ಲೆ: ಭಾರತದ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಇಂಗ್ಲೆಂಡ್ ನ ದಿ ಹಂಡ್ರೆಡ್ ಕೂಟದಲ್ಲಿ ಮಿಂಚು ಹರಿಸಿದ್ದಾರೆ. ಕೇವಲ 43 ಎಸೆತಗಳಲ್ಲಿ ಜೆಮಿಮಾ 92 ರನ್ ಗಳಿಸಿದರು.

Advertisement

ನಾರ್ಥನ್ ಸೂಪರ್ ಚಾರ್ಜರ್ಸ್ ಪರವಾಗಿ ಆಡುವ ಜೆಮಿಮಾ ರೋಡ್ರಿಗಸ್ ಶನಿವಾರ ಈ ಸಾಧನೆ ಮಾಡಿದರು. ಮೊದಲು ಬ್ಯಾಟಿಂಗ್ ಮಾಡಿದ ವೈಲ್ಶ್ ಫೈರ್ ತಂಡ ನಿಗದಿತ 100 ಎಸೆತಗಳಲ್ಲಿ 8 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿತು. ಹೀಲಿ ಮ್ಯಾಥ್ಯೂಸ್ 30 ರನ್ ಗಳಸಿದ್ದೆ ಹೆಚ್ಚಿನ ಸ್ಕೋರ್. ಸೂಪರ್ ಚಾರ್ಜಸ್ ಪರ ಸ್ಮಿತ್ ಮೂರು ವಿಕೆಟ್, ಲೆವಿಕ್ ಮತ್ತು ರಿಚರ್ಡ್ಸ್ ತಲಾ ಎರಡು ವಿಕೆಟ್ ಕಿತ್ತರು.

ಇದನ್ನೂ ಓದಿ:ಬಾಕ್ಸಿಂಗ್‌: ಜಪಾನಿನ ಮೆನ್ಸಾಹ್‌ ಒಕಾಜಾವ ವಿರುದ್ಧ ವಿಕಾಸ್‌ ಕೃಷ್ಣನ್‌ ಗೆ ಸೋಲು

ಗುರಿ ಬೆನ್ನತ್ತಿದ್ದ ಸೂಪರ್ ಚಾರ್ಜರ್ಸ್ ತಂಡ 85 ಎಸೆತಗಳಲ್ಲಿ ಗುರಿ ತಲುಪಿ ಜಯ ಸಾಧಿಸಿತು. ನಾಯಕಿ ವಿನ್ ಫೀಲ್ಡ್ ಶೂನ್ಯ ಸುತ್ತಿದರೆ ವೊಲ್ವಾರ್ಡ್, ಹೊಲಿ ಆರ್ಮಿಟಾಜ್ ವಿಫಲರಾದರು. ಆದರೆ ಏಕಾಂಗಿ ಹೋರಾಟ ನಡೆಸಿದ ಜೆಮಿಮಾ ಅಜೇಯ 92 ರನ್ ಗಳಿಸಿದರು. 43 ಎಸೆತ ಎದುರಿಸಿದ ಜೆಮಿಮಾ 17 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next