Advertisement
ಬ್ಯಾಟಿಂಗ್ ಕ್ಲಿಕ್ ಆದ ರಷ್ಟೇ ಮೇಲುಗೈ ಸಾಧ್ಯ ಎಂಬುದನ್ನು ಅರಿತು ಆಡಿದ ಹರ್ಮನ್‌ಪ್ರೀತ್ ಕೌರ್ ಪಡೆ 8 ವಿಕೆಟಿಗೆ 228 ರನ್ ಪೇರಿಸುವಲ್ಲಿ ಯಶಸ್ವಿ ಯಾಯಿತು. ಟರ್ನಿಂಗ್ ಟ್ರ್ಯಾಕ್‌ನಲ್ಲಿ ಇದು ದೊಡ್ಡ ಮೊತ್ತವೇ ಆಗಿತ್ತು. ಜವಾಬಿತ್ತ ಬಾಂಗ್ಲಾ 35.1 ಓವರ್‌ಗಳಲ್ಲಿ 120ಕ್ಕೆ ಆಲೌಟ್ ಆಯಿತು.
Related Articles
ಚೇಸಿಂಗ್ ವೇಳೆ ಬಾಂಗ್ಲಾ ಬ್ಯಾಟರ್ ಕ್ರೀಸ್ ಆಕ್ರ ಮಿಸಿಕೊಳ್ಳುವಲ್ಲಿ ವಿಫಲರಾದರು. ಫರ್ಗಾನಾ ಹಕ್ (ಸರ್ವಾಧಿಕ 47) ಮತ್ತು ರೀತು ಮೋನಿ (27) 4ನೇ ವಿಕೆಟಿಗೆ 68 ರನ್ ಒಟ್ಟುಗೂಡಿಸಿದ್ದೇ ದೊಡ್ಡ ಜತೆ ಯಾಟವಾಗಿತ್ತು.
Advertisement
“ಮೊದಲು ಬ್ಯಾಟಿಂಗ್ ಸಿಕ್ಕಿದ್ದರಿಂದ ನಿಜಕ್ಕೂ ಲಾಭವಾಯಿತು. ಇದೊಂದು ಫ್ಲ್ಯಾಟ್ ಟ್ರ್ಯಾಕ್ ಆಗಿತ್ತು. ಕೊನೆಯ ತನಕ ಒಬ್ಬ ಬ್ಯಾಟರ್ ಕ್ರೀಸ್ ಆಕ್ರಮಿಸಿ ಕೊಂಡಿದ್ದೇ ಆದಲ್ಲಿ ನಾವು ಸವಾಲಿನ ಮೊತ್ತ ಗಳಿಸ ಬಲ್ಲೆವು ಎಂಬ ನಂಬಿಕೆ ಇತ್ತು. “ಜೆಮಿ’ ಈ ಕೆಲಸ ಮಾಡಿದರು. ಸ್ಟ್ರೈಕ್ ರೊಟೇಟ್ ಮಾಡುತ್ತ ತಂಡದ ಇನ್ನಿಂಗ್ಸ್ ಬೆಳೆಸಿದರು’ ಎಂಬುದು ಹರ್ಮನ್‌ಪ್ರೀತ್ ಪ್ರತಿಕ್ರಿಯೆ ಆಗಿತ್ತು.
ಬ್ಯಾಟಿಂಗ್ ವೇಳೆ ಕೈಗೆ ಚೆಂಡು ಬಡಿದ ಕಾರಣ ಕೌರ್ ದ್ವಿತೀಯಾರ್ಧದಲ್ಲಿ ಅಂಗಳಕ್ಕೆ ಇಳಿಯಲಿಲ್ಲ. ಆಗ ಸ್ಮತಿ ಮಂಧನಾ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತರು. 3ನೇ ಹಾಗೂ ಅಂತಿಮ ಪಂದ್ಯ ಶನಿವಾರ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್: ಭಾರತ-8 ವಿಕೆಟಿಗೆ 228 (ಜೆಮಿಮಾ 86, ಕೌರ್ 52, ಮಂಧನಾ 36, ಹಲೀìನ್ 25, ನಹಿದಾ ಆಖ್ತರ್ 37ಕ್ಕೆ 2, ಸುಲ್ತಾನಾ ಖಾತುನ್ 41ಕ್ಕೆ 2). ಬಾಂಗ್ಲಾದೇಶ-35.1 ಓವರ್‌ಗಳಲ್ಲಿ 120 (ಫರ್ಗಾನಾ ಹಕ್ 47, ರೀತು ಮೋನಿ 27, ಮುರ್ಶಿದಾ ಖಾತುನ್ 12, ಜೆಮಿಮಾ 3ಕ್ಕೆ 4, ದೇವಿಕಾ 30ಕ್ಕೆ 3). ಪಂದ್ಯಶ್ರೇಷ್ಠ: ಜೆಮಿಮಾ ರೋಡ್ರಿಗಸ್.