Advertisement

ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಗುಂಡಿನ ಕಾಳಗ: ಜೈಶ್‌ ಉಗ್ರನ ಹತ್ಯೆ

09:24 AM Apr 21, 2019 | Sathish malya |

ಹೊಸದಿಲ್ಲಿ : ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ  ಭದ್ರತಾ ಪಡೆಗಳು ನಡೆಸಿರುವ ಗುಂಡಿನ ಕಾಳಗಕ್ಕೆ ಒಬ್ಬ ಜೈಶ್‌ ಎ ಮೊಹಮ್ಮದ್‌ ಉಗ್ರ ಬಲಿಯಾಗಿದ್ದಾನೆ.

Advertisement

ಸೇನೆಯ 32ನೇ ರಾಷ್ಟ್ರೀಯ ರೈಫ‌ಲ್‌ ಕಾವಲು ತಂಡ ವಾತೇರ್‌ಗಾಂವ್‌ ಮೂಲಕ ಸಾಗುತ್ತಿದ್ದಾಗ ಉಗ್ರನೋರ್ವ ಗುಂಡಿನ ದಾಳಿ ನಡೆಸಿದ. ಒಡನೆಯೇ ಕಾವಲು ತಂಡ ಗುಂಡಿನ ಪ್ರತಿ ದಾಳಿ ನಡೆಸಿತು. ಪರಿಣಾಮವಾಗಿ ಆ ಉಗ್ರ ಹತನಾದ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಹತ ಉಗ್ರನ ಬಳಿ ಇದ್ದ ಒಂದು ಪಿಸ್ತೂಲು ಮತ್ತು ಮೂರು ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ ಉಗ್ರನ ಗುರುತು ಪತ್ತೆಯಾಗಿಲ್ಲ ಎಂದವರು ಹೇಳಿದರು.

ಈ ಪ್ರದೇಶದಲ್ಲಿ ಅಡಗಿಕೊಂಡಿರಬಹುದಾದ ಇನ್ನಷ್ಟು ಉಗ್ರರಿಗಾಗಿ ಈಗ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next