Advertisement

ಜು.5ರಂದು ಅಮೆಜಾನ್ ಸಿಎಒ ಸ್ಥಾನದಿಂದ ಜೆಫ್ ಬೆಜೋಸ್ ನಿವೃತ್ತಿ

09:03 AM May 28, 2021 | |

ಸಿಯಾಟಲ್‌: ಇ-ಕಾಮರ್ಸ್‌ ವೆಬ್‌ಸೈಟ್‌ ಅಮೆಜಾನ್‌ ಸಂಸ್ಥಾಪಕ ಜೆಫ್ ಬೆಜೋಸ್‌ ಜು.5ರಂದು ಸಿಇಒ ಸ್ಥಾನ ತೆರವುಗೊಳಿಸಲಿದ್ದಾರೆ. ಅವರ ಸ್ಥಾನಕ್ಕೆ ಆ್ಯಂಡಿ ಜೆಸ್ಸಿ ಅವರು ನೇಮಕಗೊಳ್ಳಲಿದ್ದಾರೆ.

Advertisement

ಜೆಫ್ ಬೆಜೋಸ್‌ ಅವರು ಅಮೆಜಾನ್‌ ವೆಬ್‌ ಸೈಟ್‌ ಸ್ಥಾಪಿಸಿ, ಭಾರತ ಸೇರಿದಂತೆ ಜಗತ್ತಿನಾದ್ಯಂತ ಅದನ್ನು ಜನಪ್ರಿಯಗೊಳಿಸಿದ ಹೆಗ್ಗಳಿಕೆ ಅವರದ್ದು. 27 ವರ್ಷಗಳ ಹಿಂದೆ ಅಂದರೆ 1994ರ ಜು.5ರಂದು ಅಮೆಜಾನ್‌ ಅನ್ನು ಹುಟ್ಟುಹಾಕಲಾಗಿತ್ತು. ಹೀಗಾಗಿ, ಅದೇ ದಿನ ಹುದ್ದೆಯಿಂದ ಕೆಳಗಿಳಿಯಲು ತೀರ್ಮಾನಿಸಿದ್ದೇನೆ ಎಂದು ಹೇಳಿದ್ದಾರೆ.

ಫೆಬ್ರವರಿಯಲ್ಲಿ ಈ ಬಗ್ಗೆ ಘೋಷಣೆ ಮಾಡಲಾಗಿತ್ತು. ಬುಧವಾರವಷ್ಟೇ ಹಾಲಿವುಡ್‌ನ‌ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆ ಎಂಜಿಎಂ ಸ್ಟುಡಿಯೋಸ್‌ ಅನ್ನು 61 ಸಾವಿರ ಕೋಟಿ ರೂ.ಗಳಿಗೆ ಖರೀದಿ ಮಾಡುವ ನಿರ್ಧಾರವನ್ನು ಅಮೆಜಾನ್‌ ಪ್ರಕಟಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next