Advertisement

JEE ಅಡ್ವಾನ್ಸ್ ಫಲಿತಾಂಶ:ರಾಷ್ಟ್ರಮಟ್ಟದಲ್ಲಿ ಜ್ಞಾನಸುಧಾಕ್ಕೆ 10 ಸಾವಿರದೊಳಗೆ 10 ರ‍್ಯಾಂಕ್

10:47 AM Jun 20, 2023 | Team Udayavani |

ಕಾರ್ಕಳ: ರಾಷ್ಟ್ರಮಟ್ಟದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆಗಳ (ಐ.ಐ.ಟಿ) ಪ್ರವೇಶಕ್ಕೆ ನಡೆದಿದ್ದ ಜೆ.ಇ.ಇ ಅಡ್ವಾನ್ಸ್ನ ಫಲಿತಾಂಶ ಭಾನುವಾರ ಪ್ರಕಟಗೊಂಡಿದ್ದು, ಜ್ಞಾನಸುಧಾಕ್ಕೆ 10 ಸಾವಿರದೊಳಗಿನ 10 ರ‍್ಯಾಂಕ್ ಬಂದಿದೆ.

Advertisement

ಜನರಲ್ ಕೆಟಗರಿಯಲ್ಲಿ ವಿದ್ಯಾರ್ಥಿಗಳಾದ ಧನ್ವಿತ್ ನಾಯಕ್ 3918ನೇ ರ‍್ಯಾಂಕ್, ಪ್ರಣವ್ ಗುಜ್ಜರ್ 5601ನೇ ರ‍್ಯಾಂಕ್, ಸಮೃದ್ಧ್ ನೆಲ್ಲಿ 5769ನೇ ರ‍್ಯಾಂಕ್ ಹಾಗೂ ಜನರಲ್ ಇ.ಡಬ್ಲು.ಎಸ್ ಕೆಟಗರಿಯಲ್ಲಿ 715ನೇ ರ‍್ಯಾಂಕ್, ಒ.ಬಿ.ಸಿ-ಎನ್.ಸಿ.ಎಲ್ ಕೆಟಗರಿಯಲ್ಲಿ ಸಾಯಿ ಲಿಖಿತ್ ರೆಡ್ಡಿ 3947ನೇ ರ‍್ಯಾಂಕ್, ಅಮೃತ್ ಗೌಡ ಎಂ. ಪಾಟೀಲ್ 4117 ನೇ ರ‍್ಯಾಂಕ್, ಅರ್ಹನ್.ಎ.ಕೆ. 7252 ನೇ ರ‍್ಯಾಂಕ್, ಶ್ರೇಯಸ್.ಆರ್.ಗೌಡ 7705 ನೇ ರ‍್ಯಾಂಕ್,  ಸೂರ್ಯ ವಿ. 7811ನೇ ರ‍್ಯಾಂಕ್, ಎಂ.ಪಿ.ಪ್ರೀತಮ್ 8619 ನೇ ರ‍್ಯಾಂಕ್ ಗಳಿಸಿರುತ್ತಾರೆ.

ಈ ಬಾರಿ ದೇಶಾದಾದ್ಯಂತ‌ 1.80.372 ಅಭ್ಯರ್ಥಿಗಳು  ಜೆ.ಇ.ಇ 1 ಮತ್ತು 2 ರಲ್ಲಿ ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 36,264 ಮಂದಿ ಬಾಲಕರು ಮತ್ತು 7509  ಬಾಲಕಿಯರು  ಸೇರಿ ಒಟ್ಟು 43,7773 ಮಂದಿ ಅರ್ಹತೆಯನ್ನು ಗಿಟ್ಟಿಸಿಕೊಂಡಿದ್ದಾರೆ.

ಜ್ಞಾನಸುಧಾಕ್ಕೆ ಈಗಾಗಲೇ  ರಾಷ್ಟಮಟ್ಟದ ನೀಟ್ ಪರೀಕ್ಷೆಯಲ್ಲಿ 93 ವಿದ್ಯಾರ್ಥಿಗಳು 500ಕ್ಕಿಂತ ಅಧಿಕ ಅಂಕವನ್ನು,  ಕ.ಸಿ.ಇ.ಟಿಯಲ್ಲಿ 105 ವಿದ್ಯಾರ್ಥಿಗಳು 5000 ದೊಳಗಿನ ರ‍್ಯಾಂಕನ್ನು ಗಳಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಈ ಎಲ್ಲಾ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಅಭಿನಂದಿಸಿದ್ದು, ಜ್ಞಾನಸುಧಾ ಪರಿವಾರ ಹರ್ಷವ್ಯಕ್ತಪಡಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next