Advertisement
ಮಾಡೆಲ್, ನಟ, ನಟಿಯರು ಹಾಗೂ ಯುವಜನರಿಗೆ ಬಟ್ಟೆಗಳ ಮೇಲಿನ ಮೋಹ ಎಂದಿಗೂ ಕಡಿಮೆಯಾಗುವುದಿಲ್ಲ. ಅದು ಯಾವುದೇ ರೀತಿಯಲ್ಲಿದ್ದರೂ ಫ್ಯಾಷನ್ ಎಂಬ ನೆಪ ಹೇಳಿ ಆ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಈ ಕಾರಣಕ್ಕಾಗಿಯೇ ದಶಕಗಳ ಹಿಂದೆ ಹಲವು ಧಿರಿಸುಗಳು ಮತ್ತೆ ಸದ್ದು ಮಾಡಲಾರಂಭಿಸುತ್ತಿವೆ.
ಹೊಸ ಫ್ಯಾಷನ್‌ಗಳ ಮುಖೇನ ಎಲ್ಲರ ಗಮನ ಸೆಳೆಯುವ ಸಿನೆಮಾ ನಟಿಯರೀಗ ಡಂಗ್ರೀಸ್ ಪ್ರೇಮಕ್ಕೆ ಸಿಲುಕಿದ್ದಾರೆ. ಎಲ್ಲ ನಟಿಯರು ವಿವಿಧ ವಿನ್ಯಾಸದ ಡಂಗ್ರೀಸ್ ಧರಿಸಿ ಮಿಂಚುತ್ತಿದ್ದಾರೆ.ಈ ನಡುವೆ ಡಂಗ್ರೀಸ್‌ನಲ್ಲೇ ನಾನಾ ಬಗೆಯ ಡ್ರೆಸ್ ಕೋಡ್ ಧರಿಸುವುದು ಕಾಮನ್ ಆಗಿದೆ. ಸ್ಕರ್ಟ್ ಶೈಲಿ, ಶಾರ್ಟ್ಸ್, ಡಿವೈಡರ್, ಪ್ಯಾಂಟ್ ಶೈಲಿಯ ಜತೆ ಟ್ರೆಂಡಿಯಾಗಿವೆ. ಡಂಗ್ರೀಸ್ ಡ್ರೆಸ್‌ಕೋಡ್ ಈಗ ಟಿನೇಜರ್ಸ್ ಅನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಜೀನ್ಸ್, ಕಾಟನ್ ಹಾಗೂ ವಿವಿಧ ಮೆಟೀರಿಯಲ್‌ಗಳಲ್ಲಿ ದೊರೆಯುವ ಡಂಗ್ರೀಸ್ ಧರಿಸಿದರೆ ಮಾಡರ್ನ್ ಲುಕ್ ಬರುವುದರಲ್ಲಿ ಸಂಶಯವಿಲ್ಲ. ಡಂಗ್ರೀಸ್ ಫ್ಯಾಷನ್ ಬಂದಾಗ ಸಿನೆಮಾಗಳಲ್ಲಿ ನಟ- ನಟಿಯರು, ಮಾಡೆಲ್‌ಗಳು ಹೆಚ್ಚಾಗಿ ಧರಿಸುತ್ತಿದ್ದರು. ಮೊದಲು ಪ್ಯಾಂಟ್ ಡಂಗ್ರೀಸ್ ಇತ್ತು. ಬಳಿಕ ಮುಕ್ಕಾಲು ಪ್ಯಾಂಟ್, ಬರ್ಮುಡಾದಲ್ಲೂ ಈ ಸ್ಟೈಲ್ ಬಂತು.
Related Articles
Advertisement
ಯಾರಿಗೆ ಸೂಟ್ ಆಗುತ್ತೆ?ಪ್ರಸ್ತುತ ಡಂಗ್ರೀಸ್ ಟ್ರೆಂಡ್ ಫ್ಯಾಷನ್ ಲೋಕದಲ್ಲಿ ಸದ್ದು ಮಾಡುತ್ತಿರುವ ಹಿನ್ನೆಲೆಯಲ್ಲಿ ಎಲ್ಲರೂ ಅದನ್ನೇ ಧರಿಸಬೇಕು ಎಂದು ಬಯಸುವುದರಲ್ಲಿ ತಪ್ಪಿಲ್ಲ. ಆದರೆ ಎಲ್ಲರೂ ಧರಿಸಿದರೆ ಅದು ಅಷ್ಟು ಸುಂದರವಾಗಿ ಕಾಣಿಸುವುದಿಲ್ಲ. ಪ್ಲಂಪಿಯಾಗಿರುವವರಿಗೆ ಡಂಗ್ರೀಸ್ ಚೆನ್ನಾಗಿ ಕಾಣಿಸುವುದಿಲ್ಲ. ಉದ್ದಗಿರುವವರು ಆ ಸ್ಟೈಲ್ ಮೊರೆ ಹೋದರೆ ಸಖತ್ ಲುಕ್ ಕೊಡು ತ್ತದೆ. ವಿವಿಧ ವಿನ್ಯಾಸ, ಮೆಟೀರಿಯಲ್‌ಗಳಲ್ಲಿ ಲಭ್ಯವಾಗುವ ಡಂಗ್ರೀಸ್‌ನಲ್ಲಿ ಜೀನ್ಸ್ ಮೆಟೀರಿಯಲ್ ಡಂಗ್ರೀಸ್ ಸುಂದರವಾಗಿ ಕಾಣುತ್ತದೆ. ಇದನ್ನು ಧರಿಸಿದರೆ ಕ್ಯಾಶುವಲ್ ಲುಕ್ ದೊರೆಯುತ್ತದೆ. ಈ ಬಟ್ಟೆ ಧರಿಸಿದಾಗ ಅದಕ್ಕೆ ತಕ್ಕಂತೆ ಹೇರ್‌ಸ್ಟೈಲ್ ಮಾಡಿ, ಆಕ್ಸಸರೀಸ್ ಧರಿಸಿದರೆ ಆಕರ್ಷಕವಾಗಿ ಕಾಣಿಸಿಕೊಳ್ಳಬಹುದು. ಆಯ್ಕೆಯಲ್ಲಿ ಇರಲಿ ಎಚ್ಚರ
ಡಂಗ್ರೀಸ್ ಖರೀದಿಸಬೇಕು ಎಂದು ಹೋದಾಗ ಡಂಗ್ರೀಸ್‌ನ ಮೆಟೀರಿಯಲ್ ಪರಿಶೀಲಿಸಿಕೊಳ್ಳುವುದನ್ನು ಮರೆಯಬೇಡಿ. ಯಾಕೆಂದರೆ ದುಬಾರಿ ಬೆಲೆ ತೆತ್ತು ಕಳಪೆ ಗುಣಮಟ್ಟದ ಬಟ್ಟೆ ಖರೀದಿಸಿದರೆ ಸ್ಟೈಲೀಶ್ ಆಗಿ ಕಾಣಬೇಕು ಎಂದು ಬಯಸುವವರಿಗೆ ನಿರಾಸೆಯಾದೀತು. ಸಾಮಾನ್ಯವಾಗಿ ಡಂಗ್ರೀಸ್ ಬೆಲೆ 700 ರೂ. ನಿಂದ ಆರಂಭವಾಗಿ 3,000 ರೂ. ವರೆಗೆ ಇರುತ್ತದೆ. ಪ್ರಜ್ಞಾ ಶೆಟ್ಟಿ