ಬೀದರ್: ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ಜಾರಿಗಾಗಿ ಜಾತ್ಯತೀತ ಜನತಾದಳ (ಜೆಡಿಎಸ್) ಹಮ್ಮಿಕೊಂಡಿರುವ ‘ಜನತಾ ಜಲಧಾರೆ- ಗಂಗಾ ರಥಯಾತ್ರೆ’ಗೆ ಶನಿವಾರ ಕಮಲನಗರ ತಾಲೂಕಿನ ಸಂಗಮ ಗ್ರಾಮದಲ್ಲಿ ಚಾಲನೆ ನೀಡಲಾಯಿತು.
ಸಂಗಮದ ಗ್ರಾಮದ ಮೂರು ನದಿಗಳು ಸೇರುವ ತ್ರಿವೇಣಿ ನದಿಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ಬಂಡೆಪ್ಪ ಕಾಶೆಂಪುರ್ ನೇತೃತ್ವದಲ್ಲಿ ರಥಯಾತ್ರೆಗೆ ಚಾಲನೆ ಕೊಡಲಾಯಿತು. ಕುಂಭ ಕಳಸ ಹೊತ್ತ ಮಹಿಳೆಯರು ಪವಿತ್ರ ಜಲವನ್ನು ಸಂಗರಹ ಮಾಡಿ ತುಂಬಿಕೊಂಡು ಪೂಜೆ ಮಾಡಿ, ಬಳಿಕ ರಥದಲ್ಲಿ ಹಾಕಿ ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕಾಶೆಂಪುರ್, ರಾಜ್ಯದಲ್ಲಿ ಈ ಹಿಂದೆ ಜೆಡಿಎಸ್ ಸರ್ಕಾರದ ಅವಧಿಯಲ್ಲಿ ನೀರಾವರಿ ಯೋಜನೆಗಳಿಗೆ ಒತ್ತು ನೀಡಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ಮು ಆಡಳಿತಕ್ಕೆ ತಂದರೆ ಮುಂದಿನ ಐದು ವರ್ಷದ ಅಧಿಕಾರದ ಅವಧಿಯಲ್ಲಿ ಬಾಕಿ ಮತ್ತು ಹೊಸ ನೀರಾವರಿ ಯೋಜನೆಗಳನ್ನು ಪೂರ್ಣಗೊಳಸಿ ಸಮಗ್ರ ಜಲ ಸಂರಕ್ಷಣೆ ಮಾಡುವ ಕುರಿತು ಜನರಿಗೆ ವಾಗ್ದಾನ ಮಾಡಲು ಈ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ಇದನ್ನೂ ಓದಿ:ಅಂಜನಾದ್ರಿಯಲ್ಲಿ ಖಾವಿಧಾರಿ ಹನುಮಭಕ್ತರ ದಂಡು: ಯಶಸ್ವಿಯಾಗಿ ಜರುಗಿದ ಮಾಲಾ ವಿಸರ್ಜನೆ
ರಾಜ್ಯದ 15 ಕಡೆಗಳಿಂದ ಈ ರಥ ಹೊರಟು ಬೆಂಗಳೂರು ತಲುಪುವುದು. ಯಾತ್ರೆ ನಿಮಿತ್ತ ಏ. 20 ಕ್ಕೆ ಬೀದರ ತಾಲೂಕಿನ ಕಮಠಾಣಾದಲ್ಲಿ ಬೃಹತ್ ಸಾರ್ವಜನಿಕ ಸಮಾವೇಶ ನಡೆಯಲ್ಲಿದ್ದು, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಮತ್ತಿತರ ನಾಯಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ ಪಾಟೀಲ ಸೋಲಪುರ್, ಇರ್ಷಾದ ಖಾದ್ರಿ, ರಮೇಶ ಡಾಕುಳಗಿ, ಸಂತೋಷ ರಾಸುರ್, ರಾಜು ಕಡ್ಯಾಳ್, ಶಿವರಾಜ ಹುಲಿ, ಸಂಜು ರೆಡ್ಡಿ, ದೇವಿಂದ್ರ ಸೋನಿ, ಐಲಿನ್ ಮಠಪತಿ ಮತ್ತಿತರರು ಇದ್ದರು.