Advertisement
ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಮೈತ್ರಿಗೆ ಕಾಂಗ್ರೆಸ್ ನಡವಳಿಕೆ ಮೇಲೆ ನಿಂತಿದೆ ಎಂದಿರುವ ಮುಖ್ಯಮಂತ್ರಿ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಕೇವಲ ಕಾಂಗ್ರೆಸ್ ನಡವಳಿಕೆಯಿಂದ ಮೈತ್ರಿ ಮುಂದುವರಿಯುವುದಿಲ್ಲ. ಜೆಡಿಎಸ್ ನಡವಳಿಕೆಯೂ ಮುಖ್ಯ ಎಂದಿದ್ದಾರೆ.
Related Articles
Advertisement
ಆದರೆ, ಪ್ರಧಾನಿ ಮೋದಿ ತಮ್ಮ ಸ್ನೇಹಿತ ಅನಿಲ್ ಅಂಬಾನಿಗೆ ಅನುಕೂಲ ಮಾಡಿಕೊಡಲು ಯುದ್ಧ ವಿಮಾನ ತಯಾರಿಕೆಯಲ್ಲಿ ಯಾವುದೇ ಅನುಭವ ಇಲ್ಲದ ರಿಲಾಯನ್ಸ್ ಸಂಸ್ಥೆಗೆ ವಹಿಸಿಕೊಡಲು ಮುಂದಾಗಿದ್ದಾರೆ ಎಂದು ಆಪಾದಿಸಿದರು.
ಯುಪಿಎ ಅವಧಿಯಲ್ಲಿ ಪ್ರತಿ ವಿಮಾನಕ್ಕೆ 526 ಕೋಟಿ ರೂ. ನಿಗದಿಪಡಿಸಲಾಗಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಮಾಡಿಕೊಂಡ ಒಪ್ಪಂದದಂತೆ ಪ್ರತಿ ವಿಮಾನಕ್ಕೆ 1670 ಕೋಟಿ ರೂ. ನಿಗದಿ ಮಾಡಲಾಗಿದೆ. ಆರು ವರ್ಷದಲ್ಲಿ ವಿಮಾನದ ದರದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಹೆಚ್ಚಳವಾಗಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಿದರು.
ದೇಶದ ಭದ್ರತೆ ವಿಷಯದಲ್ಲಿ ರಾಷ್ಟ್ರ ಪ್ರೇಮದ ಮಾತುಗಳನ್ನಾಡುವ ಪ್ರಧಾನಿ ವಿಮಾನ ಖರೀದಿ ವಿಚಾರದಲ್ಲಿ ದೇಶದ ಹಿತಾಸಕ್ತಿ ಬಲಿ ಕೊಟ್ಟಿದ್ದು, ಎಚ್‌ಎಎಲ್‌ಗೆ ಸಿಗುವ ಅವಕಾಶವನ್ನು ತಪ್ಪಿಸಿದ್ದಾರೆ. ಅಲ್ಲದೇ ಸುಮಾರು 60 ಸಾವಿರ ಕೋಟಿ ರೂ. ದೇಶದ ಸಾರ್ವಜನಿಕರ ಹಣ ಲೂಟಿ ಮಾಡಿರುವ ನೀರವ್ ಮೋದಿ, ಚೌಕ್ಸಿ, ಅನಿಲ್ ಅಂಬಾನಿ ಜತೆ ಪ್ರಧಾನಿ ಮೋದಿ ಭಾಗಿಯಾಗಿ ಬೂಟಾಟಿಕೆ ಸರ್ಕಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.