ರಾಮನಗರ: ಜಿಲ್ಲಾ ಕೇಂದ್ರದ ಬಹು ನಿರೀಕ್ಷಿತ ಜಿಲ್ಲಾಸ್ಪತ್ರೆ ಉದ್ಘಾಟನೆ ವೇಳೆ ಪರ ವಿರೋಧದ ಚರ್ಚೆ ಜೋರಾಗಿದ್ದಲ್ಲದೆ ಸ್ಥಳೀಯ ಶಾಸಕರು ಬರುವ ಮುನ್ನವೇ ಆರೋಗ್ಯ ಸಚಿವ ಸುಧಾಕರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅಶ್ವಥ್ ನಾರಾಯಣ್ ಆಸ್ಪತ್ರೆಯನ್ನು ತರಾತುರಿಯಲ್ಲಿ ಉದ್ಘಾಟಿಸಿದ್ದು ಪರಸ್ಫರ ವಾಗ್ವಾದಕ್ಕೆಕಾರಣವಾಯಿತು.
ಉದ್ಘಾಟನೆಗೆ ಐದು ನಿಮಿಷವಷ್ಟೇ ತಡವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಶಾಸಕಿ ಅನಿತಾ ಕುಮಾರಸ್ವಾಮಿ ಆಗಮಿಸಿದರು. ಅಷ್ಟರಲ್ಲಿ ಉದ್ಘಾಟನೆಯಾಗಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ವೇಳೆ ಜೆಡಿಎಸ್ ಕಾರ್ಯಕರ್ತರು, ಸರ್ಕಾರ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಪರ ವಿರೋಧದ ಘೋಷಣೆ ಜೋರಾಗಿತ್ತು.
ಇದನ್ನೂ ಓದಿ: ಮೇಘಾಲಯದಲ್ಲಿ ಸಿಎಂ ಸಂಗ್ಮಾ ಪಕ್ಷಕ್ಕೆ ಭರ್ಜರಿ ಮುನ್ನಡೆ, ಈಶಾನ್ಯದಲ್ಲಿ ಟಿಎಂಸಿ ಕಮಾಲ್!
ಪೊಲೀಸರ ಸಮಯ ಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿದಂತಾಯಿತು. ವೇದಿಕೆಯಲ್ಲಿಮೊದಲು ಹಾಕಲಾಗಿದ್ದ ಸೀಟ್ ಗಳನ್ನು ಗೊಂದಲಗಳ ಬಳಿಕ ಅದಲು ಬದಲು ಮಾಡಿದ್ದಲ್ಲದ್ದು ವಿಶೇಷವಾಗಿತ್ತು.
ಇದೇ ವೇಳೆ ಸಂಸದ ಡಿಕೆ ಸುರೇಶ್ ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಗರಂ ಆದ ಘಟನೆ ನಡೆಯಿತು.
ಸಮಾರಂಭದಲ್ಲಿ ಸರ್ವ ಪಕ್ಷಗಳ ಚುನಾಯಿತ ಪ್ರತಿನಿಧಿಗಳು, ಮುಖಂಡರು ಹಾಜರಿದ್ದರು.