Advertisement
ನಗರದ ಕಲ್ಕುಣಿಕೆ ರಂಗನಾಥ ಬಡಾವಣೆಯಲ್ಲಿ ಭಾನುವಾರ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಸಮಾವೇಶ ಉದ್ಘಾಟಿಸಿ ಮಾತನಾಡಿ, ರಾಜ್ಯ ಬಿಜೆಪಿ ಸರಕಾರ ಜನವಿರೋದಿ, ಭ್ರಷ್ಟ ಸರಕಾರವಾಗಿದ್ದರೆ ಕೇಂದ್ರ ಸರಕಾರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ನಿರ್ನಾಮ ಮಾಡಲು ಹೊರಟಿದೆ. ಪ್ರಶ್ನಿಸುವವರ ಧ್ವನಿಯನ್ನು ಅಡಗಿಸಲು ಮುಂದಾಗಿದೆ ಎಂದು ಆರೋಪಿಸಿ, ಶಾಸಕ ಮಂಜಣ್ಣ ತಂದೆ ಸಿದ್ದರಾಮಯ್ಯರ ಸರಕಾರದ ಅವಧಿಯಲ್ಲಿ ಅಭಿವೃದ್ದಿ ಪರ್ವವನ್ನೇ ನಡೆಸಿದ್ದಾರೆ. ಜನರ ಕಷ್ಟಗಳಿಗೆ ಸ್ಪಂದಿಸಿರುವ ಇವರನ್ನು ಮತ್ತೆ ಗೆಲ್ಲಿಸಬೇಕೆಂದು ಮನವಿ ಮಾಡಿ, ಜೆಡಿಎಸ್ 25 ಸ್ಥಾನ ಗೆಲ್ಲಲ್ಲ. ಜೆಡಿಎಸ್‌ಗೆ ನೀವು ಮತ ನೀಡಿದರೆ ಬಿಜೆಪಿಗೆ ನೀಡಿದಂತೆ ಎಂದು ಎಚ್ಚರಿಸಿದರು.
ಶಾಸಕ ಅನಿಲ್‌ಚಿಕ್ಕಮಾದು ಮಾತನಾಡಿ, ನಮ್ಮ ತಂದೆಯವರನ್ನು ಕಾಂಗ್ರೆಸ್ ಪಕ್ಷ ರಾಜಕೀಯವಾಗಿ ಬೆಳೆಸಿತು. ಎಚ್.ಡಿ.ಕೋಟೆಯಲ್ಲಿ ಜೆಡಿಎಸ್ ಪಕ್ಷದ ಶಾಸಕರಾಗಿ, ನಿಧನಾನಂತರ ನಮ್ಮ ಕುಟುಂಬ ಜೆಡಿಎಸ್ ವರಿಷ್ಟರನ್ನು ಭೇಟಿ ಮಾಡಲು ಹೋದಾಗ ಭೇಟಿಯಾಗಲು ಅವಕಾಶವೇ ಕೊಡದೆ, ಗೇಟಿನ ಬಾಗಿಲು ಹಾಕಿಕೊಂಡರು. ಹಣವಿಲ್ಲವೆಂದು ನಮಗೆ ಟಿಕೆಟ್ ನಿರಾಕರಿಸಿದರು. ಸಂಕಷ್ಟದ ವೇಳೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, ಶಾಸಕ ಮಂಜಣ್ಣನವರು ನಾವಿದ್ದೇವೆ ಎಂದು ಹೇಳಿ, ತನು, ಮನ,ಧನದ ಜೊತೆಗೆ ಟಿಕೆಟ್ ನೀಡಿ ಗೆಲ್ಲಿಸಿದ್ದಾರೆ. ಮಂಜಣ್ಣ ನಮ್ಮ ಕುಟುಂಬವನ್ನು ಉಳಿಸಿದ್ದಾರೆ. ಕೆಲವರು ಹುಣಸೂರಿಗೆ ಪ್ರಚಾರಕ್ಕೆ ಬರಲ್ಲಾ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ, ಮಂಜುನಾಥ್‌ರ ಸಹಾಯ ಮರೆಯಲು ಸಾಧ್ಯವಿಲ್ಲ. ಮಾ.30 ರಂದು ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡುವೆ. ನನ್ನ ಶಕ್ತಿಮೀರಿ ಮಂಜಣ್ಣನ ಗೆಲುವಿಗೆ ಸಹಕಾರಿಯಾಗುತ್ತೇನೆ. ಅವರು ಸಚಿವರು ಆಗುತ್ತಾರೆಂದರು. ಶಾಸಕ ಹೆಚ್.ಪಿ.ಮಂಜುನಾಥ್ ಮಾತನಾಡಿ ನಾನು ಇಲ್ಲೆ ಹುಟ್ಟಿ ಬೆಳೆದವನು, ಇಲ್ಲೇ ಮಣ್ಣಾಗುವವನು, ಕಲ್ಕುಣಿಕೆ ನನ್ನೂರು. 15 ವರ್ಷಗಳಿಂದ ತಾಲೂಕಿನ ಜನರ ಕಷ್ಟ ಸುಖಕ್ಕೆ ನಾನು ಇದ್ದೇನೆ. ನಾನು ಕಾಮಧೇನು ರೀತಿಯಲ್ಲಿ ಈ ತಾಲೂಕಿನ ಜನತೆಯ ಸೇವೆ ಮಾಡಿದ್ದೇನೆ. ಸಿದ್ದರಾಮಯ್ಯರ ಗರಡಿಯಲ್ಲಿ ಬೆಳೆದವನು, 15 ವರ್ಷಗಳಿಂದ ತಾಲೂಕಿಗೆ ಬರದವರು ಕಳೆದ 15ದಿನಗಳ ಹಿಂದೆ ಬಂದು ಶಾಂತಿಯನ್ನು ಹಾಳು ಮಾಡುತ್ತಿದ್ದೀರಿ. ಎಲ್ಲಿಂದಲೋ ಬಂದು ಶೆಟ್ಟಿಯನ್ನು 15ದಿನಗಳ ಒಳಗಾಗಿ ಇಲ್ಲಿಂದ ಖಾಲಿ ಮಾಡಿಸುತ್ತೇನೆ ಎಂದು ಹೇಳಿದ್ದಾರೆ. ಚುನಾವಣೆ ನಂತರ ನೀವೆ ಗಂಟು ಮೂಟೆ ಕಟ್ಟಿಕೊಂಡು ಅವರೇ ಹೋಗ್ತಾರೆ. ಕೋವಿಡ್ , ಅತಿವೃಷ್ಟಿ ವೇಳೆ ಬರಲಿಲ್ಲಾ. ನಿಮಗೆ ಜನರು ತಕ್ಕಪಾಠ ಕಲಿಸುತ್ತಾರೆ. ನನ್ನನ್ನು ಮೂರು ಬಾರಿ ಶಾಸಕ ಆಗಿದ್ದಾನೆ. ಅವನ ಸೇವೆ ಸಾಕು ಎಂದು ಹೇಳುವ ನೀವು ನಾಲ್ಕುಬಾರಿ ಶಾಸಕ, ಎರಡುಬಾರಿ ಮಂತ್ರಿಆಗಿಲ್ಲವೇ ಎಂದು ಜಿಟಿಡಿಯವರ ಹೆಸರೇಳದೆ ಕುಟುಕಿದರು. ಇವರ ಅಪಪ್ರಚಾರಕ್ಕೆ ಮರುಳಾಗಬೇಡಿರೆಂದು ಮನವಿ ಮಾಡಿದರು.
Related Articles
Advertisement
ಜಿಲ್ಲಾ ಕಾಂಗ್ರೆಸ್‌ಅಧ್ಯಕ್ಷ ಡಾ.ವಿಜಯ್‌ಕುಮಾರ್, ವಕೀಲಚನ್ನಬಸಪ್ಪ, ಜಿಲ್ಲಾ ಕಾರ್ಯದರ್ಶಿ ಜಯರಾಂ ಮಾತನಾಡಿದರು. ದಿ.ಧ್ರುವನಾರಾಯಣ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜೆಡಿಎಸ್ ತೊರೆದ ಹಲವರು ಕಾಂಗ್ರೆಸ್ ಸೇರ್ಪಡೆಗೊಂಡರು. ಹಲವಾರು ಮುಖಂಡರು ವೇದಿಕೆಯಲ್ಲಿದ್ದರು. ಕಾರ್ಯಕ್ರಮಕ್ಕೂ ಮುನ್ನಾ ಶಾಸಕರಾದ ಡಾ.ಯತೀಂದ್ರಸಿದ್ದರಾಮಯ್ಯ, ಮಂಜುನಾಥ್, ಅನಿಲ್‌ಚಿಕ್ಕಮಾದು, ಅಮಿತ್‌ದೇವರಹಟ್ಟಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್ ಸೇರಿದಂತೆ ಗಣ್ಯರನ್ನು ಭವ್ಯ ಮೆರವಣಿಗೆಯಲ್ಲಿ ಕರೆ ತರಲಾಯಿತು.