ಕಲಬುರಗಿ: ರಾಜ್ಯದಲ್ಲಿ ತಮ್ಮ ದೂರದೃಷ್ಟಿತ್ವದಿಂದ ಅತ್ಯುತ್ತಮ ಆಡಳಿತ ಮತ್ತು ಜನಮುಖೀ ಕೆಲಸಗಳಿಂದ ಹೆಸರಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್ ಪುನಃ ಪುಟಿದೇಳಲಿದೆ. 2023ರಲ್ಲಿ ಸರಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ಪಕ್ಷದ ರಾಜ್ಯ ಕೋರ್ ಕಮೀಟಿ ಸದಸ್ಯ ನಾಸೀರ ಹುಸೇನ್ ಉಸ್ತಾದ್ ಹೇಳಿದರು.
ನಗರದ ಸಾರ್ವಜನಿಕ ಉದ್ಯಾನವನದಲ್ಲಿರುವ ಪಕ್ಷದ ಕಚೇರಿಯಲ್ಲಿ ಜು.30ಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬರುತ್ತಿರುವ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಭಾನುವಾರ ಪಕ್ಷದ ದಕ್ಷಿಣ ಮತಕ್ಷೇತ್ರದ ಕಾರ್ಯಕರ್ತರ ಮತ್ತು ಸದಸ್ಯರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
20 ತಿಂಗಳಲ್ಲೇ ಜನಪರ ಆಡಳಿತ ನೀಡಿದ ಕುಮಾರಣ್ಣ ಅವರನ್ನು ಈಗಲೂ ಜನ ಇಷ್ಟ ಪಡುತ್ತಾರೆ. ಅವರು ಅಧಿಕಾರಕ್ಕೆ ಬರಬೇಕು ಎಂದು ಬಯಸುತ್ತಾರೆ. ಇಂತಹ ಸಂದರ್ಭದಲ್ಲಿ ಪಕ್ಷದ ಎಲ್ಲ ಸ್ತರದ ನಾಯಕರು, ಕಾರ್ಯಕರ್ತರು ಮತ್ತೂಮ್ಮೆ ಜೆಡಿಎಸ್ ಅಧಿಕಾರಕ್ಕೆ ತರಲು ನಾವು ಪ್ರಯತ್ನಿಸಬೇಕು ಎಂದರು.
ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಶ್ಯಾಮರಾವ್ ಸೂರನ್ ಮಾತನಾಡಿ, ರಾಜ್ಯದಲ್ಲಿರುವ ಎಲ್ಲ ಪಕ್ಷಗಳು ಜನರ ವಿಶ್ವಾಸವನ್ನು ಕಳೆದುಕೊಂಡಿದೆ. ಜನರಿಗೆ ಭ್ರಷ್ಟಾಚಾರ, ಬೆಲೆ ಏರಿಕೆ, ಕಮಿಷನ್ ಮತ್ತು ಜಾತಿ ರಾಜಕಾರಣ ನೋಡಿ ರೋಸಿ ಹೋಗಿದ್ದಾರೆ. ಆದ್ದರಿಂದ ನಾವು ನಮ್ಮ ಪಕ್ಷದ ಉದ್ದೇಶ ಮತ್ತು ಕುಮಾರಸ್ವಾಮಿ ಅವರ ದೃಷ್ಟಿಕೋನ ಜನರಿಗೆ ತಿಳಿಸಿದರೆ ನಾವು ಖಂಡಿತವಾಗಿ ಜನರ ಮತಗಳಿಸಲು ಸಾಧ್ಯವಾಗುತ್ತದೆ ಎಂದರು.
ಅಲಿಂ ಇನಾಂದಾರ್, ಬಸವರಾಜ್ ಬಿರಬಿಟ್ಟೆ ಮಾತನಾಡಿದರು. ಸಂದರ್ಭದಲ್ಲಿ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಕೃಷ್ಣ ರೆಡ್ಡಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಲಿಂ ಇನಾಮದಾರ, ಮನೋಹರ ಪೋದ್ದಾರ, ಅಬ್ದುಲ್ ಮೆಹಿಮೂದ್, ಮಲಿಕ ನಾಗನಹಳ್ಳಿ, ಮಹಾಂತಪ್ಪ ಮದರಿ, ಬಸವರಾಜ ಬಿರಬಿಟ್ಟಿ, ಅಲಿಂ ಪಟೇಲ್, ವಲಸಲ್‌ಕುಮಾರ ಮಾಣಿಕ ಶಾಪೂರಕರ್, ಮಹಮ್ಮದ ದಸ್ತಗೀರಸಾಬ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.
ಈ ಬಾರಿ ಜಿಲ್ಲೆಯಲ್ಲಿ ಜೆಡಿಎಸ್ ಅತ್ಯಂತ ಉತ್ಸಾಹದಿಂದ ಕಣಕ್ಕೆ ಇಳಿಯಲಿದೆ. ಅಫಜಲಪುರದಲ್ಲಿ ಶಿವಕುಮಾರ ನಾಟೀಕಾರ, ಚಿಂಚೋಳಿಯಲ್ಲಿ ಸಂಜೀವನ ಯಾಕಾಪುರ ಮತ್ತು ಸೇಡಂನಲ್ಲಿ ಬಾಲರಾಜ್ ಗುತ್ತೇದಾರ್‌ನಂತಹ ಯುವಕರು ಕಣಕ್ಕಿಳಿಯಲಿದ್ದಾರೆ. ಅವರನ್ನು ನಾವು ಖಂಡಿತ ಗೆಲ್ಲಿಸಬೇಕು. ಆ ನಿಟ್ಟಿನಲ್ಲಿ ಜನರಲ್ಲಿ ನಮ್ಮ ಪಕ್ಷ ಮತ್ತು ಕುಮಾರಸ್ವಾಮಿ ಅವರ ಆಡಳಿತದ ಕುರಿತು ಜಾಗೃತಿ ಮೂಡಿಸಿ ಮನವರಿಕೆ ಮಾಡಿಕೊಡಬೇಕು.
–ನಾಸೀರ್ ಹುಸೇನ್ ಉಸ್ತಾದ್, ಕೋರ್ ಕಮೀಟಿ ಸದಸ್ಯ
ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಸ್ವತ್ಛ ಮತ್ತು ಜನಪರ ಆಡಳಿತ ನೀಡಿದ ದೂರದೃಷ್ಟಿವತ್ವ ನಾಯಕರು. ಅವರು ಜು.30ರಂದು ಕಲಬುರಗಿಗೆ ಬರುತ್ತಿದ್ದಾರೆ. ವೀರಶೈವ ಕಲ್ಯಾಣ ಮಂಟಪದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶದಲ್ಲಿ ಸಹಸ್ರಾರು ಜನರು ಭಾಗವಹಿಸಲಿದ್ದಾರೆ. ಇದು 2013ರ ಚುನಾವಣೆಯ ಮುನ್ನ ದಕ್ಷಿಣ ಮತ ಕ್ಷೇತ್ರದಲ್ಲಿ ಉಂಟಾಗಲಿರುವ ಪಕ್ಷದ ಹವಾ.
–ಶಿವಕುಮಾರ ನಾಟೀಕಾರ್, ಅಫಜಲಪುರ ಕ್ಷೇತ್ರದ ನಿಯೋಜಿತ ಅಭ್ಯರ್ಥಿ