Advertisement
-ಇದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಪ್ರಶ್ನೆ.
Related Articles
Advertisement
ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ. ದೊಡ್ಡ ಮಟ್ಟದ ಸಮಸ್ಯೆಯೇನೂ ಇಲ್ಲ. ಆದರೆ, ಎಲ್ಲೋ ಒಂದು ಕಡೆ ನಂಬಿಕೆ ಮತ್ತು ವಿಶ್ವಾಸದ ಕೊರತೆಯಿದೆ.
•ನಂಬಿಕೆ-ವಿಶ್ವಾಸದ ಕೊರತೆ ಎಲ್ಲಿದೆ?
ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳ ನಾಯಕರಲ್ಲಿ ನಂಬಿಕೆ-ವಿಶ್ವಾಸದ ಕೊರತೆಯಿದೆ. ರಾಜಕಾರಣ ನಡೆಯುವುದೇ ನಂಬಿಕೆಯಲ್ಲಿ. ಆದರೆ, ಅನುಮಾನ-ಅಪನಂಬಿಕೆ ಯಿಂದ ಸಂಕಷ್ಟ ತಪ್ಪಿದ್ದಲ್ಲ.
•ಕಾಂಗ್ರೆಸ್‌ನವರು ಇದಕ್ಕೆ ಕಾರಣವಾ?
ಹಾಗಂತ ನಾನು ಹೇಳಲ್ಲ. ಎರಡೂ ಪಕ್ಷಗಳ ನಾಯಕರು ಈ ವಿಚಾರದಲ್ಲಿ ಪರಸ್ಪರ ಸಹಕಾರ ದೊಂದಿಗೆ ಮುಂದುವರಿಯಬೇಕು. ನಾವು ಹುಡುಗಾ ಟಿಕೆ ಮಾಡುತ್ತಿಲ್ಲ. ಜವಾಬ್ದಾರಿಯುತವಾಗಿ ಸರ್ಕಾರ ನಡೆಸಬೇಕಾಗಿದೆ. ಜನರ ನಂಬಿಕೆ ಉಳಿಸಿಕೊಳ್ಳಬೇ ಕಾಗಿದೆ. ಪ್ರಜಾಪ್ರಭುತ್ವದಲ್ಲಿ ಮತದಾರರು ನಮ್ಮ ನಾಯಕರು ಎಂಬುದು ಅರ್ಥಮಾಡಿಕೊಳ್ಳಬೇಕು.
•ಆಪರೇಷನ್ ಕಮಲ ಕಾರ್ಯಾಚರಣೆಯಿಂದ ಸರ್ಕಾರ ಪತನವಾಗುತ್ತಾ?
ಸಮ್ಮಿಶ್ರ ಸರ್ಕಾರ ರಚನೆಯಾದ ಕ್ಷಣದಿಂದಲೂ ಅದೆಂಥಧ್ದೋ ಆಪರೇಷನ್, ಆಪರೇಷನ್ ಅನ್ನುತ್ತಲೇ ಇದ್ದಾರೆ. ಬಿಜೆಪಿಯವರು ತಾವು ಏನು ಮಾಡುತ್ತಿದ್ದೇ ವೆಂಬ ಪರಿಜ್ಞಾನ ಇಟ್ಟುಕೊಂಡರೆ ಒಳ್ಳೆಯದು. ಇಂತಹ ರಾಜಕಾರಣ ಯಾರಿಗೂ ಒಳ್ಳೆಯದಲ್ಲ.
•ಜೆಡಿಎಸ್‌ನವರು ಬ್ಲಾಕ್‌ವೆುೕಲ್ ಮಾಡುತ್ತಿದ್ದಾರೆ ಎಂದು ರಾಹುಲ್‌ಗೆ ದೂರು ಕೊಡಲಾಗಿದೆಯಂತೆ?
ನಾನು ಕಾಂಗ್ರೆಸ್‌ನಲ್ಲಿ ಇದ್ದವನು. ಆ ಪಕ್ಷದ ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತದೆ. ಯಾರು, ಯಾರನ್ನು ಬ್ಲಾಕ್‌ವೆುೕಲ್ ಮಾಡುತ್ತಿದ್ದಾರೆ. ಯಾಕೆ, ಯಾವುದರ ಹಿಂದೆ ಯಾರಿದ್ದಾರೆ ಎಂಬುದೆಲ್ಲಾ ಮಾಹಿತಿ ಸಂಗ್ರಹಿಸಿರುತ್ತದೆ. ಜೆಡಿಎಸ್‌ಗಂತೂ ಆ ಅನಿವಾರ್ಯತೆ ಇಲ್ಲ.
•ಎಷ್ಟು ದಿನ ಹೀಗೆ ಅತಂತ್ರ?
ನೋಡೋಣ. ಲೋಕಸಭೆ ಚುನಾವಣೆವರೆಗೂ ಇದೇ ರೀತಿ ಬಿಜೆಪಿಯವರೂ ಆಟ ಆಡಬಹುದು. ಚುನಾವಣೆ ನಂತರ ಅವರಿಗೂ ಗೊತ್ತಾಗುತ್ತದೆ.
•ಲೋಕಸಭೆ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಗುತ್ತಾ?
ಆಗಬೇಕು. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ರಾಷ್ಟ್ರ ಮಟ್ಟದಲ್ಲಿ ದೊಡ್ಡ ಮಟ್ಟದ ಪ್ರಯತ್ನ ನಡೆಯುತ್ತಿದೆ. ಎಚ್.ಡಿ.ದೇವೇಗೌಡರೂ ಮುಂಚೂಣಿ ವಹಿಸಿದ್ದಾರೆ. ರಾಜ್ಯದಲ್ಲೂ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ತೀರ್ಮಾನ ವಾಗಿದೆ.
•ಸೀಟು ಹಂಚಿಕೆ ಮಾತುಕತೆ ಮುನ್ನವೇ ಹಾಸನ ಮತ್ತು ಮಂಡ್ಯ ಕ್ಷೇತ್ರಗಳ ಬಗ್ಗೆ ತಗಾದೆ ಎದ್ದಿದೆಯಲ್ಲಾ?
ಅದೆಲ್ಲಾ ಸೃಷ್ಟಿ. ರಾಹುಲ್‌ಗಾಂಧಿ- ಎಚ್.ಡಿ. ದೇವೇಗೌಡರು ಚರ್ಚಿಸಿ ಕೈಗೊಳ್ಳುವುದೇ ಅಂತಿಮ ತೀರ್ಮಾನ. ಅದಕ್ಕೆ ಎಲ್ಲರೂ ಬದ್ಧರಾಗಿರಲೇಬೇಕು.
•ಜೆಡಿಎಸ್ ಎಷ್ಟು ಸೀಟು ಬೇಡಿಕೆ ಇಟ್ಟಿದೆ?
ನಾವು 12 ಸೀಟು ಬೇಕು ಎಂದು ಕೇಳುತ್ತೇವೆ. ಆದು ಸಹಜ. ಆದರೆ, ಮಾತುಕತೆಗೆ ಕುಳಿತಾಗ ಪರಸ್ಪರ ಕೊಟ್ಟು ತೆಗೆದುಕೊಳ್ಳುವುದು ಇದ್ದೇ ಇರುತ್ತದೆ. ಜೆಡಿಎಸ್ ಶಕ್ತಿಯನ್ನು ಕಾಂಗ್ರೆಸ್ ಸೇರಿ ಯಾರೂ ಕಡೆಗಣಿಸುವಂತಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮೈಸೂರು ಸೇರಿ ಕೆಲವು ಜಿಲ್ಲೆಗಳಲ್ಲಿ ಜೆಡಿಎಸ್ ಪಡೆದಿರುವ ಮತ ಪ್ರಮಾಣ ಇದಕ್ಕೆ ಸಾಕ್ಷಿ.
•ಲೋಕಸಭೆ ಚುನಾವಣೆಗೆ ರಾಜ್ಯಪ್ರವಾಸ ಯಾವಾಗ ಪ್ರಾರಂಭ?
ದೇವೇಗೌಡರ ದಿನಾಂಕ ಸಿಕ್ಕ ತಕ್ಷಣ ಪಕ್ಷ ಸಂಘಟನೆಗೆ ರಾಜ್ಯಪ್ರವಾಸ ಆರಂಭಿಸುತ್ತೇವೆ. ಪಕ್ಷ ಸಂಘಟನೆಗಾಗಿ ಐವರು ಕಾರ್ಯಾಧ್ಯಕ್ಷರನ್ನು ನೇಮಿಸುತ್ತೇವೆ.
ಎಸ್. ಲಕ್ಷ್ಮಿನಾರಾಯಣ