Advertisement

ಜೆಡಿಎಸ್‌ ಶಕ್ತಿ ಪ್ರದರ್ಶನಕ್ಕೆ ಮುಂದಾಗಿ: ಜಿಟಿಡಿ

12:05 PM Jul 24, 2017 | Team Udayavani |

ಹುಣಸೂರು: ಹಿರಿಯ ಮತ್ಸದಿ, ಮಾಜಿಮಂತ್ರಿ ಎಚ್‌.ವಿಶ್ವನಾಥರನ್ನು ಪಟ್ಟಣದಲ್ಲಿ ನಾಳೆ  ನಡೆಯುವ ಬಹತ್‌ ಸಮಾವೇಶದಲ್ಲಿ ಬರ ಮಾಡಿಕೊಳ್ಳಲು ಪಕ್ಷದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಪಕ್ಷದ ಶಕ್ತಿ ಪ್ರದರ್ಶನಕ್ಕೆ  ಮುಂದಾಗಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಮನವಿ ಮಾಡಿದರು.

Advertisement

ನಗರದ ಜಿಟಿಡಿ ನಿವಾಸದ ಆವರಣದಲ್ಲಿ ನಡೆದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜೆಡಿಎಸ್‌ ಹಾಗೂ ಎಚ್‌.ಡಿ.ಕುಮಾರಸ್ವಾಮಿಯವರಿಗೆ ಶಕ್ತಿ ತುಂಬಲು ಎಚ್‌.ವಿಶ್ವನಾಥ್‌ರನ್ನು ಹುಣಸೂರಿನಿಂದ ಹೈಕಮಾಂಡ್‌ ಕಣಕ್ಕಿಳಿಸಿದ್ದು, ಇಲ್ಲೇ ಅವರ ಗೆಲುವಿನ ಓಟ ಆರಂಭಿಸುವ ಮೂಲಕ  ಪಕ್ಷವನ್ನು ಸದೃಢಗೊಳಿಸಬೇಕಿದೆ. ಮಂಗಳವಾರ ಮಧ್ಯಾಹ್ನ 2 ಗಂಟೆಗೆ  ಪಟ್ಟಣದ  ಮುನೇಶ್ವರ ಕಾವಲ್‌ ಮೈದಾನದಲ್ಲಿ ಜೆಡಿಎಸ್‌ ಸಮಾವೇಶ ಆಯೋಜಿಸಲಾಗಿದ್ದು, ಅಂದಿನಿಂದಲೇ ಮುಂಬರುವ ಚುನಾವಣಾ ಪ್ರಚಾರವೂ ಆರಂಭವಾಗಲಿದೆ ಎಂದರು.

ಹುಣಸೂರು ಸಭೆ ದಿಕ್ಸೂಚಿ: ಮುಂಬರುವ 2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಅಧಿಕಾರಕ್ಕೆ ತರುವ ಮೂಲಕ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ಮಾಡಲು ದಿಕ್ಸೂಚಿಯಾಗಿಸಲು ಈ ಸಮಾವೇಶ ಮುನ್ನುಡಿ ಹಾಡಬೇಕಿದೆ. ಇದಕ್ಕಾಗಿ ಪಕ್ಷದ ಕಾರ್ಯಕರ್ತರು  ಸಮಾವೇಶ ಯಶಸ್ವಿಗೊಳಿಸಬೇಕು. ಹಳ್ಳಿಗಳಲ್ಲಿ ಸಭೆಯ ಬಗ್ಗೆ ಹೆಚ್ಚು ಪ್ರಚುರ ಪಡಿಸಬೇಕು ಎಂದು ತಿಳಿಸಿದರು.

ವಿಶ್ವನಾಥ್‌ಗೆ ಅದ್ಧೂರಿ ಸ್ವಾಗತ: ಜೆಡಿಎಸ್‌ ಸೇರಿದ ನಂತರ ತಾಲೂಕಿಗೆ ಪ್ರಥಮ ಬಾರಿಗೆ ಆಗಮಿಸುತ್ತಿರುವ ಎಚ್‌.ವಿಶ್ವನಾಥ್‌ರನ್ನು ಮಂಗಳವಾರ ಕಾರ್ಯಕರ್ತರು ತಾಲೂಕಿನ ಗಡಿಯಂಚಿನ ಹೊಸರಾಮೇನಹಳ್ಳಿ ಗೇಟ್‌ನಲ್ಲಿ ವಿಶ್ವನಾಥ್‌ರನ್ನು ಸಾಂಸ್ಕೃತಿಕ ಕಲರವಗಳ ನಡುವೆ ಮಾಡಿಕೊಳ್ಳಲಾಗುವುದು. ಆ ನಂತರ ನಗರದಲ್ಲಿನ ದೇವರಾಜಅರಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ವೇದಿಕೆಗೆ ಬರಮಾಡಿಕೊಳ್ಳಲಾಗುವುದು. ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರುಗಳು ಭಾಗವಹಿಸುವರು ಎಂದರು.

ಶಾಸಕ ಎಸ್‌.ಚಿಕ್ಕಮಾದು ಮಾತನಾಡಿ, ಮೈಸೂರು ಭಾಗವು ಜೆಡಿಎಸ್‌ ಭದ್ರಕೋಟೆಯಾಗಿದ್ದು, ಪಕ್ಷದ ಹಿತದೃಷ್ಟಿಯಿಂದ ವಿಶ್ವನಾಥ್‌ರನ್ನು  ಹುಣಸೂರಿನಿಂದ ಕಣಕ್ಕಿಳಿಸುತ್ತಿದ್ದು, ಎಚ್‌.ಡಿ.ಕುಮಾರಸ್ವಾಮಿ ನಾಯಕತ್ವದಲ್ಲಿ ಜಿಟಿಡಿ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಜೆಡಿಎಸ್‌ ಸಂಘಟನೆ ಮಾಡಿ ಮತ್ತೆ ಅಧಿಕಾರಕ್ಕೆ ತರಲು ಪ್ರಯತ್ನ ಮಾಡೋಣ ಎಂದು ತಿಳಿಸಿದರು.

Advertisement

ತಾಲೂಕು ಜೆಡಿಎಸ್‌ ಅಧ್ಯಕ್ಷ ಹರಳಹಳ್ಳಿಮಹದೇವೇಗೌಡ, ಜಿಲ್ಲಾ ಉಪಾಧ್ಯಕ್ಷ ಮಹದೇವಪುರಮಂಜು, ಜಿಪಂ ಸದಸ್ಯರಾದ ಎಂ.ಬಿ.ಸುರೇಂದ್ರ, ಅನಿಲ್‌ಚಿಕ್ಕಮಾದು, ಅಮಿತ್‌ದೇವರಹಟ್ಟಿ, ಮಾಜಿ ಸದಸ್ಯ ಫ‌ಜಲುಲ್ಲಾ, ತಾ. ಯುವ ಜೆಡಿಎಸ್‌ ಅಧ್ಯಕ್ಷ ಲೋಕೇಶ್‌, ಕಾರ್ಯಾಧ್ಯಕ್ಷ ಶಿವರಾಜ್‌, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಜಗದೀಶ್‌, ಟಿಎಪಿಸಿಎಂಎಸ್‌ ಅಧ್ಯಕ್ಷ ವೆಂಕಟೇಶ್‌, ಎಪಿಎಂಸಿ ಅಧ್ಯಕ್ಷ ಕುಮಾರ್‌, ಮಾಜಿ ಅಧ್ಯಕ್ಷ ಕಿರಂಗೂರುಬಸವರಾಜು, ಪುರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ್‌, ಮುಖಂಡರಾದ ಗಣೇಶ್‌ಗೌಡ ತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next