Advertisement

ಹಾಸನ ಜಿಲ್ಲೆಯಲ್ಲಿ ಜೆಡಿಎಸ್‌ ಗೆಲುವು ಖಚಿತ

02:16 PM May 11, 2023 | Team Udayavani |

ಹೊಳೆನರಸೀಪುರ: ಜಿಲ್ಲೆಯ ಎಲ್ಲ ಏಳು ಕ್ಷೇತ್ರಗಳಲ್ಲಿ ಜೆಡಿಎಸ್‌ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತದಾರ ನಿಂತಿದ್ದಾನೆ. ಹಾಸನ, ಅರಕಲಗೂಡು, ಅರಸೀಕೆರೆ ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಗಳೇ ಭಾರೀ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ. ಜೊತೆಗೆ ಉಳಿದಂತೆ ನಾಲ್ಕು ಕ್ಷೇತ್ರಗಳಲ್ಲಿಯೂ ಸಹ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಿ ಗೌಡರ ಹುಟ್ಟುಹಬ್ಬಕ್ಕೆ ಅಡ್ವಾನ್ಸ್‌ ಬಳುವಳಿ ನೀಡುವುದಾಗಿ ತಿಳಿಸಿದರು.

Advertisement

ವಿಧಾನಸಭಾ ಚುನಾವಣೆಯಲ್ಲಿ ಶಾಸಕ ರೇವಣ್ಣ ಕುಟುಂಬ ತಾಲೂಕಿನ ಪಡುವಲಹಿಪ್ಪೆ ಮತ ಗಟ್ಟೆಯಲ್ಲಿ ಮತಚಲಾಯಿಸಿದರು.

ಕಾಂಗ್ರೆಸ್‌ ಅಭ್ಯರ್ಥಿ ಶ್ರೇಯಸ್‌ ಎಂ ಪಟೇಲ್‌ ಹಾಗೂ ಪತ್ನಿ ಅಕ್ಷಾತ ಪಟ್ಟಣದ ಬಾಲಕರ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಬಿಜೆಪಿ ಅಭ್ಯರ್ಥಿ ದೇವರಾಜೇಗೌಡ ಕಾಮಸಮುದ್ರ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಹಾಸನ ಜಿಲ್ಲೆ ಪ್ರತಿಷ್ಠಿತ ಕ್ಷೇತ್ರವಾಗಿರುವ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ 2004 ರಿಂದ ಸತತವಾಗಿ ಗೆಲುವು ಪಡೆದಿರುವ ರೇವಣ್ಣ ಅವರಿಗೆ ಈ ಚುನಾವಣೆ ಐದನೆಯದಾಗಿದೆ. ಬುಧವಾರ ಕಲ್ಲುಬ್ಯಾಡರಹಳ್ಳಿ ಮತ್ತು ಬಂಡಿಶೆಟ್ಟಿಯಲ್ಲ ಮತಯಂತ್ರ ಕೈ ಕೊಟ್ಟಿದ್ದರಿಂದ ಸುಮಾರು ಅರ್ಧ ಗಂಟೆ ಮತದಾನ ತಡವಾಗಿ ಆರಂಭವಾಯಿತು. ತಾಲೂಕಿನ ಪಡುವಲಹಿಪ್ಪೆ ಮತಗಟ್ಟೆಗೆ ಆಗಮಿಸಿದ ರೇವಣ್ಣ ಕುಟುಂಬ ಬೆಳಗ್ಗೆಯೇ ಪಟ್ಟಣದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯ, ರಾಘವೇಂದ್ರ ಸ್ವಾಮಿಗಳ ಮಠ, ಹರದನಹಳ್ಳಿ ಈಶ್ವರದೇವಸ್ಥಾನ, ಬೆಟ್ಟದ ರಂಗನಾಥಸ್ವಾಮಿ ದೇವಾಲಯ ಗಳಲ್ಲಿ ವಿಶೇಷ ಪೂಜೆ ಸಲ್ಲಿಸಿಸ ಮತಗಟ್ಟೆಗೆ ಆಗಮಿಸಿ ಗ್ರಾಮದೇವರಿಗೆ ಪೂಜೆ ಸಲ್ಲಿಸಿ ಮತಗಟ್ಟೆಗೆ ಆಗಮಿಸಿ ಕುಟುಂಬ ಸಮೇತ ಮತ ಚಲಾಯಿಸಿದರು.

ಏಳರಲ್ಲೂ ಜೆಡಿಎಸ್‌ ಗೆಲುವು: ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ಜಿಲ್ಲೆಯ ಎಲ್ಲ ಏಳು ಕ್ಷೇತ್ರಗಳಲ್ಲಿ ಜೆಡಿಎಸ್‌ ಪಕ್ಷದ ಅಭ್ಯರ್ಥಿ ಗಳ ಪರವಾಗಿ ಮತದಾರ ನಿಂತಿದ್ದಾನೆ. ಏಳು ಕ್ಷೇತ್ರಗಳ ಪೈಕಿ ಅಭ್ಯರ್ಥಿಗಳ ಗೊಂದಲದ ಗೂಡಾಗಿದ್ದ ಹಾಸನ, ಅರಕಲಗೂಡು, ಅರಸೀಕೆರೆ ಕ್ಷೇತ್ರಗಳಲ್ಲೂ ಸಹ ನಮ್ಮ ಅಭ್ಯರ್ಥಿಗಳು ಭಾರೀ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ. ಜೊತೆಗೆ ಉಳಿದಂತೆ ನಾಲ್ಕು ಕ್ಷೇತ್ರಗಳಲ್ಲಿಯೂ ಸಹ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಿ ಗೌಡರ ಹುಟ್ಟುಹಬ್ಬಕ್ಕೆ ಅಡ್ವಾನ್ಸ್‌ ಬಳುವಳಿ ನೀಡುವುದಾಗಿ ತಿಳಿಸಿದರು.

Advertisement

ಈ ಬಾರಿಯೂ ಭಾರೀ ಅಂತರದ ಗೆಲುವು: ಸಂಸದ ಪ್ರಜ್ವಲ್‌ ರೇವಣ್ಣ ಅವರು ಮಾತನಾಡಿ, ಈ ಬಾರಿ ನಮ್ಮ ರೇವಣ್ಣ ಸಾಹೇಬರು ಕಳೆದ ಬಾರಿ 45 ಸಾವಿರ ಅಂತರದಲ್ಲಿ ಭಾರೀ ಅಂತರದ ಗೆಲುವು ಕಂಡಿದ್ದರು. ಈ ಬಾರಿ ಅದನ್ನು ಮೀರಿ ಸುಮಾರು 55 ಸಾವಿರದಷ್ಟು ಅಂತರದಲ್ಲಿ ಗೆಲುವು ಸಾಧಿಸುವುದಾಗಿ ಭರವಸೆ ಇದೆ ಎಂದು ಆಶಯ ವ್ಯಕ್ತ ಪಡಿಸಿದರು.

ಶಾಯಿ ಹಾಕಿಸಿಕೊಳ್ಳದೆ ಮತ ಚಲಾಯಿಸಿದ ರೇವಣ್ಣ: ಪಡುವಲಹಿಪ್ಪೆ ಮತಗಟ್ಟೆಯಲ್ಲಿ ರೇವಣ್ಣ ಅವರ ಕುಟುಂಬ ಮತಚಲಾಯಿಸುವ ಮುನ್ನವೇ ಎಡಗೈಗೆ ಶಾಯಿ ಹಾಕಿಸಿಕೊಂಡು ಹೊರಬಂದಿದ್ದರು. ಆದರೆ, ಶಾಸಕ ರೇವಣ್ಣ ಅವರು ಮಾತ್ರ ತಮ್ಮ ಎಡಗೈಗೆ ಶಾಯಿ ಹಾಕಿಸಿಕೊಳ್ಳದೆ ಹೊರ ಬಂದು ನಂತರ ನೆನಪು ಮಾಡಿಕೊಂಡು ಮತಗಟ್ಟೆಗೆ ತೆರಳಿ ಶಾಯಿ ಹಾಕಿಸಿಕೊಂಡು ಬಂದು ಸುದ್ದಿಗಾರರೊಂದಿಗೆ ಸೇರಿಕೊಂಡರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next