Advertisement
ಪಟ್ಟಣದ ಪ್ರವಾಸಿ ಮಂದಿರದಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರ ಜೆಡಿಎಸ್ ವತಿಯಿಂದ ಹಮ್ಮಿಕೊಂಡಿದ್ದ ಜೆಡಿಎಸ್ ಕಾರ್ಯಕರ್ತರ ಸಭೆ, ವಿವಿಧ ಪಕ್ಷಗಳಿಂದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮ ಹಾಗೂ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮೂರು ವರ್ಷಗಳಿಂದ ಬಿಜೆಪಿ ಆಡಳಿತ ಸಂಪೂರ್ಣ ಕುಸಿದಿದೆ. ಸಜ್ಜನ ಪಕ್ಷಪಾತ, ಭ್ರಷ್ಟಾಚಾರ ಮಿತಿ ಮೀರಿ ಹೋಗಿದೆ. ಇಡೀ ರಾಜ್ಯದ ಜನತೆ ಬಿಜೆಪಿ ಬಗ್ಗೆ ಇದ್ದ ಭರವಸೆಯನ್ನು ಕಳೆದುಕೊಂಡು ಜನ ನಿರಾಸೆಯಲ್ಲಿದ್ದಾರೆ. ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಪಕ್ಷದ ಶಾಸಕ ಸ್ಥಾನದ ಟಿಕೆಟ್ ನೀಡಿ ಜನರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿರುವ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ. ಯಾವುದೇ ಕಪ್ಪುಚುಕ್ಕೆಯಿಲ್ಲದೆ ಭ್ರಷ್ಟಾಚಾರ ರಹಿತವಾಗಿ ಜನರ ಸಮಸ್ಯೆಗಳಿಗೆ ಐದು ವರ್ಷಗಳ ಕಾಲ ಶಾಸಕನಾಗಿ ಕಾರ್ಯನಿರ್ವಹಿಸಿದ್ದೇನೆ. ಇತ್ತೀಚಿನ ಬೆಳವಣಿಗೆಗಳು ಪಕ್ಷದಲ್ಲಿ ನಡೆಯುತ್ತಿದ್ದು ಸತ್ಯಕ್ಕೆ ದೂರವಾದದ್ದು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಕ್ಷೇತ್ರದ ಜನತೆ ಹಾಗೂ ಪಕ್ಷದ ನಿಷ್ಟಾವಂತ ಕಾರ್ಯಕರ್ತರು ನನ್ನೊಂದಿಗೆ ಇರುತ್ತಾರೆ ಎಂಬ ನಂಬಿಕೆಯಿದೆ ಎಂದು ಹೇಳಿದರು.
Related Articles
Advertisement
ಜಿಪಂ ಮಾಜಿ ಸದಸ್ಯ ಅಪ್ಪಯಣ್ಣ, ಮಂಜುಳಾದೇವಿ, ಬಸವರಾಜ್, ತಾಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಕಲ್ಯಾಣ್ ಕುಮಾರ್ ಬಾಬು, ಕಾರ್ಯಾಧ್ಯಕ್ಷ ಲಕ್ಷ್ಮಣ್, ಮುನಿರಾಜು, ಪ್ರಚಾರಸಮಿತಿ ಅಧ್ಯಕ್ಷ ನೆರಗನಹಳ್ಳಿ ಶ್ರೀನಿವಾಸ್, ತಾಲೂಕು ಸೊಸೈಟಿ ಅಧ್ಯಕ್ಷ ಎ.ದೇವರಾಜ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಪಟಾಲಪ್ಪ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸೊಣ್ಣಪ್ಪ, ಕಾಮೇನಹಳ್ಳಿ ರಮೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ವಿ.ಮಂಜುನಾಥ್, ದೇವನಹಳ್ಳಿ ಪುರಸಭಾ ಅಧ್ಯಕ್ಷೆ ಗೋಪಮ್ಮ, ವಿಜಯಪುರ ಪುರಸಭಾ ಅಧ್ಯಕ್ಷೆ ರಾಜೇಶ್ವರಿ, ಉಪಾಧ್ಯಕ್ಷ ಕೇಶವಪ್ಪ, ತಾಲೂಕು ಯುವಜೆಡಿಎಸ್ ಅಧ್ಯಕ್ಷ ಟಿ.ರವಿ, ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ ಮುನಿಕೃಷ್ಣಪ್ಪ, ದೇವನಹಳ್ಳಿ ಟೌನ್ ಅಧ್ಯಕ್ಷ ಮುನಿನಂಜಪ್ಪ, ಉಪಾಧ್ಯಕ್ಷ ವಾಸು, ವಿಜಯಪುರ ಟೌನ್ ಅಧ್ಯಕ್ಷ ನಾರಾಯಣಸ್ವಾಮಿ, ರಾಜ್ಯ ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಶ್ರೀನಾಥ್ ಗೌಡ, ತಾಪಂ ಮಾಜಿ ಸದಸ್ಯ ಸಾದಹಳ್ಳಿ ಎಸ್.ಮಹೇಶ್, ಭೀಮರಾಜ್, ಮುಖಂಡರಾದ ಜೊನ್ನಹಳ್ಳಿ ಮುನಿರಾಜು, ಕಾಳಪ್ಪನವರ ವೆಂಕಟೇಶ್‌ವಿ.ಗೋಪಾಲ್, ಸೊಸೈಟಿ ಕುಮಾರ್, ಲಕ್ಷ್ಮೀನಾರಾಯಣ್, ಎಸ್.ಗುರಪ್ಪ, ಪುರದ ಕೃಷ್ಣಪ್ಪ, ಬಿದಲೂರು ನಾಗರಾಜ್, ಕೋಡಗುರ್ಕಿ ಮಹೇಶ್, ಹೆಗ್ಗನಹಳ್ಳಿ ಮಂಜುನಾಥ್, ರಬ್ಬನಹಳ್ಳಿ ಪ್ರಭಾಕರ್, ಹುರುಳುಗುರ್ಕಿ ಶ್ರೀನಿವಾಸ್,ಎಸ್ .ನಾಗೇಶ್, ವೈ.ಆರ್. ರುದ್ರೇಶ್, ಬಿ.ವಿ.ನಾಗರಾಜ್, ಕಾರಹಳ್ಳಿ ರಾಜಣ್ಣ, ರಾಜೇಂದ್ರ, ಕಾರಹಳ್ಳಿ ಆರ್. ಮಂಜುನಾಥ್, ರವಿ, ಪ್ರಸನ್ನಹಳ್ಳಿ ವಿಜಯಕುಮಾರ್, ಚಿಕ್ಕನಾರಾಯಣಸ್ವಾಮಿ, ಮುನಿರಾಜು,ವಿಜಯಪುರ ಭಾಸ್ಕರ್, ಚೌಡಪ್ಪನಹಳ್ಳಿ ಶಂಕರ್,ಕನ್ನಮಂಗಲಪಾಳ್ಯ ನಾಗೇಶ್ ಹಾಗೂ ಮತ್ತಿತರರು ಇದ್ದರು.
ಬಿಜೆಪಿ ಬಣ್ಣದ ಮಾತಿಗೆ ಮರುಳಾಗಬೇಡಿ : ಆಪರೇಷನ್ ಕಮಲದ ಮೂಲಕ ತಮ್ಮನ್ನು ಮಂತ್ರಿ ಮಾಡುತ್ತೇನೆ ಎಂದು ಆಮಿಷ ಒಡ್ಡಿದ್ದರು. ನನಗೆ ಎಷ್ಟೇ ಆಮಿಷ ಬಂದರೂ ಮೊದಲು ಕಾರ್ಯಕರ್ತರು. ಕಾರ್ಯಕರ್ತರಿದ್ದರೆ ಮಾತ್ರ ನಾವು ಪಕ್ಷದಲ್ಲಿರಲು ಸಾಧ್ಯ. ಬಿಜೆಪಿಯವರ ಬಣ್ಣ ಬಣ್ಣದ ಮಾತಿಗೆ ಯಾರೂ ಮರುಳಾಗಬೇಡಿ. ತಾಲೂಕಿನಲ್ಲಿ ಬಿಜೆಪಿ ಶಾಲುವನ್ನು ಹಿಡಿದು ಮನೆ ಮನೆಗೆ ಹೋಗಿ ಸೇರ್ಪಡೆ ಮಾಡಲು ಹೊರಟಿದ್ದಾರೆ. ರಾಷ್ಟ್ರೀಯ ಪಕ್ಷಗಳಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿಯಾಗುವುದಿಲ್ಲ ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ಹೇಳಿದರು.