Advertisement

ಸುಮಲತಾರತ್ತ ಮತ್ತೆ ಜೆಡಿಎಸ್‌ “ವಾಗ್ಬಾಣ’ 

01:05 AM Mar 17, 2019 | Team Udayavani |

ಸುಮಲತಾ ರಂಗಪ್ರವೇಶದಿಂದ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಕಣ ರಂಗೇರಿದ್ದು, ಆರೋಪ-ಪ್ರತ್ಯಾರೋಪಗಳಿಗೆ ವೇದಿಕೆಯಾಗುತ್ತಿದೆ. ಇದೇ ವೇಳೆ, ಜೆಡಿಎಸ್‌ ಅಭ್ಯರ್ಥಿಯಾಗಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿದಿದ್ದು, ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದಾರೆ. ಈ ಮಧ್ಯೆ, ಶನಿವಾರ ಜಿಲ್ಲೆಯಲ್ಲಿ ನಿಖಿಲ್ ಪರ ಪ್ರಚಾರ ನಡೆಸಿದ ಜೆಡಿಎಸ್‌ ಮುಖಂಡರು, ಸುಮಲತಾರತ್ತ ಪರೋಕ್ಷವಾಗಿ ಟೀಕಾಪ್ರಹಾರ ನಡೆಸಿದ್ದು, ಅದರ ಝಲಕ್‌ ಇಲ್ಲಿದೆ.

Advertisement

ಸುಮಲತಾ ಕುಟುಂಬ ರಾಜಕಾರಣ ಮಾಡುತ್ತಿಲ್ಲವೆ? 
ದೇವೇಗೌಡರದ್ದು ಮಾತ್ರ ಕುಟುಂಬ ರಾಜಕಾರಣಾನಾ. ಸುಮಲತಾ ಮಾಡ್ತಿರೋದು ಕುಟುಂಬ ರಾಜಕಾರಣ ಅಲ್ವಾ. ಅವರ ಪತಿ ಸಂಸದ, ಸಚಿವರಾಗಿರಲಿಲ್ಲವೇ?

 ಯಾವುದೇ ಚುನಾವಣೆಯಲ್ಲೂ ನಾವು ಸೋತಿಲ್ಲ. ಈ ಚುನಾವಣೆಯಲ್ಲೂ ನಿಖೀಲ್‌ ಗೆಲುವು ನಿಶ್ಚಿತ.

ನಿಖಿಲ್ ಬಣ್ಣದ ಸೋಗು ಹಾಕೊಂಡು ಬಂದಿಲ್ಲ: ಎಲ್‌ಆರ್‌ಎಸ್‌

ನಿಖಿಲ್ ಕುಮಾರಸ್ವಾಮಿ ಬಣ್ಣದ ಸೋಗು ಹಾಕಿಕೊಂಡು ಜನರನ್ನು ಮರುಳು ಮಾಡಲು ಬಂದಿಲ್ಲ.

Advertisement

 ಮಂಡ್ಯ ಜಿಲ್ಲೆಯಲ್ಲಿ 250ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಾಗ ಅವರ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳಿದ್ದು ಕುಮಾರಸ್ವಾಮಿ. ರೈತರು ಆತ್ಮಹತ್ಯೆ ಮಾಡಿಕೊಂಡಾಗ ಸುಮಲತಾ ಎಲ್ಲಿದ್ದರು?.

ನಿಖಿಲ್ ಅಭ್ಯರ್ಥಿಯಾಗಿದ್ದು ಪಕ್ಷದ ತೀರ್ಮಾನ.

ನಿಖಿಲ್ರನ್ನು ಆಂಧ್ರದಿಂದ ಕರೆತಂದಿಲ್ಲ: ಸುರೇಶ್‌ಗೌಡ ಮಂಡ್ಯಕ್ಕೆ ನಿಖೀಲ್‌ರನ್ನು ಆಂಧ್ರಪ್ರದೇಶದಿಂದ ಕರೆ ತಂದಿಲ್ಲ.
ಅವರನ್ನು ಪಕ್ಕದ ಹಾಸನದಿಂದ ಕರೆ ತಂದಿದ್ದೇವೆ.

 ನಿಖೀಲ್‌ರನ್ನು ಅಭ್ಯರ್ಥಿ ಮಾಡಿದ್ದು ನಾವು. ದೇವೇಗೌಡರ ಕುಟುಂಬ ಯಾವತ್ತೂ ನಿಖಿಲ್ ಅಭ್ಯರ್ಥಿಯಾಗಬೇಕು
ಎಂದು ಹೇಳಿರಲಿಲ್ಲ. ಈ ಮಾತನ್ನು ದೇವರ ಮುಂದೆ ಹೇಳುತ್ತಿದ್ದೇನೆ.

 ಹಿಂದೆ ನಾನು ಕಾಂಗ್ರೆಸ್‌ನಲ್ಲಿದ್ದಾಗ ರಮ್ಯಾ ಪರ ಯಾರ್ಯಾರು ಏನೇನು ಕೆಲಸ ಮಾಡಿದ್ದಾರೆ ಎನ್ನುವುದು ಗೊತ್ತಿದೆ.

ಮಹಿಳೆಯ ಕಣ್ಣೀರಿಗೆ ಮರುಳಾಗಬೇಡಿ: ಡಿ.ಸಿ.ತಮ್ಮಣ್ಣ

 ಮಹಿಳೆಯರ ಕಣ್ಣೀರಿಗೆ ಮರುಳಾಗದೆ ನಿಖಿಲ್ರನ್ನು ಗೆಲ್ಲಿಸಿ.

 ಕಳೆದ ಉಪ ಚುನಾವಣೆ ಸಂದರ್ಭದಲ್ಲೇ ನಿಖಿಲ್ ಬರಬೇಕಿತ್ತು. ಈಗ ನಿಖಿಲ್ರನ್ನು ಕ್ಷೇತ್ರಕ್ಕೆ ಬರಮಾಡಿಕೊಂಡವರೇ ಸಂಸದ ಶಿವರಾಮೇಗೌಡರು.

Advertisement

Udayavani is now on Telegram. Click here to join our channel and stay updated with the latest news.

Next