ಚನ್ನರಾಯಪಟ್ಟಣ/ಶ್ರವಣಬೆಳಗೊಳ: ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಜುಟ್ಟನಹಳ್ಳಿ ಗ್ರಾಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತರು ಆಯ್ಕೆಯಾದರು.
20 ಸದಸ್ಯ ಬಲ ಹೊಂದಿರುವ ಪಂಚಾಯ್ತಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ 11, ಕಾಂಗ್ರೆಸ್ ಬೆಂಬಲಿತ 9 ಸದಸ್ಯರಿದ್ದಾರೆ. ನೂತನ ಅಧ್ಯಕ್ಷ ನಿಖೀಲ್ ಬೋರೇಗೌಡ ಮಾತನಾಡಿ, ಗ್ರಾಪಂನ ಸರ್ವ ಸದಸ್ಯರ ಸಹಕಾರದೊಂದಿಗೆ ಉತ್ತಮ ಆಡಳಿತ ನಡೆಸುತ್ತೇನೆಂದರು. ವಲಯ ಅರಣ್ಯಾಧಿಕಾರಿ ಹೇಮಂತ್ ಕುಮಾರ್ ಚುನಾವಣಾಧಿಕಾರಿಯಾಗಿ ಸೇವೆ ಸಲ್ಲಿಸಿದರು.
ಇವರಿಗೆ ಪಿಡಿಒ ದೇವರಾಜು ಸಹಕಾರ ನೀಡಿದ್ದರು. ಗ್ರಾಪಂ ಸದಸ್ಯರಾದ ಡಿ.ಎ.ದೊಡ್ಡೇಗೌಡ, ಎಂ.ಪಿ.ಪ್ರಸನ್ನಕುಮಾರ, ಲತಾಮಣಿ ಬಾಬು, ವಿಮಲಾ, ಮಮತಾ,ವೆಂಕಟನರಸಿಂಹಾಚಾರ್, ದೇವಮ್ಮ, ಭಾಗ್ಯ, ಗ್ರಾಪಂ ಮಾಜಿ ಅಧ್ಯಕ್ಷ ರಂಗೇಗೌಡ, ಮುಖಂಡರಾದ ಪಿ.ಕೆ.ಮಂಜೇಗೌಡ, ದೇವರಾಜೇಗೌಡ, ಬೋರೇಗೌಡ, ಅಂಬಿ ಕಾ, ಇಂದಿರಾ, ಬಸವರಾಜ್, ರಂಗೇಗೌಡ, ರಮೇಶ್, ದೇವರಾಜ, ಅರುಣ, ಶ್ರೀನಿವಾಸ್ ಮತ್ತಿತರರು ಅಧ್ಯಕ್ಷ ಹಾಗೂ ಉಪಾಧ್ಯಕ್ಷೆಯನ್ನು ಅಭಿನಂದಿಸಿದರು.
ಇದನ್ನೂ ಓದಿ:ಭಾಷಾ ಉಳಿವಿನ ಚಿಂತನೆ ಅಗತ್ಯ
ವಿವಿಧ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷರು: ಬಾಗೂರು ಹೋಬಳಿ ನವಿಲೆ ಗ್ರಾಪಂಗೆ ಪ್ರೇಮಲತಾ ಅಧ್ಯಕ್ಷರಾದರೆ, ಎಸ್ .ಡಿ.ಪವಿತ್ರಾ ಉಪಾಧ್ಯಕ್ಷೆಯಾಗಿ ಆಯ್ಕೆಯಾ ದರು. ಬಾಗೂರು ಗ್ರಾಪಂಗೆ ಎ.ಎನ್. ಅನುಸೂಯಾ ಅಧ್ಯಕ್ಷೆಯಾದರು. ಡಿ.ಎನ್. ಉಮೇಶ್ ಉಪಾಧ್ಯಕ್ಷರಾಗಿ ಆಯ್ಕೆಯಾದರು. ನುಗ್ಗೇಹಳ್ಳಿ ಹೋಬಳಿ ಸಂತೇಶಿವರ ಗ್ರಾಪಂಗೆ ವೈ.ಎಂ.ಪ್ರಕಾಶ ಅಧ್ಯಕ್ಷರಾಗಿ ಆಯ್ಕೆಯಾದರು. ಟಿ.ಜೆ.ನಾಗರತ್ನ