ಸೋಮವಾರಪೇಟೆ: ಜೆಡಿಎಸ್ ಈ ಬಾರಿ 20 ಸ್ಥಾನಗಳಿಗೆ ಸೀಮಿತವಾಗಲಿದೆ. ಅಧಿಕಾರಕ್ಕೆ ಏರುವದು ಅಸಾಧ್ಯವಾಗಿರುವ ಹಿನ್ನೆಲೆ ರೈತರಿಗೆ ಸುಳ್ಳು ಭರವಸೆ ನಿಡುತ್ತಿದ್ದಾರೆ ಎಂದು ದೂರಿದರು.
ಇಲ್ಲಿನ ಜೇಸೀ ವೇದಿಕೆಯಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ರೈತರ 1ಲಕ್ಷ ರೂ.ಗಳ ಸಾಲಮನ್ನಾ ಮಾಡಲಾಗುವದು ಎಂದು ಹೇಳಿದರು.
ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಕೊಡಗಿಗೆ 1800 ಕೋಟಿ ಅನುದಾನ ಬಂದಿತ್ತು. ಈಗಿನ ಸರ್ಕಾರ ಅನುದಾನವನ್ನೇ ನೀಡುತ್ತಿಲ್ಲ. 200 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿ ಕೇವಲ 41 ಕೋಟಿ ನೀಡಿದೆ. ಇಂತಹ ಸರ್ಕಾರವನ್ನು ಕಿತ್ತೂಗೆಯುವ ಕಾಲ ಬಂದಿದೆ ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ಭಾರತೀಶ್ ಮಾತನಾಡಿ, ಕೊಲೆಪಾತಕ ಸಂಘಟನೆಗಳ ಮೇಲಿನ ಕೇಸ್ ವಾಪಸ್ ಪಡೆಯುವ ಮೂಲಕ ಕಾಂಗ್ರೆಸ್ ಸರ್ಕಾರ ಕೊಲೆಗಡುಕರಿಗೆ ರಕ್ಷಣೆ ಒದಗಿಸಿದೆ ಎಂದು ಆರೋಪಿಸಿದರು. ಕ್ಷೇತ್ರ ಸಮಿತಿ ಅಧ್ಯಕ್ಷ ಕೊಮಾರಪ್ಪ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿಲ್ಲಾ ವಕ್ತಾರ ಅಭಿಮನ್ಯುಕುಮಾರ್, ಪಕ್ಷದ ಜಿಲ್ಲಾ ಕಾರ್ಯದರ್ಶಿ ವಿ.ಕೆ. ಲೋಕೇಶ್, ಬಸವಾಪಟ್ಟಣ ತೋಂಟದಾರ್ಯ ಮಠದ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮೀಜಿ, ಪರಿಶಿಷ್ಟ ಜಾತಿ ಘಟಕದ ಉಪಾಧ್ಯಕ್ಷ ರಾಮಕೃಷ್ಣ, ಸದಸ್ಯರಾದ ಮಂಜುಳಾ, ಬಿ.ಜೆ. ದೀಪಕ್, ಸರೋಜಮ್ಮ, ತಾ.ಪಂ. ಸದಸ್ಯರಾದ ಕುಶಾಲಪ್ಪ, ತಂಗಮ್ಮ, ಪಕ್ಷದ ಮುಖಂಡರಾದ ವಿ.ಎಂ. ವಿಜಯ, ಕೆ.ವಿ. ಮಂಜುನಾಥ್,ಎಸ್.ಬಿ. ಭರತ್‌ಕುಮಾರ್ ಸೇರಿದಂತೆ ಮೊದ ಲಾ ದವರು ಕಾರ್ಯ ಕ್ರ ಮ ದಲ್ಲಿ ಉಪಸ್ಥಿತರಿದ್ದರು.