Advertisement
ಒಂದು ಕಾಲದಲ್ಲಿ ಜೆಡಿಎಸ್ ಭದ್ರಕೋಟೆಯಾಗಿದ್ದ ತುಮಕೂರು ಜಿಲ್ಲೆಯಲ್ಲಿ ಈಗ ಜೆಡಿಎಸ್ ತನ್ನ ಪ್ರಾಬಲ್ಯವನ್ನು ಕಳೆದು ಕೊಳ್ಳುತ್ತಿದೆಯಾ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ಜೆಡಿಎಸ್‌ನ ಪ್ರಭಾವಿಗಳು ಜೆಡಿಎಸ್‌ಮನೆಯಿಂದ ಒಂದು ಕಾಲು ಹೊರಗೆ ಇಟ್ಟಿದ್ದಾರೆ ಎನ್ನುವ ವಿಷಯ ಈಗ ಜಿಲ್ಲೆಯ ಚರ್ಚಾ ವಿಷಯವಾಗಿದೆ.
Related Articles
Advertisement
ಜಿಲ್ಲೆಯ ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಎಸ್.ಆರ್.ಶ್ರೀನಿವಾಸ್ ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡ ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್‌ಅಧಕ್ಷ ಕೆ.ಎನ್.ರಾಜಣ್ಣ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿರು ವುದು ಮುಂದೆ ಜಿಲ್ಲೆಯಲ್ಲಿ ರಾಜಕೀಯ ದೃವೀಕರಣಕ್ಕೆ ಸಾಕ್ಷಿಯಾಗಲಿದೆ ಎನ್ನುವ ಮಾತುಗಳುಕೇಳಿಬರುತ್ತಿವೆ.
ದೇವೇಗೌಡರ ಸೋಲಿನಿಂದಲೇ ಹಿನ್ನಡೆ: ಜೆಡಿಎಸ್ ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇ ಗೌಡರು ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲು ಅನುಭಿಸಿದರು. ಅಲ್ಲಿಂದಲೇ ಜಿಲ್ಲೆಯಲ್ಲಿ ಜೆಡಿಎಸ್ ಪ್ರಾಬಲ್ಯಕ್ಕೆ ಧಕ್ಕೆಯಾಯಿತು. ಇದರಿಂದ ಜೆಡಿಎಸ್ ನಾಯಕರಲ್ಲಿ ಅಸಮಧಾನ ಪ್ರಾರಂಭವಾಯಿತು. ಜೆಡಿಎಸ್ ಮುಖಂಡರ ನಡುವೆ ಆಂತರೀಕ ಮನಸ್ತಾಪಗಳು ಹೆಚ್ಚಿದವು. ನಂತರ ಎದುರಾದ ಶಿರಾ ಉಪಚುನಾವಣೆ ಮತ್ತು ಆಗ್ನೇಯ ಪದವೀದರರ ಕ್ಷೇತ್ರದ ಸೋಲು ಈಚುನಾವಣೆಯಲ್ಲಿ ಕೆಲವು ಜೆಡಿಎಸ್ ಮುಖಂಡರು ನಡೆದುಕೊಂಡ ರೀತಿ ಪಕ್ಷದ ವರಿಷ್ಠರಿಗೆ ಅಸಮಧಾನ ಉಂಟಾಯಿತು.
ಉಪಚುನಾವಣೆಯಲ್ಲಿಯೂ ಜೆಡಿಎಸ್ ಸೋಲು ಮುಖಂಡರಿಗೆ ಮುಂದೆ ಜೆಡಿಎಸ್‌ನಲ್ಲಿ ಭವಿಷ್ಯವಿಲ್ಲ ಎಂದು ಕಾಂಗ್ರೆಸ್ ಕಡೆಗೆ ಒಲವು ತೋರಲು ಕಾರಣವಾಗಿದೆ. ಕಾಂಗ್ರೆಸ್ ಪಕ್ಷ ಸೇರುವ ಸೂಚನೆ ಎನ್ನುವಂತೆ ಕಾಂಗ್ರೆಸ್ ಮುಖಂಡರ ಮನೆಯಲ್ಲಿ ಜೆಡಿಎಸ್ ಶಾಸಕ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಪಕ್ಷದ ಮುಖಂಡರ ವಿರುದ್ಧ ವಾಗ್ಧಾಳಿ ಮಾಡುತ್ತಾರೆ ಎಂದರೆ ಅವರು ಜೆಡಿಎಸ್‌ನಿಂದ ಒಂದುಕಾಲು ಹೊರ ಹಾಕಿದ್ದಾರೆ ಎನ್ನುವುದು ಸ್ಪಷ್ಟ.
ಒಟ್ಟಾರೆ ಯಾಗಿ ಜಿಲ್ಲೆಯಲ್ಲಿ ಪ್ರಭಲವಾಗಿ ಬೇರು ಬಿಟ್ಟಿದ್ದ ಜೆಡಿಎಸ್ ಬೇರು ಅಲುಗಾಡುತ್ತಿದೆ. ಕಾಂಗ್ರೆಸ್ ಪಕ್ಷ ತನ್ನ ಸ್ಥಾನ ಗಟ್ಟಿ ಮಾಡಿಕೊಳ್ಳಲು ತೆರೆಮರೆ ಕಸರತ್ತು ನಡೆಸುತ್ತಿದ್ದಾರೆ. ಜೆಡಿಎಸ್ ನ ಕೆಲವು ಶಾಸಕರು ಮಾಜಿ ಶಾಸಕರು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಕಾದು ನೋಡಿ ಜಿಲ್ಲೆಯಲ್ಲಿ ರಾಜಕೀಯ ದೃವೀಕರಣ ಆಗಲಿದೆ ಎನ್ನುವ ಭಿವಿಷ್ಯವನ್ನು ಕೆ.ಎನ್ ರಾಜಣ್ಣ ನುಡಿದಿದ್ದಾರೆ. 2023ರ ವೇಳೆಗೆ ಜಿಲ್ಲೆಯ ಮತ್ತು ರಾಜ್ಯದ ರಾಜಕಾರಣದಲ್ಲಿ ಯಾವ ರೀತಿ ಬದಲಾವಣೆಆಗುತ್ತವೆ ಎನ್ನುವುದೇಈಗಕು ತೂಹಲವಾಗಿದೆ.
ನಾನು ಮಾನಸಿಕವಾಗಿ ರಾಜಕಾರಣದಲ್ಲಿಯೇ ಇಲ್ಲ. ಇನ್ನು ಎರಡೂವರೆ ವರ್ಷ ನಮ್ಮ ಅಧಿಕಾರವಿದೆ. ಈಗ ನಾನು ಜೆಡಿಎಸ್ ತೊರೆಯುವುದಿಲ್ಲ. ಮುಂದಿನ ನಿರ್ಧಾರ ನಮ್ಮ ಕಾರ್ಯಕರ್ತರ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುವೆ. ಬಿಜೆಪಿ ಜೊತೆ ಹೊಂದಾಣಿಕೆ ನನಗೆ ಇಷ್ಟ ಇಲ್ಲ. ನಾನು ಅಧಿಕಾರಕ್ಕೆ ಆಸೆ ಪಡುವವನಲ್ಲ.
ಬಿಜೆಪಿ ಜೊತೆ ವಿಲೀನ ಇಲ್ಲ. ಹೊಂದಾಣಿಕೆ ನನಗೆ ಏನೂ ಗೊತ್ತಿಲ್ಲ. ನಮ್ಮ ಪಕ್ಷದ ವರಿಷ್ಠರು ಏನು ತೀರ್ಮಾನ ಮಾಡುತ್ತಾರೆ ಅದಕ್ಕೆ ಬದ್ಧ. ಅಂತಹ ಸಂದರ್ಭ ಬಂದರೆ ಕಾರ್ಯಕರ್ತರ ಬೆಂಬಲಿಗರ ಅಭಿಪ್ರಾಯ ಪಡೆದು ಮುಂದಿನ ಅಡಿಯಿಡುತ್ತೇನೆ. – ಸಿ.ಬಿ.ಸುರೇಶ್ ಬಾಬು ಮಾಜಿ ಶಾಸಕ
ನಮ್ಮ ಪಕ್ಷದಿಂದಯಾರೂ ಪಕ್ಷ ಬಿಟ್ಟುಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತಿಲ್ಲ. ಬಿಜೆಪಿ ಜತೆ ವಿಲೀನ ಮತ್ತುಹೊಂದಾಣಿಕೆ ಇಲ್ಲ. ಪಕ್ಷ ಸಂಘಟನೆ ಮಾಡುತ್ತೇವೆ ಎಂದು ನಮ್ಮ ನಾಯಕರಾದಕುಮಾರಣ್ಣ ಅವರೇ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಪಕ್ಷ ಬಲಿಷ್ಠವಾಗಿದೆಯಾರೂ ಪಕ್ಷ ಬಿಡುವುದಿಲ್ಲ. – ಆರ್.ಸಿ.ಆಂಜನಪ್ಪ. ಜೆಡಿಎಸ್ ಜಿಲ್ಲಾಧ್ಯಕ್ಷರು
ರಾಜ್ಯದಲ್ಲಿ ಬಿಜೆಪಿ ಜತೆ ಜೆಡಿಎಸ್ ಹೊಂದಾಣಿಕೆ ಅಥವಾ ವಿಲೀನಕ್ಕೆಸಂಬಂಧಿಸಿದಂತೆಕುಮಾರಸ್ವಾಮಿ ಈಗಾಗಲೇ ಸ್ಪಷ್ಟಪಡಿಸಿದ್ದು, ವರಿಷ್ಠರುಕೈಗೊಳ್ಳುವಯಾವುದೇ ತೀರ್ಮಾನಕ್ಕೆ ನಾನು ಬದ್ಧರಾಗಿರುತ್ತೇನೆ. – ಎಂ.ವಿ.ವೀರಭದ್ರಯ್ಯ,ಮಧುಗಿರಿ ಶಾಸಕ
ಬೇರೆ ಪಕ್ಷ ಸೇರುತ್ತೇನೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ಆ ರೀತಿ ಹೇಳಿಕೆಕೊಡುವಷ್ಟು ಎತ್ತರಕ್ಕೆ ನಾನು ಬೆಳೆದಿಲ್ಲ. ನಮ್ಮ ನಾಯಕರ ತೀರ್ಮಾನಕ್ಕೆ ನಾನುಬದ್ದ. ಜಿಲ್ಲೆಯಲ್ಲಿ ವಾಸಣ್ಣಅವರೂ ನಮ್ಮ ಪಕ್ಷದ ನಾಯಕರ ನಡುವೆ ತೊಂದರೆ ಇದ್ದರೆ ನಾವು ಕುಳಿತು ಬಗೆಹರಿಸಿಕೊಳ್ಳುತ್ತೇವೆ.– ಬಿ.ಎಂ.ಕಾಂತರಾಜ್, ಬೆಮೆಲ್ ವಿಧಾನ ಪರಿಷತ್ ಸದಸ್ಯ
– ಚಿ.ನಿ.ಪುರುಷೋತ್ತಮ್