Advertisement

ಜೆಡಿಎಸ್‌ ನಗರ ದಕ್ಷಿಣ ಮತದಾರ ಕ್ಷೇತ್ರದ ಮಹಿಳಾ ಸಭೆ

02:28 PM Feb 14, 2018 | |

ಮಹಾನಗರ: ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಎಚ್‌. ಡಿ.ಕುಮಾರಸ್ವಾಮಿ ಅವರನ್ನು ಚುನಾಯಿಸಿ ಎಂದು ಜೆಡಿಎಸ್‌ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುಮತಿ ಎಸ್‌. ಹೆಗ್ಡೆ ಕರೆ ನೀಡಿದರು. ಕೋಡಿಕಲ್‌ನಲ್ಲಿ ನಡೆದ ಜೆಡಿಎಸ್‌ ನಗರ ದಕ್ಷಿಣ ಮತದಾರ ಕ್ಷೇತ್ರದ ಮಹಿಳಾ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷವನ್ನು ಗೆಲ್ಲಿಸಿ ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಲು ಸಹಕರಿ ಸಬೇಕು. ಇದಕ್ಕಾಗಿ ಜಿಲ್ಲಾ ಜೆಡಿಎಸ್‌ ಮಹಿಳಾ ಘಟಕ ಪೂರ್ಣ ಪ್ರಮಾಣದಲ್ಲಿ ತಯಾರಾಗಿದ್ದು, ಎಲ್ಲ ಕ್ಷೇತ್ರಗಳಲ್ಲಿ ಪ್ರಾರಂಭಿಕ ಹಂತದ ಸಭೆಯನ್ನು ಪೂರೈಸಿ ಫೆ. 25ರಂದು ಮಂಗಳೂರಿನಲ್ಲಿ ಜಿಲ್ಲಾಮಟ್ಟದ ಮಹಿಳಾ ಸಮಾವೇಶ ನಡೆಸಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿ ತಮ್ಮ ಶಕ್ತಿ ಪ್ರದರ್ಶಿಸಬೇಕು ಎಂದು ಅವರು ಹೇಳಿದರು.

ದಕ್ಷಿಣ ಮತದಾರ ಕ್ಷೇತ್ರದ ಕ್ಷೇತ್ರಾಧ್ಯಕ್ಷೆ ವೀಣಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಭಾರತಿ ಹಾಗೂ ಉಪಕಾರ್ಯದರ್ಶಿ ಲೀಲಾವತಿ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next