Advertisement

ರಾಜ್ಯದಲ್ಲಿ ಜೆಡಿಎಸ್‌-ಬಿಎಸ್ಪಿ ಸರ್ಕಾರ ಅಧಿಕಾರಕ್ಕೆ: ಕಾಂತರಾಜ್‌

11:59 AM Apr 30, 2018 | Team Udayavani |

ಚಿತ್ರದುರ್ಗ: ದಲಿತ ಸಂಘರ್ಷ ಸಮಿತಿಯ (ಎಂ.ಎಸ್‌. ಬಣ) ಕುಂಚಿಗನಹಾಳ್‌ ಮಹಲಿಂಗಪ್ಪ ಹಾಗೂ ಬಾಳೆಕಾಯಿ ಶ್ರೀನಿವಾಸ್‌ ಅಪಾರ ಬೆಂಬಲಿಗರೊಂದಿಗೆ ಭಾನುವಾರ ಜೆಡಿಎಸ್‌ಗೆ ಸೇರ್ಪಡೆಯಾದರು.

Advertisement

ಬಾಳೆಕಾಯಿ ಶ್ರೀನಿವಾಸ್‌ ಮತ್ತು ಕುಂಚಿಗನಾಳ್‌ ಮಹಲಿಂಗಪ್ಪ ಅವರಿಗೆ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಕಾಂತರಾಜ್‌ ಜೆಡಿಎಸ್‌ ಬಾವುಟ ನೀಡಿ ಪಕ್ಷಕ್ಕೆ ಬರ ಮಾಡಿಕೊಂಡರು. ನಂತರ ಮಾತನಾಡಿದ ಕಾಂತರಾಜ್‌, ದಲಿತರು ಮತ್ತು ಮುಸ್ಲಿಮರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದರಿಂದ ಪಕ್ಷಕ್ಕೆ ಆನೆಬಲ ಬಂದಂತಾಗಿದೆ. ಇದೇ ಮೊದಲ ಬಾರಿಗೆ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ನೇತೃತ್ವದ ಬಿಎಸ್ಪಿ ಪಕ್ಷದೊಂದಿಗೆ ಜೆಡಿಎಸ್‌ ಹೊಂದಾಣಿಕೆ ಮಾಡಿಕೊಂಡಿದೆ. ಎರಡು ಪಕ್ಷಗಳು ರಾಜ್ಯದಲ್ಲಿ ಅಧಿಕಾರ ನಡೆಸಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್‌ ಪಕ್ಷದ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟು ಸೇರ್ಪಡೆಯಾಗಿರುವವರ ಗೌರವಕ್ಕೆ ಯಾವುದೇ ಚ್ಯುತಿಯಾಗದಂತೆ ಸೂಕ್ತ ಸ್ಥಾನಮಾನ ನೀಡುತ್ತೇವೆ. ಚುನಾವಣೆಗೆ ಇನ್ನು ಕೇವಲ ಹನ್ನೆರಡು ದಿನ ಇರುವುದರಿಂದ ಇಂದಿನಿಂದಲೇ ಕ್ಷೇತ್ರಾದ್ಯಂತ ಸುತ್ತಾಡಿ ಪಕ್ಷದ ಗೆಲುವಿಗೆ ಶ್ರಮಿಸಬೇಕೆಂದು ಸೂಚಿಸಿದರು. 

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡದೆ ಕಾಲಹರಣ ಮಾಡಿದ ಬಿಜೆಪಿ ಅಭ್ಯರ್ಥಿ ಕ್ಷೇತ್ರದಲ್ಲಿ ಇಲ್ಲಸಲ್ಲದ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದಕ್ಕೆ ಮತದಾರರು ಸೊಪ್ಪು ಹಾಕಬಾರದು. ಐದು ಬಾರಿ ಗೆದ್ದಿರುವ ಶಾಸಕ ತಿಪ್ಪಾರೆಡ್ಡಿ ಈ ಚುನಾವಣೆಯನ್ನು ಮನೆಯಲ್ಲಿಯೇ ಕುಳಿತು ಗೆಲ್ಲುವ ಮಟ್ಟಕ್ಕೆ ಬೆಳೆಯಬಹುದಿತ್ತು. ಆದರೆ ಸೋಲುವ ಭೀತಿ ಅವರನ್ನು ಕಾಡುತ್ತಿರುವುದರಿಂದ ಹುರುಳಿಲ್ಲದ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು. 

ಚುನಾವಣೆಯಲ್ಲಿ ಯಾವುದೇ ಪಕ್ಷದ ಅಭ್ಯರ್ಥಿಗಳು ನನಗೆ ಓಟು ಹಾಕಿ ಎಂದು ಕೇಳುವುದು ವಾಡಿಕೆ. ಆದರೆ ಜಿ.ಎಚ್‌.
ತಿಪ್ಪಾರೆಡ್ಡಿ ಮತದಾರರ ಬಳಿ ಹೋಗಿ ನನಗೆ ಓಟು ಕೊಡಿ ಎಂದು ಕೇಳುವ ಬದಲು ಬಿ.ಎಸ್‌. ಯಡಿಯೂರಪ್ಪ, ಪ್ರಧಾನಿ ಮುಖ ನೋಡಿ ಓಟು ಕೊಡಿ ಎಂದು ಕೇಳುತ್ತಿರುವುದನ್ನು ನೋಡಿದರೆ ಸೋಲಿನ ಭೀತಿ ಅವರನ್ನು ಆವರಿಸಿದೆ. ಇಂತಹ ಗಿಮಿಕ್‌ಗಳಿಗೆ ಯಾರೂ ಕಿವಿಗೊಡಬೇಡಿ. ಚುನಾವಣೆ ಮುಗಿದ ಕೂಡಲೆ ಬಿಜೆಪಿ ಅಭ್ಯರ್ಥಿ ಶಾಶ್ವತವಾಗಿ ರಾಜಕೀಯ ನಿವೃತ್ತಿಯಾಗುವುದು ಖಚಿತ ಎಂದು ವ್ಯಂಗ್ಯವಾಡಿದರು.

Advertisement

ಹೊರಗಿನವರ್ಯಾರು ಎಂದು ತಿಳಿದು ಮಾತನಾಡಲಿ ಹೊರಗಿನವರಿಗೆ ಮತ ನೀಡಬೇಡಿ, ಸ್ಥಳೀಯನಾದ ನನ್ನನ್ನು ಗೆಲ್ಲಿಸಿ ಎಂದು ಮತದಾರರನ್ನು ಬಿಜೆಪಿ ಅಭ್ಯರ್ಥಿ ಬೇಡುತ್ತಿರುವುದನ್ನು ನೋಡಿದರೆ ಹೊರಗಿನವರು ಯಾರು, ಒಳಗಿನವರು ಯಾರು ಎಂಬುದೇ ಗೊತ್ತಾಗುತ್ತಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದ ಜನಾರ್ದನಸ್ವಾಮಿ, ಶ್ರೀರಾಮುಲು, ಗೂಳಿಹಟ್ಟಿ ಶೇಖರ್‌,
ಪೂರ್ಣಿಮಾ ಶ್ರೀನಿವಾಸ್‌ ಎಲ್ಲಿಯವರು ಎಂಬುದನ್ನು ಮೊದಲು ತಿಳಿದುಕೊಂಡು ಬೇರೆಯವರನ್ನು ಟೀಕಿಸಲಿ ಎಂದು ಕಾಂತರಾಜ್‌ ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next