Advertisement

ತವರು ಜಿಲ್ಲೆಯಲ್ಲೇ ಸಿಎಂಗೆ ಭಾರೀ ಮುಖಭಂಗ; JDS, BJP ರಣತಂತ್ರಕ್ಕೆ ಜಯ

12:55 PM Jan 24, 2018 | Team Udayavani |

ಮೈಸೂರು; ಮೈಸೂರು ಮಹಾನಗರ ಪಾಲಿಕೆ ಮತ್ತೆ ಜೆಡಿಎಸ್ ಹಾಗೂ ಬಿಜೆಪಿ ಪಾಲಾಗಿದ್ದು, ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಭಾಗ್ಯವತಿ ಅವರು ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲೇ ಕಾಂಗ್ರೆಸ್ ಗೆ ಭಾರೀ ಮುಖಭಂಗವಾಗಿದೆ.

Advertisement

ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಯ ಕೊನೆಯ ಹೊತ್ತಲ್ಲಿ ನಡೆದ ಭಾರೀ ಹೈಡ್ರಾಮಾದಲ್ಲಿ ಕಾಂಗ್ರೆಸ್ ಮೇಯರ್ ಅಭ್ಯರ್ಥಿ ಭಾಗ್ಯವತಿ ಅವರನ್ನು ಜೆಡಿಎಸ್ ಹೈಜಾಕ್ ಮಾಡಿತ್ತು.

ಕೊನೆ ಗಳಿಗೆಯಲ್ಲಿ ಭಾಗ್ಯವತಿ ಅವರನ್ನು ಮೇಯರ್ ನಮ್ಮ ಅಭ್ಯರ್ಥಿ ಎಂದು ಘೋಷಿಸಿದ್ದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಹೊಯ್ ಕೈ ನಡೆದಿತ್ತು.

ಈ ಸಂದರ್ಭದಲ್ಲಿ ಸಚಿವ ತನ್ವೀರ್ ಸೇಠ್, ಶಾಸಕ ಜಿಟಿ ದೇವೇಗೌಡರ ನಡುವೆ ವಾಕ್ಸಮರ ನಡೆಯಿತು. ಒಂದು ಹಂತದಲ್ಲಿ ಆಕ್ರೋಶಕ್ಕೊಳಗಾದ ತನ್ವೀರ್ ಸೇಠ್ ಹಾಜರಾತಿ ಪುಸ್ತಕವನ್ನು ಹರಿದು ಎಸೆದಿದ್ದರು.

ಈ ಎಲ್ಲಾ ಗದ್ದಲ, ಕೋಲಾಹಲದ ನಡುವೆ ಕಾಂಗ್ರೆಸ್ ಸದಸ್ಯರು ಯಾವುದೇ ಕಾರಣಕ್ಕೂ ಚುನಾವಣೆ ನಡೆಸಬಾರದು ಎಂದು ಚುನಾವಣಾಧಿಕಾರಿಗೆ ತಾಕೀತು ಮಾಡಿದರು. ಚುನಾವಣೆ ನಡೆಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಬೆದರಿಕೆ ಹಾಕಿದ ಪ್ರಸಂಗವೂ ನಡೆಯಿತು. ತದನಂತರ ಚುನಾವಣಾಧಿಕಾರಿ ಅವರು ವಿರೋಧದ ನಡುವೆಯೇ ಚುನಾವಣೆ ನಡೆಸಿದರು.

Advertisement

ಭಾಗ್ಯವತಿಗೆ ಜೆಡಿಎಸ್, ಬಿಜೆಪಿ ಮೈತ್ರಿಕೂಟ ಬೆಂಬಲ;

ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಭಾಗ್ಯವತಿ ಪರ ಜೆಡಿಎಸ್, ಬಿಜೆಪಿ ಸದಸ್ಯರು ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದರು. 

65 ಸದಸ್ಯ ಬಲದ ಮೈಸೂರು ಮಹಾನಗರಪಾಲಿಕೆಯ ಮೇಯರ್ ಚುನಾವಣೆಯಲ್ಲಿ 43 ಮತಗಳಿಂದ ಭಾಗ್ಯವತಿ ಜಯಶಾಲಿಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕಳಸದ್ ಅವರು ಅಧಿಕೃತವಾಗಿ ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next