Advertisement
ಜೀವನಕ್ಕೆ ವಿಶೇಷವಾದ ಅರ್ಥವನ್ನು ನೀಡುವ ಬದುಕು ಕಟ್ಟಿಕೊಳ್ಳಲು ಜೇಸಿ ಆಧಾರಸ್ತಂಭ. ಸತ್ವಯುತವಾದ ಯುವ ಜನಾಂಗದ ಅಭಿವೃದ್ಧಿಗೆ ಈ ಸಂಸ್ಥೆ ಉತ್ಕೃಷ್ಟ ವಾದ ಕಾರ್ಯ ಮಾಡಿದೆ ಎಂದು ನಿತ್ಯಾನಂದ ಮುಂಡೋಡಿ ಹೇಳಿದರು.
ಸಮಾರಂಭದಲ್ಲಿ ನಿರ್ಗಮನ ಅಧ್ಯಕ್ಷೆ ಭಾರತಿ ದಿನೇಶ್ ಅವರು ನೂತನ ಅಧ್ಯಕ್ಷ ಮೋನಪ್ಪಾ ಡಿ. ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಅಧಿಕಾರ ಹಸ್ತಾಂತರಿಸಿದರು. ಬಳಿಕ ನೂತನ ಪದಾಧಿಕಾರಿಗಳಾದ ಹರಿಪ್ರಸಾದ್ ನಾಯರ್ ಮಲ್ಲಾಜೆ, ಶೇಷ ಕುಮಾರ್ ಶೆಟ್ಟಿ, ಯೋಗನಾಥ್ ಎಸ್., ದೀಪಕ್ ನಂಬಿಯಾರ್, ಹರ್ಷಿತ್ ಪಡ್ರೆ, ಪ್ರಕಾಶ್ ಕೆ.ಎಸ್., ರೋಹಿತ್ ಬಿ.ಬಿ., ಜೇಸಿರೆಟ್ ವಿಭಾಗದ ಅಧ್ಯಕ್ಷೆ ಸೌಮ್ಯಾ ಭರತ್ ಹಾಗೂ ಜೂನಿಯರ್ ಜೇಸಿ ಅಧ್ಯಕ್ಷ ದೀಮಂತ್ ಎ.ಎಸ್. ಅಧಿಕಾರ ಸ್ವೀಕರಿಸಿದರು. ಬಳಿಕ ನೂತನ ಸದಸ್ಯರಾಗಿ ಜೇಸಿ ಕುಟುಂಬ ಸೇರಿದ ಆರು ಮಂದಿಗೆ ಪ್ರಮಾಣ ವಚನ ಬೋಧಿಸಲಾಯಿತು. ಪ್ರಾರಂಭದಲ್ಲಿ ನಿರ್ಗಮನ ಅಧ್ಯಕ್ಷೆ ಭಾರತಿ ದಿನೇಶ್ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಸಭಾಧ್ಯಕ್ಷತೆಯನ್ನು ನೂತನ ಅಧ್ಯಕ್ಷ ಮೋನಪ್ಪ ಡಿ. ವಹಿಸಿದ್ದರು. ಭಾರತೀಯ ಜೇಸಿಸ್‌ನ ಪೂರ್ವ ರಾಜ್ಯ ಉಪಾಧ್ಯಕ್ಷ ದಿನಕರ ಗೌಡ, ಭಾರತೀಯ ಜೇಸಿಸ್‌ನ ರಾಷ್ಟ್ರೀಯ ನಾಯಕ ಚಂದ್ರ ಶೇಖರ ನಾಯರ್, ಜೇಸಿಸ್ ವಲಯ ಉಪಾಧ್ಯಕ್ಷ ರವಿ ಕಕ್ಕೆಪದವು, ಜೇಸಿಐ ಸುಬ್ರಹ್ಮಣ್ಯ ಕುಕ್ಕೆಶ್ರೀಯ ಸ್ಥಾಪಕಾಧ್ಯಕ್ಷ ವಿಶ್ವನಾಥ್ ನಡುತೋಟ, ನಿಕಟಪೂರ್ವಾಧ್ಯಕ್ಷ ಮೋಹನದಾಸ ರೈ, ಕಾರ್ಯದರ್ಶಿ ದೀಪಕ್ ನಂಬಿಯಾರ್, ಜೂನಿಯರ್ ಜೇಸಿ ಅಧ್ಯಕ್ಷ ರಘುನಂದನ್ ಶರ್ಮ, ನಿಯೋಜಿತ ಅಧ್ಯಕ್ಷ ಧೀಮಂತ್ ಎ. ಎಸ್. ಉಪಸ್ಥಿತರಿದ್ದರು.
Related Articles
Advertisement
ಸಮ್ಮಾನನಿರ್ಗಮನ ಅಧ್ಯಕ್ಷೆ ಭಾರತಿ ದಿನೇಶ್ ಅವರನ್ನು ಘಟಕದ ವತಿಯಿಂದ ಸಮಾರಂಭದಲ್ಲಿ ಸಮ್ಮಾನಿಸಲಾಯಿತು. ಭಾರತೀ ಯ ಜೇಸಿಸ್‌ನ ರಾಷ್ಟ್ರೀಯ ನಾಯಕ ಚಂದ್ರಶೇಖರ ನಾಯರ್, ನಿಯೋಜಿತ ವಲಯ ಉಪಾಧ್ಯಕ್ಷ ರವಿ ಕಕ್ಕೆಪದವು, ನೂತನವಾಗಿ ಜೇಸಿ ತರಬೇತುದಾರರಾಗಿ ಆಯ್ಕೆಯಾದ ಹರ್ಷಿತ್ ಪಡ್ರೆ ಅವರನ್ನು ಗೌರವಿಸಲಾಯಿತು.