Advertisement

English County; ಮಿಂಚಿದ ಜೈದೇವ್‌ ಉನಾದ್ಕತ್‌, ಜಯಂತ್‌ ಯಾದವ್‌

11:02 PM Sep 14, 2023 | Team Udayavani |

ಲಂಡನ್‌: ಜೈದೇವ್‌ ಉನಾದ್ಕತ್‌ ಮತ್ತು ಸ್ಪಿನ್ನರ್‌ ಜಯಂತ್‌ ಯಾದವ್‌ ಅವರು ಇಂಗ್ಲಿಷ್‌ ಕೌಂಟಿಯ ಚೊಚ್ಚಲ ಪ್ರವೇಶದಲ್ಲಿಯೇ ಐದು ವಿಕೆಟ್‌ಗಳ ಗೊಂಚಲನ್ನು ಪಡೆದು ಗಮನ ಸೆಳೆದಿದ್ದಾರೆ.

Advertisement

ಸಸೆಕ್ಸ್‌ ಕೌಂಟಿ ಪರ ಆಡಿದ ಉನಾದ್ಕತ್‌ ಒಟ್ಟಾರೆ 9 ವಿಕೆಟ್‌ ಕಿತ್ತರು. ಇದರಿಂದ ಸಸೆಕ್ಸ್‌ ತಂಡವು ಡಿವಿಷನ್‌ ಟು ಪಂದ್ಯವೊಂದರಲ್ಲಿ ಲೆಸೆಸ್ಟರ್‌ಶೈರ್‌ ತಂಡದೆದುರು ಕೇವಲ 15 ರನ್ನುಗಳಿಂದ ಜಯ ಸಾಧಿಸಲು ಯಶಸ್ವಿಯಾಯಿತು. ಮೊದಲ ಇನ್ನಿಂಗ್ಸ್‌ನಲ್ಲಿ 23 ರನ್ನಿಗೆ 3 ವಿಕೆಟ್‌ ಪಡೆದಿದ್ದ ಉನಾದ್ಕತ್‌ ದ್ವಿತೀಯ ಇನ್ನಿಂಗ್ಸ್‌ನಲ್ಲಿ 94 ರನ್ನಿಗೆ ಆರು ವಿಕೆಟ್‌ ಕಿತ್ತು ಎದರಾಳಿ ತಂಡದ ಕುಸಿತಕ್ಕೆ ಕಾರಣರಾದರು.

ಸಸೆಕ್ಸ್‌ ತಂಡದ ನಾಯಕರಾಗಿರುವ ಭಾರತದ ಚೇತೇಶ್ವರ್‌ ಪೂಜಾರ ಈ ಪಂದ್ಯದಲ್ಲಿ 26 ಮತ್ತು 23 ರನ್‌ ಗಳಿಸಿದ್ದರು. ಅದ್ಭುತ ಕ್ಯಾಚ್‌ ಪಡೆಯುವ ಮೂಲಕ ಅವರು ಎದುರಾಳಿ ತಂಡದ ರಿಶಿ ಪಟೇಲ್‌ ಅವರನ್ನು ಔಟ್‌ ಮಾಡಿಸಿದ್ದರು.

ಡಿವಿಷನ್‌ ವನ್‌ ಪಂದ್ಯದಲ್ಲಿ ಮಿಡ್ಲ್ಸೆಕ್ಸ್‌ ಪರ ಆಡಿದ ಜಯಂತ್‌ ಯಾದವ್‌ ಅವರು ಐದು ವಿಕೆಟ್‌ ಕಿತ್ತು ಮಿಂಚಿದರು. ಕೆಂಟ್‌ ವಿರುದ್ಧ ಆಡುವ ಮೂಲಕ ಕೌಂಟಿಗೆ ಪದಾರ್ಪಣೆಗೈದ ಯಜುವೇಂದ್ರ ಚಹಲ್‌ ಎರಡೂ ಇನ್ನಿಂಗ್ಸ್‌ಗಳಲ್ಲಿ ಒಟ್ಟಾರೆ ಐದು ವಿಕೆಟ್‌ ಕಿತ್ತು ಗಮನ ಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next