Advertisement

ಜಯಶ್ರೀಕೃಷ್ಣ ಪರಿಸರ ಸಮಿತಿ: ಜಾರ್ಜ್‌ ಫೆರ್ನಾಂಡಿಸ್‌ ಹುಟ್ಟುಹಬ್ಬ 

05:04 PM Jun 24, 2018 | |

ಮುಂಬಯಿ: ಒಂದು ಕಾಲದಲ್ಲಿ ಮಹಾನಗರದಲ್ಲಿ ಕಾರ್ಮಿಕರ ನೇತಾರರಾಗಿ ಬಡವರ ಪರ ಹೋರಾಟ ನಡೆಸಿದ  ಜಾರ್ಜ್‌ ಫೆರ್ನಾಂಡಿಸ್‌ ಅವರು ಇಂದಿನ ಯುವಜನತೆಗೆ ಆದರ್ಶಪ್ರಾಯರಾಗಿದ್ದಾರೆ. ಎಲ್ಲಿಯ ಮಂಗಳೂರು ಎಲ್ಲಿಯ ಬಿಹಾರ ಎಂಬಂತೆ ಬಿಹಾರದ ಸಂಸದರಾಗಿ ಆಯ್ಕೆಯಾದ ಅವರು, ನನೆಗುದಿಗೆ ಬಿದ್ದಿದ್ದ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳನ್ನು ಸಂಪರ್ಕಿಸುವ  ಹಲವಾರು ಮಹತ್ವದ ಯೋಜನೆಗಳನ್ನು ತಾನು ರೈಲ್ವೇ ಸಚಿವರಾಗಿದ್ದ ಸಂದರ್ಭದಲ್ಲಿ ಚಾಲನೆಗೊಳಿಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಮುಂಬಯಿಯ ಹೊಟೇಲ್‌ ಕಾರ್ಮಿಕರ ಪರವಾಗಿ ಹೋರಾಡಿ ನ್ಯಾಯಬದ್ಧವಾಗಿ ನ್ಯಾಯ ಒದಗಿಸಿದ್ದಾರೆ. ದೇಶದ ಎಲ್ಲಾ ಮೂಲೆ ಮೂಲೆಗಳಲ್ಲಿ ಜಾರ್ಜ್‌ ಫೆರ್ನಾಂಡಿಸ್‌ ಅವರ ಹೆಸರು ಇಂದಿಗೂ ರಾರಾಜಿಸಲು ಅವರು ಮಾಡಿದ ದೇಶಸೇವೆ ಮತ್ತು ಸಮಾಜ ಸೇವೆ ಸಾಕ್ಷಿಯಾಗಿದೆ. ಅವರೋರ್ವ ದೇಶದ ಹೆಮ್ಮೆಯ ಪುತ್ರರಾಗಿದ್ದಾರೆ. ಕರಾವಳಿ ಜಿಲ್ಲೆಗೆ ಮಹತ್ತರವಾದ ಕೊಂಕಣ ರೈಲ್ವೇಗೆ ಅಧಿಕ ಮೊತ್ತದ ನೆರವು ಬಂದಾಗ ಪ್ರತೀ ರಾಜ್ಯದಿಂದ ಬಾಂಡ್‌ ತೆರೆದವರು ಅವರಾಗಿದ್ದಾರೆ. ದೇಶದ ಮಹಾನ್‌ ಚೇತನರಾದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಮತ್ತು ಜಾರ್ಜ್‌ ಫೆರ್ನಾಂಡಿಸ್‌ ಅವರು ಪ್ರಸ್ತುತ ಅನಾರೋಗ್ಯದಿಂದಿದ್ದು, ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ದೇವರಲ್ಲಿ  ಪ್ರಾರ್ಥಿಸೋಣ ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಮುಂಬಯಿ ಸಂಸ್ಥಾಪಕಾಧ್ಯಕ್ಷ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಅವರು ನುಡಿದರು.

Advertisement

ಸಾಂತಾಕ್ರೂಜ್‌ ಪೂರ್ವದ ಬಿಲ್ಲವ ಭವನದಲ್ಲಿ ಇತ್ತೀಚೆಗೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ದೇಶದ ಮಾಜಿ ರಕ್ಷಣಾ ಸಚಿವ ಜಾರ್ಜ್‌  ಅವರ 88 ನೇ ಹುಟ್ಟುಹಬ್ಬ ಆಚರಣೆಯ ಸಂದರ್ಭದಲ್ಲಿ ಮಾತನಾಡಿದ ಅವರು,  ಮಂಗಳೂರು-ಬೆಂಗಳೂರು ರೈಲ್ವೇಯ ಬಗ್ಗೆಯೂ ಜಾರ್ಜ್‌ ಫೆರ್ನಾಂಡಿಸ್‌ ಅವರೊಂದಿಗೆ ಪರಿಸರ ಪ್ರೇಮಿ ಸಮಿತಿಯ ಪದಾಧಿಕಾರಿಗಳು ಮಾತನಾಡಿದ್ದರು. ಬಜ್ಪೆ ವಿಮಾನ ನಿಲ್ದಾಣದಲ್ಲಿ ರಾತ್ರಿ ವಿಮಾನ ಲ್ಯಾಂಡಿಂಗ್‌ ಬಗ್ಗೆಯೂ ಜಾರ್ಜ್‌ ಅವರ ಪಾತ್ರ ಮಹತ್ತರವಾಗಿದೆ. ಈ ನಿಟ್ಟಿನಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯು ಕರಾವಳಿ ಜಿಲ್ಲೆಗಳಿಗಾಗಿ ಅವಿಸ್ಮರಣೀಯ ದೇಣಿಗೆ ನೀಡಿದೆ. ನಾಗಾರ್ಜುನ ಯೋಜನೆಯು ಬಂದಾಗ ಎಲ್ಲರೂ ವಿರೋಧಿಸಿದಾಗ ಜಾರ್ಜ್‌ ಫೆರ್ನಾಂಡಿಸ್‌ ಅವರು  ಬಲವಾಗಿ ಯೋಜನೆಯನ್ನು ಸಮರ್ಥಿಸಿಕೊಂಡು ಸಹಕರಿಸಿದ್ದರು. ಬಲಪಂಥೀಯ ಎನ್‌ಡಿಎ ಸರಕಾರದಲ್ಲಿ ಸಮಾಜದವಾದಿ ಸಿದ್ಧಾಂತದ ಜಾರ್ಜ್‌ ಫೆರ್ನಾಂಡಿಸ್‌ ಅವರ ಸಹಕಾರದೊಂದಿಗೆ ಪೂರ್ವ ಸಹಕಾರ ನೀಡಿ ಕರ್ತವ್ಯ ನಿರ್ವಹಿಸಿದ್ದರು. ದೇಶದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಧರ್ಮಗಳಿದ್ದು, ಆ ಧರ್ಮಗಳ ಪ್ರಾರ್ಥನಾ ಮಂದಿರವು ಎಲ್ಲಾ ಕಡೆಗಳಲ್ಲೂ ಸ್ಥಾಪಿಸುವಲ್ಲಿ ಸಹಕರಿಸಿದರು. ಅವರೋರ್ವ ಹುಟ್ಟು ಹೋರಾಟಗಾರರಾಗಿದ್ದು, ತುರ್ತು ಪರಿಸ್ಥಿತಿಯಲ್ಲಿ ಜೈಲಿಗೆ ಹೋಗಿ ಬಂದ ಅವರು 100 ಸಂಸದರಿಗೆ ಸಮಾನವಾಗಿದ್ದರು. ಇವತ್ತು ನಾವು ಉಭಯ ಜಿಲ್ಲೆಯವರು ಸಂತಸವಾಗಿರಲು ಹಲವಾರು ಯೋಜನೆಗಳು ಬರುವಲ್ಲಿ ಜಾರ್ಜ್‌ ಫೆರ್ನಾಂಡಿಸ್‌ ಅವರ ಪಾತ್ರ ಮಹತ್ತರವಾಗಿದೆ ಎಂದು ನುಡಿದು ಅವರಿಗೆ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷ ಧರ್ಮಪಾಲ್‌ ಯು. ದೇವಾಡಿಗ ಹಾಗೂ ಇತರ ಪದಾಧಿಕಾರಿಗಳು, ಸಮಿತಿಯ ಸದಸ್ಯರು, ಜಾರ್ಜ್‌ ಫೆರ್ನಾಂಡಿಸ್‌ ಅವರ ಸಿದ್ಧಿ-ಸಾಧನೆಗಳನ್ನು ವಿವರಿಸಿದರು. ಸಮಿತಿಯ ಗೌರವ ಕಾರ್ಯದರ್ಶಿ ಚಂದ್ರಶೇಖರ್‌ ಬೆಳ್ಚಡ ಮಾಜಿ ಅಧ್ಯಕ್ಷರುಗಳಾದ ಹರೀಶ್‌ ಕುಮಾರ್‌ ಶೆಟ್ಟಿ, ವಿಶ್ವನಾಥ ಮಾಡಾ, ಬಿಲ್ಲವರ ಅಸೋಸಿಯೇಶನ್‌ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌, ಅಸೋಸಿಯೇಶನ್‌ನ ನಿಕಟಪೂರ್ವ ಅಧ್ಯಕ್ಷ ರಾಜಕೀಯ ಧುರೀಣ ಎಲ್‌. ವಿ. ಅಮೀನ್‌, ಬಂಟರ ಸಂಘದ ಪಶ್ಚಿಮ ವಿಭಾಗ ಪ್ರಾದೇಶಿಕ ಸಮಿತಿಗಳ ಸಮನ್ವಯಕ ಡಾ| ಪ್ರಭಾಕರ ಶೆಟ್ಟಿ, ತೀಯಾ ಸಮಾಜದ ಗೌರವಾಧ್ಯಕ್ಷ ರೋಹಿದಾಸ್‌ ಬಂಗೇರ, ಗಾಣಿಗ ಸಂಘದ ಅಧ್ಯಕ್ಷ ರಾಮಚಂದ್ರ ಗಾಣಿಗ, ಜೈನ ಸಂಘದ ಅಧ್ಯಕ್ಷ ಮುನಿರಾಜ್‌ ಜೈನ್‌, ಪರಿಸರ ಪ್ರೇಮಿ ಸಮಿತಿಯ ಸ್ಥಾಪಕ ಸದಸ್ಯ ಪಿ. ಡಿ. ಶೆಟ್ಟಿ, ರಂಜನಿ ದೇವಾಡಿಗ, ವಿದ್ಯಾದಾಯಿನಿ ಸಭಾ ಮುಂಬಯಿ ಗೌರವ ಪ್ರಧಾನ ಕಾರ್ಯದರ್ಶಿ ಚಿತ್ರಾಪು ಕೆ. ಎಂ. ಕೋಟ್ಯಾನ್‌, ದೇವಾಡಿಗ ಸಂಘದ ಅಧ್ಯಕ್ಷ ರವಿ ದೇವಾಡಿಗ, ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್‌ ಮಾಜಿ ಅಧ್ಯಕ್ಷ ಜಿ. ಟಿ. ಆಚಾರ್ಯ, ದೇವಾಡಿಗ ಸಂಘದ ಮಾಜಿ ಅಧ್ಯಕ್ಷರುಗಳಾದ ವಾಸು ದೇವಾಡಿಗ, ಹಿರಿಯಡ್ಕ ಮೋಹನ್‌ದಾಸ್‌, ಬಂಟ್ಸ್‌ ಫೋರಂ ಮೀರಾ-ಭಾಯಂದರ್‌ ಗೌರವಾಧ್ಯಕ್ಷ ಸಂತೋಷ್‌ ರೈ ಬೆಳ್ಳಿಪಾಡಿ, ಜಯಕೃಷ್ಣ ಪರಿಸರ ಪ್ರೇಮಿ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಫೆಲಿಕ್ಸ್‌ ಡಿ’ಸೋಜಾ, ಕೊಂಕಣಿ ವೆಲ್ಫೆàರ್‌ ಅಸೋಸಿಯೇಶನ್‌ ಅಧ್ಯಕ್ಷ ಹ್ಯಾರಿ ಸಿಕ್ವೇರಾ, ಮಾಲತಿ ಜೆ. ಮೊಲಿ, ಸುರೇಖಾ ಎಚ್‌. ದೇವಾಡಿಗ, ಹೇಮಂತ್‌ ದೇವಾಡಿಗ ಮೊದಲಾದವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

 ಚಿತ್ರ : ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next