Advertisement

ಜಯಾ ಪುತ್ರಿ: ದಾವೆ ತಿರಸ್ಕರಿಸಿದ ಸುಪ್ರೀಂ

06:15 AM Nov 28, 2017 | Team Udayavani |

ಹೊಸದಿಲ್ಲಿ: ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಪುತ್ರಿ ಎಂದು ಹೇಳಿಕೊಂಡಿದ್ದ ಬೆಂಗಳೂರಿನ ಅಮೃತಾ ಅವರ ದೂರನ್ನು ಪುರಸ್ಕರಿಸಲು ಸುಪ್ರೀಂಕೋರ್ಟ್‌ ನಿರಾಕರಿಸಿದೆ. ಆಕೆಯೇ ತನ್ನ ತಾಯಿ ಎಂಬುದನ್ನು ಸಾಬೀತುಪಡಿಸಲು ಡಿಎನ್‌ಎ ಪರೀಕ್ಷೆಗೆ ಅವಕಾಶ ಮಾಡಿಕೊಡಬೇಕು ಎಂದು ಅಮೃತಾ ಮನವಿ ಮಾಡಿದ್ದರು. ಈ ದೂರಿನ ವಿಚಾರಣೆ ನಡೆಸಲು ನ್ಯಾಯಮೂರ್ತಿಗಳಾದ ಎಂ.ಬಿ.ಲೋಕೂರ್‌ ಮತ್ತು ದೀಪಕ್‌ ಗುಪ್ತಾ ತಿರಸ್ಕರಿಸಿದ್ದಾರೆ. ಜಯಲಲಿತಾ ಅಯ್ಯಂಗಾರ್‌ ಬ್ರಾಹ್ಮಣ ವಂಶಸ್ಥರಾಗಿದ್ದು, ಈ ಸಮುದಾಯದ ರೂಢಿಗೆ ಅನುಗುಣವಾಗಿಯೇ ಜಯಾ ಉತ್ತರ ಕ್ರಿಯೆಗಳನ್ನು ನಡೆಸಬೇಕೆಂದು ಅಮೃತಾ ಪರ ವಕೀಲ ಇಂದಿಯಾ ಜೈಸಿಂಗ್‌ ಕೋರ್ಟ್‌ಗೆ ಮನವಿ ಮಾಡಿದರು.

Advertisement

ಈಗಾಗಲೇ ಹಲವು ಬಾರಿ ಮಾಧ್ಯಮ ಗಳಲ್ಲಿ ಕಾಣಿಸಿಕೊಂಡಿದ್ದ ಅಮೃತಾ, ಜಯಲಲಿತಾ ಮರಣಾನಂತರ ತಾನೇ ಅವರ ಪುತ್ರಿ ಎಂದು ಹೇಳಿಕೊಂಡಿದ್ದರು. ಜಯ ಲಲಿತಾ ಅವರ ಸೋದರಿ ಎಂದು ಹೇಳಿ ಕೊಂಡಿದ್ದ ಶೈಲಜಾ ಜತೆ ತನ್ನನ್ನು ಬೆಳೆಸಲಾ ಯಿತು ಎಂದು ಅಮೃತಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next